ಕೇವಲ 24 ಗಂಟೆಗಳಲ್ಲಿ ದೂರಾಗುತ್ತದೆ ಐ ಫ್ಲೂ! ಕಣ್ಣಿನ ಸೊಂಕನ್ನು ಈ 2 ವಿಧಾನಗಳಿಂದ ಸರಿಪಡಿಸಿ!

Eye Flu Treatment: ಕಣ್ಣಿನ ಜ್ವರ ಅಥವಾ ಕಾಂಜಂಕ್ಟಿವಿಟಿಸ್‌ ಅನ್ನು24 ಗಂಟೆಗಳ ಒಳಗೆ ಗುಣಪಡಿಸಬಹುದು, ಆದರೆ ಆತಂಕದಲ್ಲಿ ಮತ್ತು ಸೊಂಕನ್ನು ಗುಣಪಡಿಸುವ ಜ್ಞಾನದ ಕೊರತೆಯಿಂದಾಗಿ ನಾವು  ಕೆಲವು ತಪ್ಪುಗಳನ್ನು ಮಾಡಿ ಬಿಡುತ್ತೇವೆ ಮತ್ತು ಸೋಂಕು ಕಡಿಮೆಯಾಗುವ ಬದಲು ಹೆಚ್ಚಾಗಳು ಶುರುವಾಗುತ್ತದೆ (Health News In Kannada).   

Written by - Nitin Tabib | Last Updated : Aug 8, 2023, 05:33 PM IST
  • ಕಣ್ಣಿನ ಜ್ವರ ಬಂದಾಗ, ಕಣ್ಣುಗಳು ಕೆಂಪಾಗುತ್ತವೆ ಮತ್ತು ನೋವು, ಚುಚ್ಚುವಿಕೆಯ ಜೊತೆಗೆ ಕಣ್ಣಿನಿಂದ ನೀರು ಬರಲು ಪ್ರಾರಂಭಿಸುತ್ತದೆ.
  • ಅನೇಕ ಬಾರಿ ಕಣ್ಣಿನಿಂದ ಹೆಚ್ಚು ಜಿಗುಟಾದ ಪದಾರ್ಥ ಬರಲು ಪ್ರಾರಂಭಿಸುತ್ತದೆ.
  • ಕೆಲವೊಮ್ಮೆ ಕಣ್ಣುಗಳು ಊದಿಕೊಳ್ಳುತ್ತವೆ. ಇದು ಸಾಮಾನ್ಯವಾಗಿ 1 ವಾರದವರೆಗೆ ಇರುತ್ತದೆ.
ಕೇವಲ 24 ಗಂಟೆಗಳಲ್ಲಿ ದೂರಾಗುತ್ತದೆ ಐ ಫ್ಲೂ! ಕಣ್ಣಿನ ಸೊಂಕನ್ನು ಈ 2 ವಿಧಾನಗಳಿಂದ ಸರಿಪಡಿಸಿ! title=

ನವದೆಹಲಿ: ಕಣ್ಣಿನ ಜ್ವರವು ಕರೋನಾದಂತೆ ಭಾರಿ ಹಾನಿಯನ್ನುಂಟು ಮಾಡುತ್ತಿದೆ.  ಆದರೆ ಇದು ಅಪಾಯಕಾರಿ ಅಲ್ಲ, ಆದರೆ ನಿರ್ಲಕ್ಷ್ಯ ಮತ್ತು ಕೆಲವು ತಪ್ಪುಗಳಿಂದ, ಇದು ಖಂಡಿತವಾಗಿಯೂ ಅದು ತೊಂದರೆಗೆ ಕಾರಣವಾಗುತ್ತದೆ, ನೀವು ಅಥವಾ ನಿಮ್ಮ ಮನೆಯಲ್ಲಿ ಯಾರಿಗಾದರೂ ಕಣ್ಣಿನ ಜ್ವರ ಸೋಂಕಿಗೆ ಒಳಗಾಗಿದ್ದರೆ, ಅದನ್ನು ಗುಣಪಡಿಸಲು ಆರಂಭದ ಕೆಲ ಗಂಟೆಗಳು ತುಂಬಾ ಮುಖ್ಯ (Health News In Kannada).

