ದಾಸವಾಳ ಹೂವಿನಲ್ಲಿದೆ ಆರೋಗ್ಯದ ಗುಟ್ಟು..!

Health tipes:ದಾಸವಾಳದ ಹೂವು ಪೂಜೆಗೆ ಮಾತ್ರವಲ್ಲ ಸೌಂದರ್ಯ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಹೆಚ್ಚು ಪ್ರಯೋಜನಕಾರಿಯಾಗಿದೆ.  ಚರ್ಮ ಮತ್ತು ಕೂದಲು ಸೇರಿದಂತೆ ಹಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ದಾಸವಾಳದ ಹೂವು ಎಲ್ಲಾ   ರೀತಿಯಿಂದಲೂ ಸಹಕಾರಿ  ಇದರಲ್ಲಿರುವ ಔಷಧೀಯ ಗುಣಗಳು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯಲ್ಲೂ ಪ್ರಯೋಜನಕಾರಿ.

Written by - Zee Kannada News Desk | Last Updated : Feb 11, 2023, 02:34 PM IST
  • ದಾಸವಾಳದ ಹೂವಿನಲ್ಲಿನ ಗುಣಗಳು ಮಧುಮೇಹ ನಿಯಂತ್ರಣಕ್ಕೆ ಸಹಕಾರಿ
  • ಆಕ್ಸಿಡೀಶನ್‌ ನಿರೋಧಕಗಳು ಮತ್ತು ವಿಟಮಿನ್‌ಗಳನ್ನು ಒಳಗೊಂಡಿರುತ್ತವೆ.
  • ಉತ್ತಮ ತ್ವಚ್ಛೆಗಾಗಿ ದಾಸವಾಳ
ದಾಸವಾಳ ಹೂವಿನಲ್ಲಿದೆ  ಆರೋಗ್ಯದ ಗುಟ್ಟು..! title=

 Health tipes:ದಾಸವಾಳದ ಹೂವು ಪೂಜೆಗೆ ಮಾತ್ರವಲ್ಲ ಸೌಂದರ್ಯ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಹೆಚ್ಚು ಪ್ರಯೋಜನಕಾರಿಯಾಗಿದೆ.  ಚರ್ಮ ಮತ್ತು ಕೂದಲು ಸೇರಿದಂತೆ ಹಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ದಾಸವಾಳದ ಹೂವು ಎಲ್ಲಾ   ರೀತಿಯಿಂದಲೂ ಸಹಕಾರಿ  ಇದರಲ್ಲಿರುವ ಔಷಧೀಯ ಗುಣಗಳು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯಲ್ಲೂ ಪ್ರಯೋಜನಕಾರಿ.ದಾಸವಾಳವು ಕಾರ್ಬೋಹೈಡ್ರೇಟ್, ಕೊಬ್ಬು ,ಪ್ರೋಟೀನ್ ,ವಿಟಮಿನ್ ಸಿ ,ಕ್ಯಾಲ್ಸಿಯಂ ,ಕಬ್ಬಿಣ ಹೀಗೆ ಹಲವು ಪೋಷಾಕಾಂಶಗಳನ್ನು ಹೊಂದಿದೆ. 

ಆರೋಗ್ಯಕ್ಕೆ ದಾಸವಾಳ

ಮಧುಮೇಹ ನಿಯಂತ್ರಣ

ದಾಸವಾಳದ ಸಾರವು ಆಂಟಿ-ಇನ್ಸುಲಿನ್ ಪ್ರತಿರೋಧ ಗುಣಲಕ್ಷಣಗಳನ್ನು ಹೊಂದಿದೆ ಎಂದು ಅಧ್ಯಯನ ತಿಳಿಸಲಾಗಿದೆ ಅಧಿಕ ರಕ್ತದ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ

ಇದನ್ನೂ ಓದಿ: Onion Benefits : ದಿನಕ್ಕೆ ಒಂದು ಹಸಿ ಈರುಳ್ಳಿ ತಿನ್ನಿ ಸಾಕು, ಈ ಕಾಯಿಲೆ ಬುಡಸಮೇತ ನಿವಾರಣೆಯಾಗುತ್ತೆ.!

ಕೇಶರಾಶಿಗೆ ಸಹಕಾರಿ ದಾಸವಾಳದ ಎಲೆಗಳು ಮತ್ತು ಹೂವುಗಳು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿ ಗುಣಗಳನ್ನು ಹೊಂದಿದೆ.ದಾಸವಾಳದ ಎಲೆಗಳು ಮತ್ತು ಹೂವುಗಳು ನೈಸರ್ಗಿಕ ವರ್ಣದ್ರವ್ಯವಾಗಿದೆ.  ಆಕ್ಸಿಡೀಶನ್‌ ನಿರೋಧಕಗಳು ಮತ್ತು ವಿಟಮಿನ್‌ಗಳನ್ನು ಒಳಗೊಂಡಿರುತ್ತವೆ.ವಾರದಲ್ಲಿ ಎರಡುಬಾರಿ ದಾಸವಾಳ ಎಲೆ ಅಥವಾ ಹೂಗಳನ್ನು ಕೂದಲಿಗೆ ಹಚ್ಚುವುದರಿಂದ  ನೇರವಾಗಿ ಪರಿಣಾಮ ಬೀರಿಉತ್ತಮ ಕೇಶರಾಶಿ ಹೊಂದಲು ಸಹಕರಿಸುತ್ತದೆ.

ಉತ್ತಮ  ತ್ವಚ್ಛೆಗಾಗಿ ದಾಸವಾಳ

ಹೈಬಿಸ್ಕಸ್ ಸಸ್ಯಗಳು ಲೋಳೆಗಳ  ಅಂಶಗಳನ್ನು ಹೆಚ್ಚು  ಹೊಂದಿರುವುದರಿಂದ ಅವುಗಳು  ಪಾಲಿಸ್ಯಾಕರೈಡ್ಗಳ ಗುಂಪಿಗೆ ಸೇರುತ್ತವೆ.  ಇದರ  ಎಲೆಗಳನ್ನು  ಚರ್ಮದ ಕಾಯಿಲೆಗಳನ್ನು   ಬಳಸಲಾಗುತ್ತದೆ. ಹೈಬಿಸ್ಕಸ್ ಲೋಳೆಯ ಸಾರವು ಗ್ಲಿಸರಿನ್ ಅನ್ನು ಹೊಂದಿರುತ್ತದೆ, ಇದು  ಚರ್ಮವನ್ನು  ವೃಧುವಾಗಿಸುದಲ್ಲದೇ ಕಾಂತಿಯುತವಾಗಿಸುತ್ತದೆ.

ಇದನ್ನೂ ಓದಿ: Green Papaya Benefits: ಹಸಿರು ಪಪ್ಪಾಯಿ ಸೇವನೆಯ 5 ಪ್ರಮುಖ ಆರೋಗ್ಯ ಲಾಭಗಳು ನಿಮಗೆ ತಿಳಿದಿವೆಯೇ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News