ವರ್ಕೌಟ್ ನಂತರ ಸೇವಿಸಲು ತಜ್ಞರು ಸೂಚಿಸುವ ಉತ್ತಮವಾದ ತಿಂಡಿಗಳಿವು..!

Workout Snacks : ನೀವು ಮಾಡುವ ವ್ಯಾಯಾಮದ ಸಮಯವನ್ನು ಹೆಚ್ಚು ಮಾಡಲು ಸರಿಯಾದ ಪ್ರಮಾಣದ ಪೋಷಕಾಂಶಗಳನ್ನು ಸೇವಿಸುವುದು ಮುಖ್ಯ. ಹಾಗಾದರೆ ವರ್ಕ್‌ಔಟ್‌ ನಂತರ ಸೇವಿಸಬಹುದಾದ ತಿಂಡಿಗಳು ಯಾವವು ಹಾಗೂ ಯಾವುದರಲ್ಲಿ ಎಷ್ಟು ಪೋಷಕಾಂಶವಿದೆ ಎನ್ನುವುದನ್ನು ತಿಳಿದುಕೊಳ್ಳಿ.   

Written by - Zee Kannada News Desk | Last Updated : Mar 24, 2023, 05:08 PM IST
  • ನಮ್ಮಲ್ಲಿ ಹೆಚ್ಚಿನ ಜನರು ಉತ್ತಮ ಬಾಡಿ ಫಿಟ್ನೆಸ್‌ ಹೊಂದಲು ಜಿಮ್‌ಗೆ ಹೋಗುತ್ತಾರೆ.
  • ಸರಿಯಾದ ಫಿಟ್ನೆಸ್ ದಿನಚರಿಯನ್ನು ಅನುಸರಿಸುತ್ತಾರೆ.
  • ನಾವು ಸೇವಿಸುವ ಆಹಾರವು ನಮ್ಮ ಕಾರ್ಯಕ್ಷಮತೆಯ ಮೇಲೆ ಭಾರಿ ಪರಿಣಾಮ ಬೀರಬಹುದು,
ವರ್ಕೌಟ್ ನಂತರ ಸೇವಿಸಲು ತಜ್ಞರು ಸೂಚಿಸುವ ಉತ್ತಮವಾದ ತಿಂಡಿಗಳಿವು..!  title=

GYM Fitness : ನಮ್ಮಲ್ಲಿ ಹೆಚ್ಚಿನ ಜನರು ಉತ್ತಮ ಬಾಡಿ ಫಿಟ್ನೆಸ್‌ ಹೊಂದಲು ಜಿಮ್‌ಗೆ ಹೋಗುತ್ತಾರೆ. ಮತ್ತು ಸರಿಯಾದ ಫಿಟ್ನೆಸ್ ದಿನಚರಿಯನ್ನು ಅನುಸರಿಸುತ್ತಾರೆ. ಆದರೆ ಅವರ ದಿನಚರಿಯನ್ನು ಅನುಸರಿಸಲು ಕಾರಣವೇನು ಯಾಕೆ ಅದನ್ನು ಅನುಸರಿಸಬೇಕು ಎಂದು ಎಂದಾದರೂ ಯೋಚಿಸಿದ್ದೀರಾ..? ಜಿಮ್‌ ವರ್ಕೌಟ್ ಅವಧಿಯ ಮೊದಲು ಮತ್ತು ನಂತರ ನಾವು ಸೇವಿಸುವ ಆಹಾರವು ನಮ್ಮ ಕಾರ್ಯಕ್ಷಮತೆಯ ಮೇಲೆ ಭಾರಿ ಪರಿಣಾಮ ಬೀರಬಹುದು, ಹೀಗಾಗಿ ಉತ್ತಮವಾದ ಆಹಾರ ದಿನಚರಿಯನ್ನು ಅನುಸರಿವುದು ಒಳಿತು. 

