ಹೃದಯಾಘಾತಕ್ಕೂ 30 ದಿನಗಳ ಮೊದಲು ಈ 7 ರೋಗಲಕ್ಷಣಗಳನ್ನು ಕಾಣಿಸಿಕೊಳ್ಳುತ್ತವೆ..! ನಿರ್ಲಕ್ಷಿಸಬೇಡಿ..

Heart Attack symptoms : ಹೃದಯಾಘಾತವನ್ನು ಮೊದಲೇ ಪತ್ತೆ ಹಚ್ಚಿದರೆ ಜೀವ ಉಳಿಸಬಹುದು. ಇತ್ತೀಚಿನ ಸಂಶೋಧನೆಯು ಸುಮಾರು ಒಂದು ತಿಂಗಳ ಹಿಂದೆ ದೇಹದಲ್ಲಿ ಕಂಡುಬರುವ 7 ರೋಗಲಕ್ಷಣಗಳ ಬಗ್ಗೆ ಉಲ್ಲೇಖಿಸಿದೆ. ಈ ರೋಗಲಕ್ಷಣಗಳನ್ನು ನೀವು ಅರ್ಥಮಾಡಿಕೊಂಡರೆ ಹೃದಯಾಘಾತದಿಂದ ನಿಮ್ಮನ್ನು ಅಥವಾ ಅನ್ಯರ ಜೀವ ಉಳಿಸಬಹುದು.

Written by - Krishna N K | Last Updated : Apr 10, 2024, 11:31 PM IST
    • ಹೃದಯಾಘಾತದ ಬಗ್ಗೆ ನಿರ್ಲಕ್ಷ್ಯ ಅಪಾಯಕಾರಿ.
    • ಅಷ್ಟೆ ಅಲ್ಲ, ಕೋವಿಡ್‌ ನಂತರ, ಈ ಪ್ರಕರಣಗಳು ತೀವ್ರವಾಗಿ ಹೆಚ್ಚಿವೆ.
    • ಹೃದಯಾಘಾತವನ್ನು ಮೊದಲೇ ಪತ್ತೆ ಹಚ್ಚಿದರೆ ಜೀವ ಉಳಿಸಬಹುದು.
ಹೃದಯಾಘಾತಕ್ಕೂ 30 ದಿನಗಳ ಮೊದಲು ಈ 7 ರೋಗಲಕ್ಷಣಗಳನ್ನು ಕಾಣಿಸಿಕೊಳ್ಳುತ್ತವೆ..! ನಿರ್ಲಕ್ಷಿಸಬೇಡಿ.. title=

Pre heart attack symptoms : ಹೃದಯಾಘಾತದ ಬಗ್ಗೆ ನಿರ್ಲಕ್ಷ್ಯ ಅಪಾಯಕಾರಿ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹೃದಯರಕ್ತನಾಳದ ಕಾಯಿಲೆಯಿಂದ ಪ್ರತಿ ವರ್ಷ ವಿಶ್ವದಾದ್ಯಂತ 17.9 ಮಿಲಿಯನ್ ಜನರು ಸಾಯುತ್ತಿದ್ದಾರಂತೆ. ಈ ಪೈಕಿ ಐದರಲ್ಲಿ ನಾಲ್ಕು ಸಾವುಗಳು ಹೃದಯಾಘಾತದಿಂದ ಸಂಭವಿಸುತ್ತವೆ. ಅಷ್ಟೆ ಅಲ್ಲ, ಕೋವಿಡ್‌ ನಂತರ, ಈ ಪ್ರಕರಣಗಳು ತೀವ್ರವಾಗಿ ಹೆಚ್ಚಿವೆ.  

ಹೃದಯಾಘಾತವು ಇದ್ದಕ್ಕಿದ್ದಂತೆ ಬರುತ್ತದೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ವಾಸ್ತವ ತೀರಾ ಭಿನ್ನವಾಗಿದೆ. ಹೃದಯಾಘಾತ ಸಂಭವಿಸುವ ಒಂದು ತಿಂಗಳ ಮೊದಲು, ದೇಹವು ಕೆಲವು ಬದಲಾವಣೆಗಳಿಗೆ ಒಳಗಾಗುತ್ತದೆ. ಅಂದರೆ, ದೇಹದಲ್ಲಿ ಕೆಲವು ಪ್ರಕ್ರಿಯೆಗಳು ನಡೆಯುತ್ತವೆ. ಹೃದಯಾಘಾತಕ್ಕೂ ಮುನ್ನ ಸುಮಾರು ಒಂದು ತಿಂಗಳ ಹಿಂದೆ ದೇಹದಲ್ಲಿ ಕಂಡುಬರುವ 7 ರೋಗಲಕ್ಷಣಗಳ ಇಲ್ಲಿವೆ ನೋಡಿ..

ಹೃದಯಾಘಾತದ ಆರಂಭಿಕ ಲಕ್ಷಣಗಳು

  • ಎದೆ ನೋವು
  • ಎದೆಯ ಭಾರ
  • ಹೆಚ್ಚಿದ ಹೃದಯ ಬಡಿತ
  • ಉಸಿರಾಟದ ತೊಂದರೆಗಳು
  • ಎದೆ ಸುಡುವುದು
  • ಆಯಾಸ
  • ನಿದ್ರೆ ಸಂಬಂಧಿತ ಸಮಸ್ಯೆಗಳು

 

ಪುರುಷರಿಗಿಂತ ಮಹಿಳೆಯರು ಹೃದಯಾಘಾತದ ಮೊದಲ ರೋಗಲಕ್ಷಣವನ್ನು ಅನುಭವಿಸುವ ಸಾಧ್ಯತೆ ಹೆಚ್ಚು ಎನ್ನಲಾಘಿದೆ. 50 ರಷ್ಟು ಮಹಿಳೆಯರು ಹೃದಯಾಘಾತಕ್ಕೂ ಮುನ್ನ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುತ್ತಾರೆ. ಎದೆ ನೋವು ಪುರುಷರು ಮತ್ತು ಮಹಿಳೆಯರಲ್ಲಿ ಕಂಡುಬರುವ ಹೃದಯಾಘಾತದ ಸಾಮಾನ್ಯ ಲಕ್ಷಣವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News