ನವದೆಹಲಿ: ಹಲವು ಬಾರಿ ಬೆಳಗ್ಗೆ ಎದ್ದ ನಂತರವೂ ಕೂಡ ನಮ್ಮ ದೇಹದಲ್ಲಿ ಸೋಮಾರಿತನ ಮನೆಮಾಡಿರುತ್ತದೆ. ರಾತ್ರಿಯಿಡೀ ನಿದ್ರೆ ಮಾಡಿದ ಬಳಿಕವೂ ಕೂಡ ಕೆಲವರು ಇನ್ನೂ ನಿದ್ದೆಯಲ್ಲಿಯೇ ಇರುತ್ತಾರೆ. ದೇಹದಲ್ಲಿ ಆಯಾಸಗೊಂಡಂತೆ ಭಾಸವಾಗುತ್ತದೆ. ಏನನ್ನೂ ಮಾಡಬೇಕೆಂದು ಅನಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಮ್ಮ ಇಡೀ ದಿನ ಹಾಳಾಗುತ್ತದೆ. ಈ ಪರಿಸ್ಥಿತಿ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಆದರೆ, ನೀವು ಕೇವಲ 10 ನಿಮಿಷಗಳಲ್ಲಿ ಈ ಸೋಮಾರಿತನ ಅಥವಾ ಆಲಸ್ಯವನ್ನು ನಿಮ್ಮ ಶರೀರದಿಂದ ದೂರವಾಗಿಸಬಹುದು. ಇದಕ್ಕಾಗಿ, ನೀವು ಬೆಳಗ್ಗೆ ಕೇವಲ 10 ನಿಮಿಷಗಳ ಕಾಲ ಯೋಗ ಮಾಡಬೇಕು. ಇದರಿಂದ ನೀವು ರಿಫ್ರೆಶ್ ಮತ್ತು ಕ್ರಿಯಾಶೀಲರಾಗಿರುತ್ತೀರಿ. ಈ ಯೋಗಾಸನವು ಕೆಲವೇ ನಿಮಿಷಗಳಲ್ಲಿ ನಿಮ್ಮ ನಿದ್ರೆ ಬಿಡಿಸಿ, ನಿಮ್ಮನ್ನು ಸಕ್ರಿಯಗೊಳಿಸುತ್ತದೆ. ನಿಮ್ಮ ದಿನದ ಆರಂಭ ಆಲಸ್ಯದಿಂದ ಶುರುವಾದರೂ ಕೂಡ ನಿಮ್ಮ ಇಡೀ ದಿನ ಸಕ್ರೀಯತೆಯಿಂದ ಕೂಡಿರುತ್ತದೆ. ಇದಕ್ಕಾಗಿ ನೀವು ನಿಮ್ಮ ದಿನವನ್ನು ಮಾರ್ಜರಾಸನ ಹಾಗೂ ಬಿಟಿಲಾಸನ ಯೋಗದೊಂದಿಗೆ ಪ್ರಾರಂಭಿಸಬೇಕು. ಅದನ್ನು ಮಾಡುವ ವಿಧಾನ ಮತ್ತು ಪ್ರಯೋಜನಗಳನ್ನು ತಿಳಿಯಿರಿ.
