Yuck! Cold Drinkನಲ್ಲಿ ಹಲ್ಲಿ ಪತ್ತೆ, ವಿಡಿಯೋ ವೈರಲ್!

Video Viral: ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಮೆಕ್‌ಡೊನಾಲ್ಡ್‌ನ ಔಟ್‌ಲೆಟ್ ಗ್ರಾಹಕರೊಬ್ಬರು ತಾವು ಖರೀದಿಸಿದ ತಂಪು ಪಾನೀಯದಲ್ಲಿ ಹಲ್ಲಿ ತೇಲುತ್ತಿರುವ ಬಗ್ಗೆ ದೂರಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Written by - Chetana Devarmani | Last Updated : May 25, 2022, 05:05 PM IST
  • ಗುಜರಾತ್‌ನ ಅಹಮದಾಬಾದ್‌ನ ಮೆಕ್‌ಡೊನಾಲ್ಡ್‌ನ ಔಟ್‌ಲೆಟ್‌
  • ತಂಪು ಪಾನೀಯದಲ್ಲಿ ಸತ್ತ ಹಲ್ಲಿ ಪತ್ತೆ
  • ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್‌
Yuck! Cold Drinkನಲ್ಲಿ ಹಲ್ಲಿ ಪತ್ತೆ, ವಿಡಿಯೋ ವೈರಲ್!  title=
ಸತ್ತ ಹಲ್ಲಿ ಪತ್ತೆ

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ಮೆಕ್‌ಡೊನಾಲ್ಡ್‌ನ ಔಟ್‌ಲೆಟ್‌ನಲ್ಲಿ ಗ್ರಾಹಕರೊಬ್ಬರು ತಮ್ಮ ತಂಪು ಪಾನೀಯದಲ್ಲಿ ಹಲ್ಲಿ ತೇಲುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಭಾರ್ಗವ್ ಜೋಶಿ ಎಂಬ ಗ್ರಾಹಕರು ಖರೀದಿಸಿದ ತಂಪು ಪಾನೀಯದಲ್ಲಿ ಹಲ್ಲಿ ದೊರೆತಿರುವ ಘಟನೆ ಶನಿವಾರ ನಡೆದಿದೆ. ಅಹಮದಾಬಾದ್‌ನಲ್ಲಿರುವ ಮೆಕ್‌ಡೊನಾಲ್ಡ್‌ನ ಔಟ್‌ಲೆಟ್‌ನಲ್ಲಿ ತಂಪು ಪಾನೀಯದಲ್ಲಿ ಸತ್ತ ಹಲ್ಲಿ ಸಿಕ್ಕಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಗ್ರಾಹಕರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಗ್ರಾಹಕ ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ಆರೋಪಿಸಿದ್ದಾರೆ. ನಾಲ್ಕು ಗಂಟೆಗಳ ಕಾಲ ಔಟಲೆಟ್‌ನಲ್ಲಿ ಯಾರಾದರೂ ತಮ್ಮ ದೂರು ಕೇಳುತ್ತಾರಾ ಎಂದು ಗ್ರಾಹಕರು ಕಾಯುತ್ತಿದ್ದರಂತೆ. ಆದರೆ ಅಲ್ಲಿನ ಸಿಬ್ಬಂದಿ ಅವರಿಗೆ ಕೇವಲ 300 ರೂ. ಮರುಪಾವತಿಯನ್ನು ಮಾತ್ರ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ: "ವೀರ ಕಂಬಳ" ಚಿತ್ರಕ್ಕೆ ಕಥೆಯೇ ಹೀರೋ... ಸಿಹಿ ಸುದ್ದಿ ಕೊಟ್ಟ ರಾಜೇಂದ್ರ ಸಿಂಗ್ ಬಾಬು!

