Workout Tips: ವ್ಯಾಯಾಮದ ನಂತರ Cold Water ಕುಡಿಯುವುದು ಸರಿಯೋ? ತಪ್ಪೋ?

Workout Tips: ಈ ಬೇಸಿಗೆಯಲ್ಲಿ ಜನರು ಕೋಲ್ಡ್‌ ವಾಟರ್ ಕುಡಿಯಲು ಇಷ್ಟಪಡುತ್ತಾರೆ. ಆದರೆ ವರ್ಕೌಟ್‌ ನಂತರವೂ ಕೋಲ್ಡ್‌ ವಾಟರ್ ಕುಡಿಯಬೇಕೇ?‌ ಬೇಡವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ.

Written by - Chetana Devarmani | Last Updated : May 25, 2022, 06:17 PM IST
  • ಈ ಬೇಸಿಗೆಯಲ್ಲಿ ಜನರು ಕೋಲ್ಡ್‌ ವಾಟರ್‌ ಕುಡಿಯಲು ಇಷ್ಟಪಡುತ್ತಾರೆ
  • ಕೋಲ್ಡ್‌ ವಾಟರ್‌ ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ರಿಲೀಫ್ ಸಿಗುತ್ತದೆ
  • ವ್ಯಾಯಾಮದ ನಂತರ Cold Water ಕುಡಿಯುವುದು ಸರಿಯೋ? ತಪ್ಪೋ?
Workout Tips: ವ್ಯಾಯಾಮದ ನಂತರ Cold Water ಕುಡಿಯುವುದು ಸರಿಯೋ? ತಪ್ಪೋ?  title=
ವ್ಯಾಯಾಮ

Workout Tips: ಈ ಬೇಸಿಗೆಯಲ್ಲಿ ಜನರು ಕೋಲ್ಡ್‌ ವಾಟರ್‌ ಕುಡಿಯಲು ಇಷ್ಟಪಡುತ್ತಾರೆ. ಕೋಲ್ಡ್‌ ವಾಟರ್‌ ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ರಿಲೀಫ್ ಸಿಗುತ್ತದೆ. ಆದರೆ ವರ್ಕೌಟ್‌ ನಂತರವೂ ಕೋಲ್ಡ್‌ ವಾಟರ್‌ ಕುಡಿಯಬೇಕೋ? ಬೇಡವೋ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ನಮ್ಮ ದೇಹಕ್ಕೆ ಆರೋಗ್ಯಕರವೇ ಅಥವಾ ಇಲ್ಲವೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನಾವು ನಿಮಗೆ ಹೇಳಲಿದ್ದೇವೆ.

ಇದನ್ನೂ ಓದಿ: Texas school shooting: ಸಾವಿನ ಸಂಖ್ಯೆ 21 ಕ್ಕೆ ಏರಿಕೆ, ಶೋಕಾಚರಣೆಗೆ ಬೈಡನ್ ಸೂಚನೆ

ವರ್ಕೌಟ್‌ ನಂತರ ಕೋಲ್ಡ್‌ ವಾಟರ್ ಸೇವನೆಯು ದೇಹಕ್ಕೆ ಹಾನಿಕಾರಕವಾಗಿದೆ. ವ್ಯಾಯಾಮದ ನಂತರ ನಿಮ್ಮ ದೇಹದ ಉಷ್ಣಾಂಶ ಹೆಚ್ಚಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ತಣ್ಣೀರನ್ನು ಸೇವಿಸಿದಾಗ, ಅದು ನಿಮ್ಮ ದೇಹದ ಉಷ್ಣತೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ. ನಿಮ್ಮ ವ್ಯಾಯಾಮದ ಕಠಿಣ ಪರಿಶ್ರಮವು ಸಂಪೂರ್ಣವಾಗಿ ಹಾಳಾಗಬಹುದು. ಆದ ಕಾರಣ ವರ್ಕೌಟ್‌ ಬಳಿಕ ಯಾವಾಗಲೂ ನಾರ್ಮಲ್‌ ನೀರನ್ನು ಕುಡಿಯಿರಿ. ಇದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ.  

