ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣ ಹೊರಹಾಕುತ್ತದೆ ಬೆಳ್ಳುಳ್ಳಿ!

Health Care Tips: ಇಂದು ನಾವು ಕೊಲೆಸ್ಟ್ರಾಲ್ (Bad Cholesterol) ಅನ್ನು ಕಡಿಮೆ ಮಾಡಲು ಬೆಳ್ಳುಳ್ಳಿಯನ್ನು ಯಾವ ರೀತಿ ಬಳಸಬೇಕು ಎಂಬುದರ ಮಾಹಿತಿಯನ್ನು ನಿಮಗೆ ನೀಡುತ್ತಿದ್ದೇವೆ, ತನ್ಮೂಲಕ ನೀವು ಮಧುಮೇಹ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು, ಆದ್ದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬೆಳ್ಳುಳ್ಳಿಯನ್ನು (Health Care Tips) ಹೇಗೆ ಸೇವಿಸಬೇಕು ತಿಳಿದುಕೊಳ್ಳೋಣ ಬನ್ನಿ,   

Written by - Nitin Tabib | Last Updated : Jul 12, 2023, 06:27 PM IST
  • ನೀವು ಬೆಳ್ಳುಳ್ಳಿ ಎಣ್ಣೆಯನ್ನು ನಿಮ್ಮ ಸಾಮಾನ್ಯ ಅಡುಗೆ ಎಣ್ಣೆಯೊಂದಿಗೆ ಬದಲಿಸಿದರೆ ಮತ್ತು ತರಕಾರಿಗಳು, ಪರಾಟಾಗಳು ಅಥವಾ ಸಲಾಡ್‌ಗಳನ್ನು ತಯಾರಿಸಿ ಸೇವಿಸಿದರೆ,
  • ಅದು ತೂಕವನ್ನು ಕಡಿಮೆ ಮಾಡಲು ಮತ್ತು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
  • ಆದರೆ ಈ ಎಣ್ಣೆಯ ಅತಿಯಾದ ಸೇವನೆಯು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂಬುದನ್ನು ಕೂಡ ನೆನಪಿನಲ್ಲಿಡಿ.
ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣ ಹೊರಹಾಕುತ್ತದೆ ಬೆಳ್ಳುಳ್ಳಿ! title=

ಬೆಂಗಳೂರು: ಬೆಳ್ಳುಳ್ಳಿಯು ಆಯುರ್ವೇದ ಗಿಡ ಮೂಲಿಕೆ ಎಂದು ಹೆಸರು ಪಡೆದಿರುವ ಒಂದು ರೀತಿಯ ಹರ್ಬ್ ಆಗಿದೆ. ಆಹಾರದ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ ಬೆಳ್ಳುಳ್ಳಿ ನಿಮ್ಮ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ. ಇದರೊಂದಿಗೆ ಬೆಳ್ಳುಳ್ಳಿ ಸೇವನೆಯು ಅಧಿಕ ರಕ್ತದ ಸಕ್ಕರೆಯನ್ನು ಸಹ ನಾವು ನಿಯಂತ್ರಣದಲ್ಲಿರಬಹುದು. ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಂಯುಕ್ತವಿದ್ದು, ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬೆಳ್ಳುಳ್ಳಿಯನ್ನು ಸೇವಿಸುವ ವಿವಿಧ ಮಾರ್ಗಗಳು ಯಾವುವು ಎಂಬುದನ್ನು ನಿಮಗೆ ಹೇಳಳಿದ್ದೇವೆ, ತನ್ಮೂಲಕ ನೀವು ಮಧುಮೇಹ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು, ಬನ್ನಿ ಹಾಗಾದರೇ (Health Tips) ಬೆಳ್ಳುಳ್ಳಿಯನ್ನು ಹೇಗೆ ಬಳಸಬೇಕು ತಿದಿಲುಕೊಳ್ಳೋಣ.

