ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದ ಅನ್ನ ತಿನ್ನುತ್ತಿದ್ದರೆ ಈ ವಿಚಾರಗಳು ತಿಳಿದಿರಲಿ

ಪ್ರೆಶರ್ ಕುಕ್ಕರ್‌ನಲ್ಲಿ  ಅನ್ನ ತುಂಬಾ ಬೇಗನೆ ಬೇಯುವುದರಿಂದ, ಸಮಯ ಉಳಿಯುತ್ತದೆ ಎನ್ನುವ ಕಾರಣಕ್ಕೆ ಈ ಆಯ್ಕೆಯನ್ನು ಮಾಡಿಕೊಳ್ಳುವವರು ಹೆಚ್ಚು. ಆದರೆ, ಅನ್ನವನ್ನು ಹೇಗೆ ಬೇಯಿಸಿ ತಿಂದರೆ ಒಳ್ಳೆಯದು ಎನ್ನುವ ಪ್ರಶ್ನೆ ಮಾತ್ರ ಇದ್ದೇ ಇರುತ್ತದೆ. 

Written by - Ranjitha R K | Last Updated : Aug 30, 2022, 11:34 AM IST
  • ಭಾರತದಲ್ಲಿ ಅನ್ನವನ್ನು ಪ್ರಧಾನ ಆಹಾರವಾಗಿ ಸೇವಿಸಲಾಗುತ್ತದೆ.
  • ಅನ್ನ ಬೇಯಿಸುವುದಕ್ಕೂ ಬೇರೆ ಬೇರೆ ವಿಧಾನಗಳಿವೆ.
  • ಅನ್ನ ಹೇಗೆ ಬೇಯಿಸಿದರೆ ಆರೋಗ್ಯಕ್ಕೆ ಪ್ರಯೋಜನಕಾರಿ
 ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದ ಅನ್ನ ತಿನ್ನುತ್ತಿದ್ದರೆ ಈ ವಿಚಾರಗಳು ತಿಳಿದಿರಲಿ  title=
Benefits of pressure cooked rice (file photo)

ಬೆಂಗಳೂರು : ಭಾರತದಲ್ಲಿ ಅನ್ನವನ್ನು ಪ್ರಧಾನ ಆಹಾರವಾಗಿ ಸೇವಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಜನರು ಅನ್ನವನ್ನು ತಿನ್ನಲು ಇಷ್ಟ ಪಡುತ್ತಾರೆ. ಅನ್ನ ಬೇಯಿಸುವುದಕ್ಕೂ ಬೇರೆ ಬೇರೆ ವಿಧಾನಗಳಿವೆ. ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸುವವರು  ಪಾತ್ರೆಯಲ್ಲಿ ಅನ್ನವನ್ನು ಬೇಯಿಸುತ್ತಾರೆ. ಹೀಗೆ ಮಾಡುವಾಗ ಅನ್ನದ ಸ್ಟಾರ್ಚ್ ಅನ್ನು ಹೊರ ತೆಗೆಯಲಾಗುತ್ತದೆ.  ಇನ್ನು ಕೆಲವರು, ಕುಕ್ಕರ್ ನಲ್ಲಿ ಬೇಯಿಸಿದ ಅನ್ನಕ್ಕೆ ರುಚಿ ಕಡಿಮೆ ಎಂದು ಪಾತ್ರೆಯಲ್ಲಿಯೇ ಬೇಯಿಸುತ್ತಾರೆ.  ಆದರೆ ಬಹುತೇಕ ಜನರು ಪ್ರೆಶರ್ ಕುಕ್ಕರ್‌ನಲ್ಲಿಯೇ ಅನ್ನವನ್ನು ತಯಾರಿಸುತ್ತಾರೆ. ಪ್ರೆಶರ್ ಕುಕ್ಕರ್‌ನಲ್ಲಿ  ಅನ್ನ ತುಂಬಾ ಬೇಗನೆ ಬೇಯುವುದರಿಂದ, ಸಮಯ ಉಳಿಯುತ್ತದೆ ಎನ್ನುವ ಕಾರಣಕ್ಕೆ ಈ ಆಯ್ಕೆಯನ್ನು ಮಾಡಿಕೊಳ್ಳುವವರು ಹೆಚ್ಚು. ಆದರೆ, ಅನ್ನವನ್ನು ಹೇಗೆ ಬೇಯಿಸಿ ತಿಂದರೆ ಒಳ್ಳೆಯದು ಎನ್ನುವ ಪ್ರಶ್ನೆ ಮಾತ್ರ ಇದ್ದೇ ಇರುತ್ತದೆ.   

ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದ ಅನ್ನ ಆಹಾರ ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ. ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದ ಅನ್ನದ ಪ್ರಯೋಜನಗಳು ಯಾವುವು  ನೋಡೋಣ. 

ಇದನ್ನೂ ಓದಿ :  Morning Headache: ನಿಮಗೂ ಬೆಳಿಗ್ಗೆ ಎದ್ದ ತಕ್ಷಣ ವಿಪರೀತ ತಲೆನೋವಿನ ಸಮಸ್ಯೆ ಇದೆಯೇ? ಇದಕ್ಕೆ ಕಾರಣವೇನು?

ತೂಕ ನಿಯಂತ್ರಣ : 
ಪ್ರೆಶರ್ ಕುಕ್ಕರ್‌ನಲ್ಲಿ ಅನ್ನವನ್ನು ಬೇಯಿಸುವುದರಿಂದ ಅದರ ಸ್ಟಾರ್ಚ್ ಹಾಗೆಯೇ ಉಳಿಸಿಕೊಳ್ಳುತ್ತದೆ. ಇದರಿಂದ ಬಹಳಷ್ಟು ಹೊತ್ತಿನವರೆಗೆ ಹೊಟ್ಟೆ ಹಸಿಯುವುದಿಲ್ಲ. ಹಾಗಾಗಿ ಆಗಾಗ ಏನಾದರು ತಿನ್ನಬೇಕು ಎಂದನಿಸುವುದಿಲ್ಲ. ತೂಕ ನಿಯಂತ್ರಣದಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. 

ಜೀರ್ಣಕ್ರಿಯೆ ಉತ್ತಮವಾಗುತ್ತದೆ : 
ಅಕ್ಕಿಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅದು ಚೆನ್ನಾಗಿ ಬೇಯುತ್ತದೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಕುಕ್ಕರ್ ನಲ್ಲಿ ಬೇಯಿಸುವ ಅನ್ನದಲ್ಲಿ ನೀರಿನ ಪ್ರಮಾಣ ಹಾಗೆಯೇ ಉಳಿದುಕೊಳ್ಳುತ್ತದೆ. ಇದು  ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. 

ಇದನ್ನೂ ಓದಿ : Papaya Seeds: ಪಪ್ಪಾಯಿ ಬೀಜಗಳನ್ನು ಎಸೆಯಬೇಡಿ, ಈ ಸಮಸ್ಯೆಗಳಿಗೆ ರಾಮಬಾಣ ಉಪಾಯ

ಪೌಷ್ಟಿಕತೆ ಉಳಿಯುತ್ತದೆ : 
ಅನ್ನ ಬೇಯಿಸಲು ಪ್ರೆಶರ್ ಕುಕ್ಕರ್ ಅಥವಾ ಸ್ಟೀಮಿಂಗ್ ವಿಧಾನಗಳನ್ನು ಬಳಸುವುದು ಒಳ್ಳೆಯದು. ಪ್ರೆಶರ್ ಕುಕ್ಕರ್‌ನಲ್ಲಿ ಅನ್ನ ಬೆಂಕಿಗೆ ಬಹಳ ಕಡಿಮೆ ಸಮಯ ಒಡ್ಡಿಕೊಳ್ಳುವುದರಿಂದ ಅದರ ಪೌಷ್ಟಿಕಾಂಶವು ಹಾಗೆಯೇ ಉಳಿಯುತ್ತದೆ. 

ಬ್ಯಾಕ್ಟೀರಿಯ ಮುಕ್ತವಾಗಿರುತ್ತದೆ :  
ಹೆಚ್ಚಿನ ಶಾಖ ಮತ್ತು ಒತ್ತಡದಿಂದಾಗಿ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವ ಅನ್ನ ಬ್ಯಾಕ್ಟೀರಿಯಾದಿಂದ  ಮುಕ್ತವಾಗಿರುತ್ತದೆ. 

 

(ಸೂಚನೆಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News