ಸಿಗರೇಟ್ ಬಿಟ್ಟು ನಾಲ್ಕು ದಿನಗಳ ಹೆಚ್ಚು ರಜೆ ಪಡೆಯಿರಿ

ಸಿಗರೇಟ್ ಕಾರ್ಪೋರೆಟ್ ವರ್ಕ್ ಕಲ್ಚರ್ ನ ಒಂದು ಮಹತ್ವದ ಭಾಗ ಎಂದೇ ಹೇಳಲಾಗುತ್ತದೆ. ಬಹುತೇಕ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಬಿಡುವಿನ ವೇಳೆ ಕಂಪನಿಯ ಕೆಲಸಗಾರರು ಸಿಗರೇಟ್ ಸೇದುವುದನ್ನು ನೀವು ನೋಡಿರಬಹುದು.

Last Updated : Jan 17, 2020, 08:16 PM IST
ಸಿಗರೇಟ್ ಬಿಟ್ಟು ನಾಲ್ಕು ದಿನಗಳ ಹೆಚ್ಚು ರಜೆ ಪಡೆಯಿರಿ title=

ಸಿಗರೇಟ್ ಕಾರ್ಪೋರೆಟ್ ವರ್ಕ್ ಕಲ್ಚರ್ ನ ಒಂದು ಮಹತ್ವದ ಭಾಗ ಎಂದೇ ಹೇಳಲಾಗುತ್ತದೆ. ಬಹುತೇಕ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಬಿಡುವಿನ ವೇಳೆ ಕಂಪನಿಯ ಕೆಲಸಗಾರರು ಸಿಗರೇಟ್ ಸೇದುವುದನ್ನು ನೀವು ನೋಡಿರಬಹುದು. ಆದರೆ, ಇಲ್ಲೊಂದು ಕಂಪನಿ ತಮ್ಮ ಕೆಲಸಗಾರ ಸಿಗರೇಟ್ ಚಟವನ್ನು ಬಿಡಿಸಲು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಈ ಕುರಿತು ತನ್ನ ನೌಕರರಿಗೆ ಸುತ್ತೋಲೆ ಹೊರಡಿಸಿರುವ ಕಂಪನಿ, ಕೆಲಸಗಾರರು ಒಂದು ವೇಳೆ ಸಿಗರೇಟ್ ಚಟವನ್ನು ತ್ಯಜಿಸಿದರೆ ವರ್ಷದಲ್ಲಿ ಅವರಿಗೆ ನಾಲ್ಕು ದಿನಗಳ ಹೆಚ್ಚೂವರಿ ರಜೆ ನೀಡಲಾಗುವುದು ಎಂದು ಹೇಳಿದೆ.

ಕಂಪನಿ ಯಾಕೆ ಈ ರೀತಿಯ ಆಫರ್ ನೀಡಿದೆ?
ಮಧ್ಯಮ ವರದಿಗಳ ಪ್ರಕಾರ ಇಂಗ್ಲೆಂಡ್ ಮೂಲದ ಕಂಪನಿ KCJ ಟ್ರೇನಿಂಗ ಮತ್ತು ಎಂಪ್ಲಾಯ್ಮೆಂಟ್ ಸೊಲ್ಯುಶನ್ ತನ್ನ ನೌಕರರ ಆರೋಗ್ಯ ಕಾಪಾಡುವ ಉದ್ದೇಶದಿಂದ ಈ ವಿನೂತನ ಯೋಜನೆ ಹಮ್ಮಿಕೊಂಡಿದೆ. ಕಂಪನಿಯಲ್ಲಿ ಕೆಲಸ ಮಾಡುವ ಎಲ್ಲ ನೌಕರರು ಸ್ಮೋಕಿಂಗ್ ನಿಂದ ಆಗುವ ದುಷ್ಪರಿಣಾಮಗಳಿಂದ ಕಾಪಾಡಿಕೊಳ್ಳಿ ಎಂದು ಹೇಳಿದೆ. ಸ್ಮೋಕಿಂಗ್ ತ್ಯಜಿಸಿದ ನೌಕರರು ಹೆಚ್ಚು ಬ್ರೇಕ್ ತೆಗೆದುಕೊಳ್ಳದ ಕಾರಣ ಇದು ಕಂಪನಿಯ ಉತ್ಪಾದನೆಯ ಮೇಲೂ ಕೂಡ ಸಕಾರಾತ್ಮಕ ಪರಿಣಾಮ ಬೀರಲಿದೆ.

ಈ ಕುರಿತು ಮಾತನಾಡಿರುವ ಕಂಪನಿಯ MD ಡಾನ್ ಬ್ರಾಯ್ದನ್ ದೂಮ್ರಪಾನ ಮಾಡುವ ನೌಕರರ ಮೇಲೆ ದಂಡ ವಿಧಿಸುವುದಕ್ಕಿಂತ, ಧೂಮ್ರಪಾನ ನಡೆಸದ ನೌಕರರನ್ನು ಪ್ರೋತ್ಸಾಹಿಸುವುದು ಉತ್ತಮ ಎಂದಿದ್ದಾರೆ. ಸ್ಮೋಕಿಂಗ್ ಮಾಡುವವರು ಆಫಿಸ್ ನಲ್ಲಿ ಹೆಚ್ಚು ಬ್ರೇಕ್ ತೆಗೆದುಕೊಳ್ಳುತ್ತಾರೆ. ಆದರೆ, ಸ್ಮೋಕಿಂಗ್ ಮಾಡದೆ ಇರುವವರು ಹೆಚ್ಚು ಬ್ರೇಕ್ ತೆಗೆದುಕೊಳ್ಳುವುದಿಲ್ಲ.

ಈ ಐಡಿಯಾ ಜಪಾನ್ ನಿಂದ ಹೊರಹೊಮ್ಮಿದೆ
ಇದಕ್ಕೂ ಮೊದಲು ಜಪಾನ್ ನ ಟೋಕಿಯೋನಲ್ಲಿರುವ ಮಾರ್ಕೆಟಿಂಗ್ ಕಂಪನಿ ಪಿಆಲಾ INC ತನ್ನ ನೌಕರರನ್ನು ಧೂಮ್ರಪಾನದಿಂದ ದೂರಮಾಡಲು ಈ ಯೋಜನೆ ಅನುಷ್ಠಾನಕ್ಕೆ ತಂದಿತ್ತು. ಸ್ಮೋಕಿಂಗ್ ನಿಂದ 15 ನಿಮಿಷದ ಕೆಲಸದ ಮೇಲೆ ಪರಿಣಾಮ ಉಂಟಾಗುತ್ತದೆ ಎಂಬುದು ಕಂಪನಿಯ ಅನಿಸಿಕೆಯಾಗಿತ್ತು. ಆದರೆ, ಸ್ಮೋಕಿಂಗ್ ಮಾಡದ ಇತರೆ ಕಂಪನಿಯ ನೌಕರರ ದೂರಿನ ಮೇಲೆ ಈ ಹೆಜ್ಜೆ ಇಡಲಾಗಿತ್ತು. ತಾವು ಸಿಗರೇಟ್ ಬ್ರೇಕ್ ಗೆ ಹೋಗದ ಕಾರಣ ತಾವು ದಿನದಲ್ಲಿ ಹೆಚ್ಚಿನ ಸಮಯದವರೆಗೆ ಕಾರ್ಯನಿರ್ವಹಿಸುತ್ತೇವೆ ಎಂಬುದು ಅವರ ಅನಿಸಿಕೆಯಾಗಿತ್ತು.

Trending News