ಸಾಮಾನ್ಯವಾಗಿ ಕಣ್ಣಿನ ಸೋಂಕು ಸಂಭವಿಸಿದಾಗ ಜನರು ತನ್ನಷ್ಟಕ್ಕೆ ತಾನೇ ಆ್ಯಂಟಿ ಬಯೋಟಿಕ್‌ಗಳನ್ನು ಬಳಸಲು ಪ್ರಾರಂಭಿಸುತ್ತಾರೆ ಮತ್ತು ಇದು ದೊಡ್ಡ ತಪ್ಪು ಎಂದು ಹಿರಿಯ ನೇತ್ರತಜ್ಞ ಡಾ.ಸಂಜಯ್ ಟಿಯೋಟಿಯಾ ಹೇಳುತ್ತಾರೆ. ಇದು ಸೋಂಕಿನ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಅದು ಬೆಳೆಯುತ್ತಲೇ ಇರುತ್ತದೆ, ಆದರೆ ಅದರ ಹಾನಿ ದೇಹದ ಮೇಲೆ ಹೆಚ್ಚಾಗುತ್ತದೆ. ಕಾಂಜಂಕ್ಟಿವಿಟಿಸ್ ಒಂದು ರೀತಿಯ ವೈರಲ್ ಸೊಂಕಾಗಿದೆ ಎಂದು ಅವರು ಹೇಳುತ್ತಾರೆ, ಅದು ಸ್ವಯಂ-ಸೀಮಿತವಾಗಿರುತ್ತದೆ. ಇದು ದೃಷ್ಟಿಯನ್ನು ದುರ್ಬಲಗೊಳಿಸುವುದಿಲ್ಲ ಅಥವಾ ಕುರುಡುತನದ ಅಪಾಯವನ್ನು ಉಂಟುಮಾಡುವುದಿಲ್ಲ. ತೀವ್ರ ಕಣ್ಣಿನ ಜ್ವರ ಸಂಭವಿಸಿದಲ್ಲಿ, ದೃಷ್ಟಿಯಲ್ಲಿ ತಾತ್ಕಾಲಿಕ ಸಮಸ್ಯೆ ಇರಬಹುದು, ಆದರೆ ಕೆಲವೇ ದಿನಗಳಲ್ಲಿ ಅದು ತನ್ನಷ್ಟಕ್ಕೆ ತಾನೇ ಗುಣಮುಖವಾಗುತ್ತದೆ. ಭಯಪಡುವ ಅವಶ್ಯಕತೆ ಇಲ್ಲ ಎಂಬುದು ಅವರ ಅಭಿಪ್ರಾಯ, ಆದರೆ, ಅದನ್ನು ಆದಷ್ಟು ತಪ್ಪಿಸಲು ಜಾಗರೂಕರಾಗಿರಿ. 

ಹಾಗಾದರೆ ಐ ಫ್ಲೂ ಬಂದಾಗ ಮೊದಲು ಏನು ಮಾಡಬೇಕು  ಮತ್ತು ಸೋಂಕು ಕೇವಲ 24 ಗಂಟೆಯೊಳಗೆ ನಿವಾರಣೆಯಾಗಲು ಯಾವ ವಿಧಾನಗಳನ್ನು ಅನುಸರಿಸಬೇಕು ಎಂಬುದರ ಕುರಿತು ತಿಳಿದುಕೊಳ್ಳೋಣ ಬನ್ನಿ .

