ಇನ್ನು ಸಕ್ಕರೆ ಕಾಯಿಲೆಗೆ ಭಯ ಪಡಬೇಕಿಲ್ಲ! ಮಧುಮೇಹ ತಡೆಗೆ ಸಿಕ್ಕಿದೆ ಔಷಧಿ.!

Type 1 Diabetes Preventative Treatment: ಟೈಪ್ 1 ಡಯಾಬಿಟೀಸ್ ಅನ್ನು ತಡೆಗಟ್ಟುವ ಚಿಕಿತ್ಸೆಗೆ ಅಮೆರಿಕ ತನ್ನ ಅನುಮೋದನೆಯನ್ನು ನೀಡಿದೆ. ಈ ಔಷಧಿಯನ್ನು ಪ್ರೊವೆನ್ಬಿಯೊ ಮತ್ತು ಸನೋಫಿ ಎಂಬ ಔಷಧೀಯ ಕಂಪನಿ   ಹೊರ ತಂದಿದೆ.  

Written by - Ranjitha R K | Last Updated : Jan 27, 2023, 11:04 AM IST
  • ಟೈಪ್ 1 ಡಯಾಬಿಟೀಸ್ ಅನ್ನು ತಡೆಗಟ್ಟುವ ಚಿಕಿತ್ಸೆಗೆ ಅನುಮೋದನೆ
  • ಈ ಔಷಧಿಯ ಹೆಸರು ಟಿಝಿಲ್ಡ್
  • ಈ ಔಷಧಿಯು ಟೈಪ್-1 ಮಧುಮೇಹವನ್ನು ತಡೆಯುತ್ತದೆ.
ಇನ್ನು ಸಕ್ಕರೆ ಕಾಯಿಲೆಗೆ ಭಯ ಪಡಬೇಕಿಲ್ಲ! ಮಧುಮೇಹ ತಡೆಗೆ ಸಿಕ್ಕಿದೆ ಔಷಧಿ.!    title=

Type 1 Diabetes Preventative Treatment : ಟೈಪ್ 1 ಡಯಾಬಿಟೀಸ್ ಅನ್ನು ತಡೆಗಟ್ಟುವ ಚಿಕಿತ್ಸೆಗೆ ಅಮೆರಿಕ ತನ್ನ ಅನುಮೋದನೆಯನ್ನು ನೀಡಿದೆ. ಈ ಔಷಧಿಯನ್ನು ಪ್ರೊವೆನ್ಬಿಯೊ ಮತ್ತು ಸನೋಫಿ ಎಂಬ ಔಷಧೀಯ ಕಂಪನಿ   ಹೊರ ತಂದಿದೆ. ಈ ಔಷಧಿಯ ಹೆಸರು ಟಿಝಿಲ್ಡ್  (Tzield). ಈ ಔಷಧಿಯು ಟೈಪ್-1 ಮಧುಮೇಹವನ್ನು ತಡೆಯುತ್ತದೆ. ಇದನ್ನು ಸೇವಿಸುವುದರಿಂದ ಯಾರಿಗೂ ಮಧುಮೇಹ ಬರುವುದಿಲ್ಲ ಎಂದು Tzield ತಯಾರಿಸುವ ಫಾರ್ಮಾ ಕಂಪನಿ ಹೇಳಿಕೊಂಡಿದೆ. ಯುಎಸ್ ಆಹಾರ ಮತ್ತು ಔಷಧ ನಿರ್ವಾಹಕರು ಈ ನಿರ್ದಿಷ್ಟ ಔಷಧವನ್ನು ನವೆಂಬರ್ 2022 ರಲ್ಲಿ ಅನುಮೋದಿಸಿದ್ದಾರೆ.

ಇದಕ್ಕೂ ಮುನ್ನ ಮಧುಮೇಹಕ್ಕೆ ಔಷಧಿ ಇರಲಿಲ್ಲ :
ಟೈಪ್-1 ಮಧುಮೇಹವನ್ನು ಆಟೋ ಇಮ್ಮ್ಯುನ್ ರಿಯಾಕ್ಷನ್ ಎಂದು ಕರೆಯಲಾಗುತ್ತದೆ. ಈ ಪ್ರತಿಕ್ರಿಯೆಯು ಇನ್ಸುಲಿನ್ ಉತ್ಪಾದಿಸುವ ಮೇದೋಜ್ಜೀರಕ ಗ್ರಂಥಿಯಲ್ಲಿನ ಸೆಲ್ಸ್ ಗಳನ್ನು ನಾಶಪಡಿಸುತ್ತದೆ. ಇವುಗಳನ್ನು ಬೀಟಾ ಸೆಲ್ಸ್ ಎಂದು ಕರೆಯಲಾಗುತ್ತದೆ. ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮೊದಲು ಈ ಪ್ರಕ್ರಿಯೆಯು  ತಿಂಗಳುಗಳಿಂದ ಹಿಡಿಸು ವರ್ಷಗಳವರೆಗೂ ಮುಂದುವರೆಯುತ್ತದೆ. ಇದು ಟೈಪ್ 2 ಡಯಾಬಿಟಿಸ್‌ಗಿಂತ ಭಿನ್ನವಾಗಿದೆ. ಟೈಪ್ 2 ಡಯಾಬಿಟಿಸ್ ಜೀವನಶೈಲಿಯ ಕಾರಣದಿಂದ ಕಾಣಿಸಿಕೊಳ್ಳುತ್ತದೆ. ಟೈಪ್-1 ಮಧುಮೇಹ ತಡೆಗೆ ಇಲ್ಲಿಯವರೆಗೆ ಯಾವುದೇ ಚಿಕಿತ್ಸೆ ಇರಲಿಲ್ಲ. 