ತೂಕ ಹೆಚ್ಚಾಗುವ ಸಾಧ್ಯತೆಗಳು: ವ್ಯಾಯಾಮದ ನಂತರ ನೀವು ಕೋಲ್ಡ್‌ ವಾಟರ್‌ ಕುಡಿಯುತ್ತಿದ್ದರೆ, ನಿಮ್ಮ ತೂಕವೂ ಹೆಚ್ಚಾಗುತ್ತದೆ. ಅದರಲ್ಲೂ ಹೊಟ್ಟೆಯ ಕೊಬ್ಬು ಹೆಚ್ಚಾಗುವ ಸಾಧ್ಯತೆಗಳು ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ, ನೀವು ವ್ಯಾಯಾಮದ ಮೂಲಕ ತೂಕ ಇಳಿಸಿಕೊಳ್ಳಲು ಯೋಚಿಸುತ್ತಿದ್ದರೆ, ನಂತರ ಕೋಲ್ಡ್‌ ವಾಟರ್‌ ಸೇವಿಸಬೇಡಿ. ಅದಕ್ಕಾಗಿಯೇ ವರ್ಕೌಟ್‌ ಮುಗಿದ ತಕ್ಷಣ ಕೋಲ್ಡ್‌ ವಾಟರ್‌ ಕುಡಿಯುವುದು ಹಾನಿಕಾರಕ.

ಹೃದಯ ಬಡಿತದ ಮೇಲೆ ಪರಿಣಾಮ: ವ್ಯಾಯಾಮದ ನಂತರ ಕೋಲ್ಡ್‌ ವಾಟರ್‌ ಸೇವನೆಯು ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ. ವರ್ಕೌಟ್‌ ಸಮಯದಲ್ಲಿ, ನಿಮ್ಮ ರಕ್ತನಾಳಗಳಲ್ಲಿ ತ್ವರಿತ ರಕ್ತ ಪರಿಚಲನೆ ಇರುತ್ತದೆ. ಕೋಲ್ಡ್‌ ವಾಟರ್‌ ಹಠಾತ್ ಸೇವನೆಯಿಂದಾಗಿ, ಇದು ನಿಮ್ಮ ರಕ್ತನಾಳಗಳನ್ನು ತ್ವರಿತವಾಗಿ ತಂಪಾಗಿಸುತ್ತದೆ. ಈ ಸಂದರ್ಭದಲ್ಲಿ, ಹೃದಯ ಬಡಿತ ಮತ್ತು ರಕ್ತ ಪರಿಚಲನೆ ನಿಧಾನವಾಗುತ್ತದೆ. ಕೆಲವೊಮ್ಮೆ ಈ ಸ್ಥಿತಿಯು ಗಂಭೀರವಾಗಬಹುದು. 

ಇದನ್ನೂ ಓದಿ: Yuck! Cold Drinkನಲ್ಲಿ ಹಲ್ಲಿ ಪತ್ತೆ, ವಿಡಿಯೋ ವೈರಲ್!

ತಲೆನೋವು: ವ್ಯಾಯಾಮದ ನಂತರ ನೀವು ಕೋಲ್ಡ್‌ ವಾರ್‌ ಕುಡಿದರೆ, ತಲೆನೋವು ಮತ್ತು ಸೈನಸ್ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ನೀವು ಐಸ್ ಕ್ಯೂಬ್‌ಗಳೊಂದಿಗೆ ನೀರನ್ನು ಕುಡಿಯುತ್ತಿದ್ದರೆ, ಅದು ಸೂಕ್ಷ್ಮ ನರಗಳನ್ನು ತಂಪಾಗಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ತಲೆನೋವಿನ ಸಮಸ್ಯೆ ಹೆಚ್ಚಾಗಬಹುದು.

(Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News