ಐ ಫ್ಲೂ ಲಕ್ಷಣಗಳು
ಕಣ್ಣಿನ ಜ್ವರ ಬಂದಾಗ, ಕಣ್ಣುಗಳು ಕೆಂಪಾಗುತ್ತವೆ ಮತ್ತು ನೋವು, ಚುಚ್ಚುವಿಕೆಯ ಜೊತೆಗೆ ಕಣ್ಣಿನಿಂದ ನೀರು ಬರಲು ಪ್ರಾರಂಭಿಸುತ್ತದೆ. ಅನೇಕ ಬಾರಿ ಕಣ್ಣಿನಿಂದ ಹೆಚ್ಚು ಜಿಗುಟಾದ ಪದಾರ್ಥ ಬರಲು ಪ್ರಾರಂಭಿಸುತ್ತದೆ. ಕೆಲವೊಮ್ಮೆ ಕಣ್ಣುಗಳು ಊದಿಕೊಳ್ಳುತ್ತವೆ. ಇದು ಸಾಮಾನ್ಯವಾಗಿ 1 ವಾರದವರೆಗೆ ಇರುತ್ತದೆ.

ಇದನ್ನೂ ಓದಿ-ಈ ಹಳದಿ ಹಾಲಿನ ಲಾಭ ಎಲ್ಲರಿಗೂ ಗೊತ್ತು... ಆದ್ರೆ, ಇದು ಯಾರಿಗೆ ಹಾನಿಕಾರಕ ಗೊತ್ತಾ?

ಸೋಂಕು ಇನ್ನೊಂದು ಕಣ್ಣಿಗೆ ಹರಡದಂತೆ ಏನು ಮಾಡಬೇಕು?
ಒಂದು ವೇಳೆ ನಿಮಗೂ ಕೂಡ ಕಣ್ಣಿನ ಸೋಂಕು ತಗುಲಿದೆ ಎಂಬ ಸಂಶಯ ಬಂದರೆ, ಮೊದಲು ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ ಮತ್ತು ಶುದ್ಧ ನೀರಿನಿಂದ ಕಣ್ಣನ್ನು ಶುಚಿಗೊಳಿಸಿ. ನಂತರ ಅದನ್ನು ಬಿಸಿನೀರಿನೊಂದಿಗೆ ತೊಳೆಯಿರಿ. ಈ ನೀರಿಗೆ ಸ್ವಲ್ಪ ಉಪ್ಪು ಹಾಕಿ ಕುದಿಸಿ. ಇದರ ನಂತರ ಲೂಬ್ರಿಕಂಟ್ ಡ್ರಾಪ್ ಹಾಕಿ ಮತ್ತು ನಿಮ್ಮ ಕಣ್ಣುಗಳನ್ನು ಮುಚ್ಚಿ, ಕಣ್ಣುಗಳಿಗೆ ವಿಶ್ರಾಂತಿ ಕೊಡಿ. ಸೋಂಕು ಇನ್ನೊಂದು ಕಣ್ಣಿಗೆ ತಗುಲದಂತೆ ಕಾಳಜಿವಹಿಸಲು ಆಗಾಗ ಕೈಗಳನ್ನು ತೊಳೆಯಿರಿ. ದಿನಕ್ಕೆ 2-3 ಬಾರಿ ಲೂಬ್ರಿಕಂಟ್ ಹನಿಗಳನ್ನು ಹಾಕಲು ಮರೆಯಬೇಡಿ ಮತ್ತು ಕನಿಷ್ಠ 3 ರಿಂದ 4 ಬಾರಿ ನಿಮ್ಮ ಕಣ್ಣುಗಳನ್ನು ಉಪ್ಪು ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಕಣ್ಣಿನ ಸೋಂಕು ಗುಣವಾಗಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ-ರೆಸ್ಟೋರೆಂಟ್ ಗಳಿಂದ ಕಪ್ಪುಬಣ್ಣದ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಆಹಾರ ಮನೆಗೆ ತರುವ ಮುನ್ನ ಈ ಸುದ್ದಿ ತಪ್ಪದೆ ಓದಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News