ಇದನ್ನೂ ಓದಿ : White Hair : ಕೂದಲು ಬಿಳಿಯಾಗಲು ಕಾರಣ C ವಿಟಮಿನ್ : ತಡೆಯಲು ಸೇವಿಸಿ ಈ ಪದಾರ್ಥಗಳನ್ನು! 

ಈ ವಯಸ್ಸಿನವರಿಗೆ ಆಗಲಿದೆ ಅನುಕೂಲ : 
ಪವಾಡವೆಂದು ಪರಿಗಣಿಸಲಾದ ಈ ಔಷಧಿಯನ್ನು ಮಧುಮೇಹದ  ಎರಡನೇ ಹಂತದಲ್ಲಿರುವ 8 ವರ್ಷ ಮೇಲ್ಪಟ್ಟವರಿಗೆ ಅನುಮೋದಿಸಲಾಗಿದೆ. ಅಮೇರಿಕನ್ ತಜ್ಞರ ಪ್ರಕಾರ, ಇಲ್ಲಿಯವರೆಗೆ ಟೈಪ್ -1 ಮಧುಮೇಹಕ  ತಡೆಗೆ ಯಾವುದೇ ಚಿಕಿತ್ಸೆ ಇರಲಿಲ್ಲ.

ಕ್ಲಿನಿಕಲ್ ಪ್ರಯೋಗದ ರಿಸಲ್ಟ್ :
ಇನ್ಸುಲಿನ್ ಇಲ್ಲದೆ ಸಾಮಾನ್ಯ ಜೀವನವನ್ನು ನಡೆಸುತ್ತಿರುವುದು ನಮಗೆ ಸಿಕ್ಕ ವರದಾನವೇ ಸರಿ ಎನ್ನುತ್ತಾರೆ ಈ ಔಷಧದ ಪ್ರಯೋಗದಲ್ಲಿ ತೊಡಗಿರುವ ಜನರು. ಈ ಔಷಧಿಯು ಕೋಟಿಗಟ್ಟಲೆ ಜನರ ಜೀವ ಉಳಿಸುವ ಭರವಸೆಯ ಹೊಸ ಕಿರಣವನ್ನು ಮೂಡಿಸಿದೆ ಎನ್ನುವುದು ಇವರೆಲ್ಲರ ನಂಬಿಕೆ. ಇದೊಂದು ದೊಡ್ಡ ಸಾಧನೆ. ಟೈಪ್-1 ಮಧುಮೇಹದಿಂದ ಬಳಲುತ್ತಿರುವವರು ಮಾತ್ರ ಇದನ್ನು ಅರ್ಥಮಾಡಿಕೊಳ್ಳಬಹುದು ಎನ್ನುತ್ತಾರೆ ಇವರುಗಳು. 

ಇದನ್ನೂ ಓದಿ : Milk and Ghee Benefits : ಹಾಲಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕಿದೆ ಈ ಅದ್ಭುತ ಪ್ರಯೋಜನಗಳು 

ಔಷಧವು ಹೇಗೆ ಕೆಲಸ ಮಾಡುತ್ತದೆ? :
Tzield ಮಾನವ ದೇಹದ  ಆಟೋ ಇಮ್ಮುನ್ ರೆಸ್ಪಾನ್ಸ್ ನೊಂದಿಗೆ ಸೇರಿಕೊಳ್ಳುತ್ತದೆ. ಈ ರೋಗದಲ್ಲಿ, ಪ್ರತಿರಕ್ಷಣಾ ಕೋಶಗಳು ಮೇದೋಜ್ಜೀರಕ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಬೀಟಾ ಕೋಶಗಳನ್ನು ನಾಶಮಾಡುತ್ತವೆ. ಈ ರೋಗನಿರೋಧಕ ಕೋಶಗಳು ಇನ್ಸುಲಿನ್ ಅನ್ನು ತಯಾರಿಸುತ್ತವೆ. ರಕ್ತದಲ್ಲಿನ ಸಕ್ಕರೆಯನ್ನು ಇತರ ಜೀವಕೋಶಗಳಿಗೆ ಸಾಗಿಸಲು ಇನ್ಸುಲಿನ್ ಸಹಾಯ ಮಾಡುತ್ತದೆ. . ಪ್ರಯೋಗಗಳಲ್ಲಿ Tzield ಎರಡು ವರ್ಷಗಳಿಗಿಂತ ಹೆಚ್ಚು ಕಾಲ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ, ರೋಗವನ್ನು ಇದಕ್ಕಿಂತ ಹೆಚ್ಚು ಕಾಲ ತಡೆಯಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News