Monsoon Health Tips: ಮಾನ್ಸೂನ್ನಲ್ಲಿ ಈ 3 ವಿಷಯಗಳ ಬಗ್ಗೆ ಇರಲಿ ಎಚ್ಚರ

ನೀವು ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಕಾಲೋಚಿತ ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.

Written by - Yashaswini V | Last Updated : Jul 20, 2021, 02:35 PM IST
  • ಮಳೆಗಾಲದ ದಿನಗಳಲ್ಲಿ ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು
  • ಮಳೆಯಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ
  • ಮಳೆಗಾಲದಲ್ಲಿ ಕುಡಿಯುವ ನೀರು ಸಂಪೂರ್ಣವಾಗಿ ಸ್ವಚ್ಛವಾಗಿರಬೇಕು ಎಂಬ ಬಗ್ಗೆ ನಿಗಾವಹಿಸಿ
Monsoon Health Tips: ಮಾನ್ಸೂನ್ನಲ್ಲಿ ಈ 3 ವಿಷಯಗಳ ಬಗ್ಗೆ ಇರಲಿ ಎಚ್ಚರ title=
Monsoon Health Tips

Monsoon Health Tips: ಮಳೆಗಾಲ ಆರಂಭವಾಯಿತೆಂದರೆ ಬಿಸಿಲಿನ ಬೇಗೆಯಿಂದ ನಿಟ್ಟುಸಿರು ಬಿಡುವಂತೆ ಭಾಸವಾಗುತ್ತದೆ. ಆದರೆ ಈ ಋತುವಿನಲ್ಲಿ ಹಲವಾರು ಕಾಯಿಲೆಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಕೂಡ ಬಹಳ ಮುಖ್ಯವಾಗಿದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ನೆಗಡಿ, ಕೆಮ್ಮು, ಅಲರ್ಜಿ, ಶೀತ, ಜ್ವರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮಾನ್ಸೂನ್ ನಲ್ಲಿ ಆರೋಗ್ಯದ ಬಗ್ಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಮಳೆಗಾಲದಲ್ಲಿ (Monsoon) ನೀವು ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಕಾಲೋಚಿತ ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.

ಇದನ್ನೂ ಓದಿ- Black sesame seeds For Health: ಈ ಆರು ಕಾರಣಗಳಿಗಾಗಿ ಆಹಾರದಲ್ಲಿ ಸೇವಿಸಿ ಕಪ್ಪು ಎಳ್ಳು

ಮಾನ್ಸೂನ್ನಲ್ಲಿ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ 3 ಪ್ರಮುಖ ವಿಷಯಗಳಿವು:-
>> ಮಳೆಗಾಲದ ದಿನಗಳಲ್ಲಿ ಹೊರಗಿನ ಆಹಾರವನ್ನು (Food) ಸೇವಿಸುವುದನ್ನು ತಪ್ಪಿಸಬೇಕು. ಇದರೊಂದಿಗೆ ಕಾಮಾಲೆ, ಟೈಫಾಯಿಡ್, ಹೊಟ್ಟೆ, ಕರುಳಿನ ಕಾಯಿಲೆಗಳು ದೂರವಾಗುತ್ತವೆ. ನೀವು ಏನೇ ಸೇವಿಸಿದರೂ, ಮನೆಯಲ್ಲಿ ತಾಜಾ ಬೇಯಿಸಿದ ಆಹಾರವನ್ನು ಸೇವಿಸಿ. ಈ ಸಮಯದಲ್ಲಿ, ಹೊರಗಿನಿಂದ ಬರುವ ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆದ ನಂತರ ಮಾತ್ರವೇ ಬಳಸಿ.

>> ಮಳೆಯಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಕೀಟಗಳು ಮತ್ತು ನೊಣಗಳು ಮನೆಗೆ ಪ್ರವೇಶಿಸದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ. ಮಳೆಯಲ್ಲಿ ಹೊರಗಿನಿಂದ ಬರುವ ಯಾರಾದರೂ ಮನೆಯ ಹೊರಗೆ ಚಪ್ಪಲಿ ಬಿಡುವಂತೆ ನಿಗಾವಹಿಸಿ. ಇದು ಚರ್ಮದ ಸೋಂಕು, ಜ್ವರ ಮುಂತಾದ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ.

ಇದನ್ನೂ ಓದಿ- Fruits astrology: ನಿಮ್ಮ ನೆಚ್ಚಿನ ಹಣ್ಣಿನಿಂದ ನಿಮ್ಮ ಸ್ವಭಾವವನ್ನು ತಿಳಿಯಬಹುದು

>> ಕೊಳಕು ನೀರಿನಿಂದಾಗಿ ಆರೋಗ್ಯಕ್ಕೆ ಸಂಬಂಧಿಸಿದ ಹಲವು ತೊಂದರೆಗಳು ಉಂಟಾಗುತ್ತವೆ. ಆದ್ದರಿಂದ, ಮಳೆಗಾಲದಲ್ಲಿ ಕುಡಿಯುವ ನೀರು ಸಂಪೂರ್ಣವಾಗಿ ಸ್ವಚ್ಛವಾಗಿರಬೇಕು ಎಂಬ ಬಗ್ಗೆ ನಿಗಾವಹಿಸಿ. ಸಾಧ್ಯವಾದರೆ, ಈ ಋತುವಿನಲ್ಲಿ ಕಾಯಿಸಿ ಆರಿಸಿದ ನೀರನ್ನು ಕುಡಿಯಿರಿ.

(ಹಕ್ಕುತ್ಯಾಗ: ಲೇಖನದಲ್ಲಿ ನೀಡಿರುವ ಸಲಹೆಯು ಸಾಮಾನ್ಯ ಮಾಹಿತಿ ಮಾತ್ರ. ಇದು ತಜ್ಞರ ಅಭಿಪ್ರಾಯವಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News