ಇದನ್ನೂ ಓದಿ-Lemon Grass : ಸಂಧಿವಾತದ ಸಮಸ್ಯೆಗೆ ಮನೆ ಮದ್ದು ಈ ಅದ್ಭುತ ಚಹಾ..! 

ವ್ಯಾಯಾಮದ ನಂತರ ನೀವು ತಿನ್ನಬೇಕಾದ ಊಟಗಳ ಬಗ್ಗೆ ನಿಮಗೆ ತಿಳಿದಿದೆಯೇ? ಹೆವಿ ವರ್ಕೌಟ್ ನಂತರ ಈ ತಿಂಡಿಗಳು ನಮ್ಮ ದೇಹವನ್ನು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾದರೇ ತಜ್ಞರು ಸೂಚಿಸುವ ತಿಂಡಿಗಳೇನು ನೀವೆ ನೋಡಿ : 

*ವರ್ಕೌಟ್ ಒಂದು ಲೋಟ ಮಜ್ಜಿಗೆ ಜೊತೆ ಬೇಯಿಸಿದ ಕಡಲೆ ಕಾಳುಗಳನ್ನು ತಿನ್ನಲು ತಜ್ಞರು ಸೂಚಿಸುತ್ತಾರೆ.
*ಊಟದಲ್ಲಿ ಹುರಿದ ಎಳ್ಳು ಮತ್ತು ಅಗಸೆ ಬೀಜಗಳ ಪುಡಿಯನ್ನು ಸೇವಿಸುವುದು.
*ಪನ್ನೀರ್‌ ಸೇವನೆಯನ್ನು ಸಹ ತಜ್ಞರು ಸೂಚಿಸುತ್ತಾರೆ. 
*ಪ್ರತಿ ಮ್ಯಾಕ್ರೋನ್ಯೂಟ್ರಿಯೆಂಟ್ - ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಮತ್ತು ಕೊಬ್ಬು - ನಿಮ್ಮ ದೇಹದ ವ್ಯಾಯಾಮದ ನಂತರದ ಚೇತರಿಕೆಯಲ್ಲಿ ಸಹಕಾರಿಯಾಗಿವೆ.  
*ನಿಮ್ಮ ದೇಹದ ತೂಕವನ್ನು ನಿಯಂತ್ರಿಸಲು ವರ್ಕಔಟ್‌ ನಂತರ ಮತ್ತು ಮೊದಲು 10 ರಿಂದ 20 ಗ್ರಾಂ ಪ್ರೋಟಿನ್‌ ಸೇವಿಸಬೇಕೆಂದು ತಜ್ಞರು ಶಿಫಾರಸ್ಸು ಮಾಡುತ್ತಾರೆ. 
*ಆರೋಗ್ಯಕರ ಕೊಬ್ಬುಗಳು ನಿಮ್ಮ ಸ್ನಾಯುಗಳನ್ನು ಸರಿಪಡಿಸಲು, ಚೇತರಿಸಿಕೊಳ್ಳಲು ಮತ್ತು ಬೆಳೆಯಲು ಸಹಾಯ ಮಾಡುತ್ತದೆ.
*ತರಬೇತಿಯ ಸಮಯದಲ್ಲಿ ನಿಮ್ಮ ಸ್ನಾಯುಗಳು ಕಳೆದುಕೊಂಡ ಗ್ಲೈಕೋಜೆನ್ ಅನ್ನು ಪುನಃ ಭರಿಸಲು ಕಾರ್ಬೋಹೈಡ್ರೇಟ್‌ಗಳು ಸಹಕಾರಿಯಾಗಿವೆ.  

​ಇದನ್ನೂ ಓದಿ-High Cholesterol: ಕೇವಲ 2 ರೂ. ಖರ್ಚು ಮಾಡಿ ಸಾಕು, ರಕ್ತ ನಾಳಗಳಲ್ಲಿನ ಕೆಟ್ಟ ಜಿಡ್ಡು ಕರಗಿ ಹೊರಬರುತ್ತದೆ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News