ಮಾರ್ಜರಾಸನ-ಬಿಟಿಲಾಸನ
ಇತ್ತೀಚಿನ ದಿನಗಳಲ್ಲಿ, ಹಲವರು ಬೆಳಗ್ಗೆ ಎದ್ದ ಕೂಡಲೇ ಸೊಂಟದಲ್ಲಿ ನೋವು, ಸ್ನಾಯು ನೋವು ಮತ್ತು ದೇಹದ ಅನೇಕ ಭಾಗಗಳಲ್ಲಿ ನೋವು ಅನುಭವಿಸುತ್ತಾರೆ. ಬೆಳಿಗ್ಗೆಯಿಂದ ನೋವಿನ ದೂರು ಅಥವಾ ದೇಹದಲ್ಲಿ ಸೋಮಾರಿತನ ಇರುವ ಜನರು ಬೆಳಗ್ಗೆ ಎದ್ದು ಮಾರ್ಜರಸನ್-ಬಿಟಿಲಾಸನ್ ಮಾಡಬೇಕು. ಬಿಟಿಲಾಸನ್ ಎಂದರೆ ಹಸುವಿನ ಆಸನ, ಇದನ್ನು ಹಸುವಿನ ಭಂಗಿ ಎಂದೂ ಕರೆಯುತ್ತಾರೆ. ಇದೇ ವೇಳೆ , ಮಾರ್ಜರಾಸನ ಬೆಕ್ಕಿನ ಭಂಗಿ, ಇದನ್ನು ಕ್ಯಾಟ್ ಪೋಸ್ ಎಂದೂ ಕರೆಯುತ್ತಾರೆ. ಈ ಆಸನವನ್ನು ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ . ಇದು ನಿಮ್ಮ ಬೆನ್ನು ಮತ್ತು ಬೆನ್ನಿನ ಸ್ನಾಯುಗಳಿಗೆ ಲೌಚಿಕತೆ ನೀಡುತ್ತದೆ ಹಾಗೂ ನೋವನ್ನು ನಿವಾರಿಸುತ್ತದೆ.
ಮಾರ್ಜರಾಸನ-ಬಿಟಿಲಾಸನ ಮಾಡುವ ಪದ್ಧತಿ
ಮೊದಲು ಸಮತಟ್ಟಾದ ನೆಲದ ಮೇಲೆ ಮಲಗಿಕೊಳ್ಳಿ. ನೀವು ಬಯಸಿದರೆ, ನೀವು ಈ ಯೋಗಾಸನವನ್ನು ಹಾಸಿಗೆಯಲ್ಲಿದ್ದುಕೊಂಡೆ ಮಾಡಬಹುದು. ಈಗ ನೀವು ನಿಮ್ಮ ಅಂಗೈಗಳನ್ನು ನೇರವಾಗಿ ಭುಜಗಳ ಕೆಳಗೆ ಇಟ್ಟುಕೊಳ್ಳಬೇಕು. ನಿಮ್ಮ ಮೊಣಕಾಲುಗಳು ನೇರವಾಗಿ ಸೊಂಟದ ಮೂಳೆಯ ಕೆಳಗೆ ಇವೆಯೆ ಎಂದು ಖಚಿತಪಡಿಸಿಕೊಳ್ಳಿ. ಈಗ ನಿಮ್ಮ ಪಾದಗಳಿಗೆ ವಿಶ್ರಾಂತಿ ನೀಡಿ ಮತ್ತು ಪಾದಗಳನ್ನು ಚಪ್ಪಟೆಯಾಗಿಟ್ಟುಕೊಂಡು ಬೆರಳುಗಳನ್ನು ಒಳಭಾಗಕ್ಕೆ ತಳ್ಳಿ. ಬಳಿಕ ಆಳವಾದ ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಬಿಡುಗಡೆ ಮಾಡಿ. ಎರಡನೇ ಬಾರಿಗೆ ಮತ್ತೆ ಉಸಿರನ್ನು ಒಳಕ್ಕೆ ಎಳೆದು ಹೊಟ್ಟೆಯನ್ನು ಕೆಳಭಾಗಕ್ಕೆ ಎಳೆಯಿರಿ. ಈಗ ನಿಮ್ಮ ಬೆನ್ನನ್ನು ಕಮಾನು ಆಕ್ರುತಿಯನ್ನಾಗಿ ಪರಿವರಿಸಿ ಮತ್ತು ಬಾಲ ಮೂಳೆಯನ್ನು ನೋಡುತ್ತಾ ಮುಂದುವರಿಯಿರಿ. ಸ್ವಲ್ಪ ಸಮಯದವರೆಗೆ ಅದೇ ಸ್ಥಿತಿಯಲ್ಲಿ ಮುಂದುವರೆಯಿರಿ ಮತ್ತು ಉಸಿರನ್ನು ಬಿಡಿ. ಸ್ವಲ್ಪ ವಿಶ್ರಾಂತಿಯ ನಂತರ, ಈ ಆಸನವನ್ನು ಮತ್ತೆ ಮಾಡಿ. ಈ ಆಸನವನ್ನು ನಿತ್ಯ ಕನಿಷ್ಠ 10 ಬಾರಿ ಮಾಡಬೇಕು.
