Diabetes Symptoms In Hands And Feet : ಮಧುಮೇಹವು ದೀರ್ಘಕಾಲದ ಕಾಯಿಲೆಯಾಗಿದೆ. ಪ್ರಪಂಚದಾದ್ಯಂತ ಕೋಟಿಗಟ್ಟಲೆ ಜನರು ಈ ಕಾಯಿಲೆಯಿದ ಬಳಲುತ್ತಿದ್ದಾರೆ.ಈ ರೋಗದಲ್ಲಿ,ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ. ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ಅಧಿಕ ರಕ್ತದ ಸಕ್ಕರೆಯ ಮಟ್ಟವು ದೇಹದಲ್ಲಿ ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರಿಂದ ಹೃದಯ,ಕಿಡ್ನಿ, ಕಣ್ಣು, ಶ್ವಾಸಕೋಶ ಸೇರಿದಂತೆ ದೇಹದ ಹಲವು ಅಂಗಗಳು ಹಾನಿಗೀಡಾಗುವ ಅಪಾಯ ಇರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ.ಇದಕ್ಕಾಗಿ, ಮಧುಮೇಹದ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸುವುದು ಮುಖ್ಯ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ದೇಹದಲ್ಲಿ ಅನೇಕ ರೀತಿಯ ಲಕ್ಷಣಗಳು ಕಂಡುಬರುತ್ತವೆ. ಕೈ ಮತ್ತು ಕಾಲುಗಳಲ್ಲಿಯೂ ಈ ಲಕ್ಷಣಗಳು ಕಾಣ ಸಿಗುತ್ತವೆ. ಇದನ್ನು ಸರಿಯಾಗಿ ಗುರುತಿಸಿಕೊಂಡರೆ ಮುಂದೆ ಆಗಬಹುದಾದ ಅಪಾಯವನ್ನು ತಪ್ಪಿಸಬಹುದು.
ಕೈಯಲ್ಲಿ ಕಂಡುಬರುವ ಮಧುಮೇಹದ ಲಕ್ಷಣಗಳು :
೧.ಮಧುಮೇಹದ ಸಂದರ್ಭದಲ್ಲಿ, ಕೈಗಳ ಚರ್ಮದ ಬಣ್ಣದಲ್ಲಿ ಬದಲಾವಣೆಯನ್ನು ಕಾಣಬಹುದು.ಕೈಗಳ ಚರ್ಮವು ಹಳದಿ, ಕೆಂಪು ಅಥವಾ ಕಂದು ಬಣ್ಣಕ್ಕೆ ತಿರುಗುತ್ತದೆ.
೨. ಮಧುಮೇಹದಿಂದಾಗಿ, ಕೈಗಳ ಬೆರಳುಗಳ ಚರ್ಮವು ತುಂಬಾ ದಪ್ಪ ಮತ್ತು ಒರಟಾಗಲು ಶುರುವಾಗುತ್ತದೆ.
೩.ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಕೈಗಳಲ್ಲಿ ಗುಳ್ಳೆಗಳು ಸಹ ಏಳುತ್ತವೆ.
೪. ವ್ಯಕ್ತಿಯು ಮಧುಮೇಹದಿಂದ ಬಳಲುತ್ತಿದ್ದರೆ, ಯಾವುದೇ ಕಾರಣವಿಲ್ಲದೆ ಕೈಯಲ್ಲಿ ಸೋಂಕು ಸಂಭವಿಸಲು ಪ್ರಾರಂಭಿಸುತ್ತದೆ.
೫. ಈ ಕಾರಣದಿಂದಾಗಿ,ಕೈಗಳಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ.
೬. ಮಧುಮೇಹದಿಂದಾಗಿ, ವಿನಾ ಕಾರಣ ಕೈಗಳಲ್ಲಿ ಅತಿಯಾದ ಬೆವರು ಬರುತ್ತದೆ.
೭. ಮಧುಮೇಹವಿದ್ದಾಗ ಕೈಯಲ್ಲಿ ನೋವು, ಊತ ಮತ್ತು ಉರಿ ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ : ಈ ಪುಟ್ಟ ಸಿಹಿ ಹಣ್ಣು ಸಾಕು ಕೀಲುಗಳ ಸುತ್ತ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗಿಸಲು ! ದಿನಕ್ಕೊಂದೇ ಸೇವಿಸಿ
ಕಾಲುಗಳಲ್ಲಿ ಮಧುಮೇಹದ ಲಕ್ಷಣಗಳು :
೧.ಮಧುಮೇಹ ಇದ್ದಾಗ ಪಾದಗಳಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ.
೨.ಮಧುಮೇಹ ರೋಗಿಗಳಿಗೆ ಪದೇ ಪದೇ ಪಾದಗಳಲ್ಲಿ ಜುಮ್ಮೆನಿಸುವ ಅನುಭವವಾಗುತ್ತದೆ.ಅಲ್ಲದೆ ಕಾಲು ಮರಗಟ್ಟಿದಂತೆ ಆಗುತ್ತದೆ.
೩.ಕಾಲುಗಳ ಚರ್ಮದಲ್ಲಿ ಶುಷ್ಕತೆ ಮತ್ತು ತುರಿಕೆ ಕಾಣಿಸಿಕೊಳ್ಳಬಹುದು.
೪. ಮಧುಮೇಹದಿಂದಾಗಿ, ಕಾಲುಗಳಲ್ಲಿ ತೀವ್ರವಾದ ನೋವು ಮತ್ತು ಸೆಳೆತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
೫.ಪಾದಗಳು ಅಥವಾ ಕಣಕಾಲುಗಳಲ್ಲಿ ಊತ ಕಾಣಿಸಿಕೊಳ್ಳಬಹುದು.
೬. ಮಧುಮೇಹದಿಂದಾಗಿ,ಕಾಲುಗಳ ಚರ್ಮದಲ್ಲಿ ಬಿರುಕುಗಳು ಕಾಣಿಸಿಕೊಳ್ಳಬಹುದು. ಇದರ ಪರಿಣಾಮವಾಗಿ ಗಾಯಗಳಾಗುತ್ತವೆ.
ನಿಮ್ಮ ಕೈ ಮತ್ತು ಕಾಲುಗಳಲ್ಲಿ ಈ ರೋಗಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಬೇಕು.ಸರಿಯಾದ ಸಮಯದಲ್ಲಿ ಮಧುಮೇಹದ ಲಕ್ಷಣಗಳನ್ನು ಗುರುತಿಸುವ ಮೂಲಕ, ಅದರ ಗಂಭೀರ ಪರಿಣಾಮಗಳನ್ನು ತಪ್ಪಿಸಬಹುದು.
ಇದನ್ನೂ ಓದಿ : ಈ ಬೀಜ ಮಧುಮೇಹಿಗಳಿಗೆ ವರದಾನ: ಬ್ಲಡ್ ಶುಗರ್ ಸಂಪೂರ್ಣ ಮ್ಯಾನೇಜ್ ಮಾಡಲು ಇದಕ್ಕಿಂತ ಬೆಸ್ಟ್ ಮತ್ತೊಂದಿಲ್ಲ
(ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. )
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=O-hDphMYFMg
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.