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ಸೇವನೆ
ಬೆಳ್ಳುಳ್ಳಿ ಮತ್ತು ನೀರು

ಇದಕ್ಕಾಗಿ, 1 ಕುಡಿ ಹಸಿ ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಮತ್ತು ಅದನ್ನು 1 ಗ್ಲಾಸ್ ನೀರಿನಲ್ಲಿ ಬೆರೆಸಿ ಪ್ರತಿದಿನ ಬೆಳಗ್ಗೆ ಸೇವಿಸಿ. ಇದರಿಂದ, ನಿಮ್ಮ ದೇಹದಲ್ಲಿ ಸಂಗ್ರಹವಾದ ಕೆಟ್ಟ ಕೊಲೆಸ್ಟ್ರಾಲ್ ಸುಲಭವಾಗಿ ಹೊರಬರಲು ಪ್ರಾರಂಭಿಸುತ್ತದೆ.

ಜೇನುತುಪ್ಪ ಮತ್ತು ಬೆಳ್ಳುಳ್ಳಿ
1 ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು 4-5 ತುಂಡುಗಳಾಗಿ ಕತ್ತರಿಸಿ. ನಂತರ ನೀವು ಈ ತುಂಡುಗಳಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ. ನೀವು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಮಿಶ್ರಣವನ್ನು ಸೇವಿಸಿ. ಇದು ಅಸಿಡಿಟಿ ಸಮಸ್ಯೆಯನ್ನು ಹೋಗಲಾಡಿಸುವ ಜೊತೆಗೆ ತೂಕ ಇಳಿಕೆಗೂ ನೆರವಾಗುತ್ತದೆ.

ಬೆಳ್ಳುಳ್ಳಿಯನ್ನು ಹುರಿದು ತಿನ್ನಿರಿ
ಹುರಿದ ಮತ್ತು ಒಣ ಬೆಳ್ಳುಳ್ಳಿಯನ್ನು ನೀವು ಸೇವಿಸಿದರೆ , ಅದು ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹುರಿದ ಬೆಳ್ಳುಳ್ಳಿ ರುಚಿಕರವಾಗಿರುವುದರ ಜೊತೆಗೆ ಶೀತ ಮತ್ತು ಕೆಮ್ಮಿನಲ್ಲೂ ಪರಿಹಾರ ನೀಡುತ್ತದೆ.

ಇದನ್ನೂ ಓದಿ-ನೀವೂ ಕೂಡ ಹಲಸಿನ ಬೀಜಗಳನ್ನು ಡಸ್ಟ್ ಬಿನ್ ಗೆ ಎಸೆಯುತ್ತಿರಾ? ಈ ಲೇಖನವನ್ನೊಮ್ಮೆ ಓದಿ!

ಬೆಳ್ಳುಳ್ಳಿ ಎಣ್ಣೆ
ನೀವು ಬೆಳ್ಳುಳ್ಳಿ ಎಣ್ಣೆಯನ್ನು ನಿಮ್ಮ ಸಾಮಾನ್ಯ ಅಡುಗೆ ಎಣ್ಣೆಯೊಂದಿಗೆ ಬದಲಿಸಿದರೆ ಮತ್ತು ತರಕಾರಿಗಳು, ಪರಾಟಾಗಳು ಅಥವಾ ಸಲಾಡ್‌ಗಳನ್ನು ತಯಾರಿಸಿ ಸೇವಿಸಿದರೆ, ಅದು ತೂಕವನ್ನು ಕಡಿಮೆ ಮಾಡಲು ಮತ್ತು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ ಈ ಎಣ್ಣೆಯ ಅತಿಯಾದ ಸೇವನೆಯು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂಬುದನ್ನು ಕೂಡ ನೆನಪಿನಲ್ಲಿಡಿ.

ಇದನ್ನೂ ಓದಿ-ನೀವೂ ನಿಮ್ಮ ಕೂದಲಿಗೆ ಬಣ್ಣ ಹಚ್ಚುತ್ತೀರಾ? ಈ ಸಲಹೆ ಅನುಸರಿಸಿ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News