ಮಾರ್ಜರಾಸನ-ಬಿಟಿಲಾಸನದ ಲಾಭಗಳು
1- ಒಂದು ವೇಳೆ ನೀವು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಕುತ್ತಿಗೆ ಮತ್ತು ಬೆನ್ನುನೋವಿನಿಂದ ಈ ಆಸನ ನಿಮಗೆ ಪರಿಹಾರ ನೀಡುತ್ತದೆ.
2- ಈ ಯೋಗದಿಂದ ನಿಮ್ಮ ದೇಹ ಮತ್ತು ಮನಸ್ಸು ಎರಡೂ ಶಾಂತವಾಗಿರುತ್ತದೆ. ಮೊದಲಿಗಿಂತ ಯಾವುದೇ ಕೆಲಸದಲ್ಲಿ ನೀವು ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತದೆ.
3- ಇದರೊಂದಿಗೆ, ನಿಮ್ಮ ದೇಹ ಮತ್ತು ಮನಸ್ಸು ಎರಡೂ ಆರೋಗ್ಯವಾಗಿರುತ್ತವೆ, ಇದು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.
4- ಮಾರ್ಜರಾಸನ -ಬಿಟಿಲಾಸನ್ ಯೋಗ ಕೂಡ ನಿಮ್ಮ ಪಾಸ್ಚರ್ ಅನ್ನು ಸುಧಾರಿಸುತ್ತದೆ. ಇದು ಭಂಗಿಗೆ ಸಂಬಂಧಿಸಿದ ತೊಂದರೆಗಳನ್ನುದೂರ ಮಾಡುತ್ತದೆ.
5- ಈ ಭಂಗಿಯು ಬೆನ್ನುಹುರಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಬ್ಯಾಕ್ ಪೆನ್ ನಿಂದ ಇದು ಮುಕ್ತಿ ನೀಡುತ್ತದೆ.
6- ನಿಮ್ಮ ಕೆಳಗಿನ ಬೆನ್ನು, ಮಧ್ಯದ ಬೆನ್ನು, ಕುತ್ತಿಗೆ ಮತ್ತು ಭುಜಗಳ ನೋವನ್ನು ನಿವಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
7- ಈ ಯೋಗ ನಿಮ್ಮ ಪ್ರಮುಖ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ನಿಮ್ಮ ದೇಹಕ್ಕೆ ಸ್ಥಿರತೆಯನ್ನು ನೀಡುತ್ತದೆ.
8- ಕೆಲಸ ಮಾಡುವಾಗ ಕೈ, ಭುಜ ಮತ್ತು ಮಣಿಕಟ್ಟಿನ ನೋವನ್ನು ನಿವಾರಿಸುತ್ತದೆ, ಅವುಗಳನ್ನು ಬಲಪಡಿಸುತ್ತದೆ.
9 - ಈ ವ್ಯಾಯಾಮ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರಿಂದ ದೀರ್ಘಕಾಲದವರೆಗೆ ಕೀಲುಗಳು , ಮೊಣಕಾಲು, ಭುಜದ ಕೀಲುಗಳು ಬಲವಾಗಿರುತ್ತವೆ.
10- ನಿದ್ದೆ ಮಾಡುವಾಗ, ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದ ಭಂಗಿಯನ್ನು ಸುಧಾರಿಸುತ್ತದೆ.