ವಿಡಿಯೋವನ್ನು ಇಲ್ಲಿ ವೀಕ್ಷಿಸಿ:

ವರದಿಯ ಪ್ರಕಾರ, ಗ್ರಾಹಕರು ಎಎಂಸಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಅವರ ದೂರಿನ ಆಧಾರದ ಮೇಲೆ, ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಮ್‌ಸಿ) ಕ್ರಮ ಕೈಗೊಂಡಿದ್ದು, ಔಟ್‌ಲೆಟ್ ಅನ್ನು ಸೀಲ್ ಮಾಡಿದೆ. ನಗರದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ಪರೀಕ್ಷಿಸಲು ಮಹಾನಗರ ಪಾಲಿಕೆಯ ಆಹಾರ ಸುರಕ್ಷತಾ ಅಧಿಕಾರಿಯಿಂದ ತಂಪು ಪಾನೀಯದ ಮಾದರಿಗಳನ್ನು ಔಟಲೆಟ್‌ನಿಂದ ಸಂಗ್ರಹಿಸಲಾಗಿದೆ. ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅನುಮತಿಯಿಲ್ಲದೆ ಔಟ್ಲೆಟ್ ಅನ್ನು ಪುನಃ ತೆರೆಯಲು ಅನುಮತಿಸಲಾಗುವುದಿಲ್ಲ.  ಸೀಲ್‌ ಮಾಡಿದ ಮಳಿಗೆಯ ಚಿತ್ರವನ್ನು ಜೋಶಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

 

 

ಏತನ್ಮಧ್ಯೆ, McDonald's ವರದಿಯ ಹೇಳಿಕೆಯಲ್ಲಿ, "McDonald's ನಲ್ಲಿ, ನಮ್ಮ ಎಲ್ಲಾ ಗ್ರಾಹಕರ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಗುಣಮಟ್ಟ, ಸೇವೆ, ಶುಚಿತ್ವ ಮತ್ತು ಮೌಲ್ಯವು ನಮ್ಮ ವ್ಯಾಪಾರ ಕಾರ್ಯಾಚರಣೆಗಳ ಭಾಗವಾಗಿದೆ. ಇದಲ್ಲದೆ, ನಮ್ಮ ಗೋಲ್ಡನ್ ಗ್ಯಾರಂಟಿ ಕಾರ್ಯಕ್ರಮದ ಭಾಗವಾಗಿ, ನಮ್ಮ ಎಲ್ಲಾ ಮೆಕ್‌ಡೊನಾಲ್ಡ್ಸ್ ರೆಸ್ಟೋರೆಂಟ್‌ಗಳಲ್ಲಿ ನಾವು 42 ಕಟ್ಟುನಿಟ್ಟಾದ ಸುರಕ್ಷತೆ ಮತ್ತು ನೈರ್ಮಲ್ಯ ಪ್ರೋಟೋಕಾಲ್‌ಗಳನ್ನು ಜಾರಿಗೆ ತಂದಿದ್ದೇವೆ. ಅಹಮದಾಬಾದ್ ಔಟಲೆಟ್‌ನಲ್ಲಿ ನಡೆದಿದೆ ಎನ್ನಲಾದ ಈ ಘಟನೆಯನ್ನು ನಾವು ಪರಿಶೀಲಿಸುತ್ತಿದ್ದೇವೆ. ನಾವು ಪದೇ ಪದೇ ಪರಿಶೀಲಿಸಿದಾಗ ಮತ್ತು ಯಾವುದೇ ತಪ್ಪು ಕಂಡುಬಂದಿಲ್ಲ, ನಾವು ಉತ್ತಮ ಕಾರ್ಪೊರೇಟ್ ನಾಗರಿಕರಾಗಿ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದೇವೆ" ಎಂದು ಹೇಳಲಾಗಿದೆ. 

ಇದನ್ನೂ ಓದಿ: 1000 ರೂ.ಗಿಂತ ಕಡಿಮೆ ಮೌಲ್ಯದ ವಾಟರ್‌ಪ್ರೂಫ್ ಇಯರ್‌ಬಡ್‌.. ನಿಮಿಷದಲ್ಲೇ ಚಾರ್ಜ್ ಆಗುತ್ತೆ!!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News