ಮಾತ್ರೆ, ಇನ್ಸುಲಿನ್ ಬೇಕಿಲ್ಲ ಈ ಮೂರು ವಸ್ತುಗಳು ಮುಕ್ತಿ ನೀಡುತ್ತವೆ ಡಯಾಬಿಟೀಸ್ ನಿಂದ

Home Remedies To Control Diabetes:ಮಧುಮೇಹ ಒಮ್ಮೆ ಬಂತೆಂದರೆ ಸಾಯುವವರೆಗೂ ಕಾಡುತ್ತದೆ. ಈ ಕಾರಣದಿಂದಾಗಿಯೇ ಮಧುಮೇಹವಿದ್ದಾಗ ದಿನನಿತ್ಯದ ಆಹಾರ ಕ್ರಮವನ್ನು ಸಮತೋಲಿತವಾಗಿಟ್ಟುಕೊಳ್ಳಬೇಕು.

Written by - Ranjitha R K | Last Updated : Jul 21, 2022, 12:31 PM IST
  • ಮಧುಮೇಹದಲ್ಲಿ ಹಲವು ವಿಧಗಳಿವೆ
  • ಬೇರೆ ಬೇರೆ ಕಾರಣಗಳಿಂದ ಈ ರೋಗ ಬರುತ್ತದೆ
  • ಮಧುಮೇಹ ಒಮ್ಮೆ ಬಂತೆಂದರೆ ಸಾಯುವವರೆಗೂ ಕಾಡುತ್ತದೆ.
ಮಾತ್ರೆ, ಇನ್ಸುಲಿನ್ ಬೇಕಿಲ್ಲ ಈ ಮೂರು ವಸ್ತುಗಳು ಮುಕ್ತಿ ನೀಡುತ್ತವೆ ಡಯಾಬಿಟೀಸ್ ನಿಂದ  title=
diabetes control tips (file photo)

ಬೆಂಗಳೂರು : Home Remedies To Control Diabetes : ಮಧುಮೇಹದಲ್ಲಿ ಹಲವು ವಿಧಗಳಿವೆ. ವ್ಯಕ್ತಿಗೆ ಮಧುಮೇಹ ಬರಲು  ಬೇರೆ ಬೇರೆ ಕಾರಣಗಳಿರುತ್ತವೆ.  ಮಧುಮೇಹ ಒಮ್ಮೆ  ಬಂತೆಂದರೆ ಸಾಯುವವರೆಗೂ ಕಾಡುತ್ತದೆ. ಈ ಕಾರಣದಿಂದಾಗಿಯೇ   ಮಧುಮೇಹವಿದ್ದಾಗ ದಿನನಿತ್ಯದ ಆಹಾರ ಕ್ರಮವನ್ನು ಸಮತೋಲಿತವಾಗಿಟ್ಟುಕೊಳ್ಳಬೇಕು. ಇದರ ಜೊತೆಗೆ ಸಿಹಿತಿಂಡಿಗಳಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳಬೇಕು. ತೂಕ ಹೆಚ್ಚಳವಾಗದಂಥಹ ಆಹಾರವನ್ನು ಸೇವಿಸಬೇಕು. ಮಧುಮೇಹದ ಜೊತೆಗೆ ದೇಹ ತೂಕವೂ ಹೆಚ್ಚಾಗಿದ್ದರೆ ಹೃದಯಾಘಾತದ ಅಪಾಯ ಕೂಡಾ ಹೆಚ್ಚುತ್ತದೆ. 

ಅಲೋವೆರಾ : 
ಅಲೋವೆರಾ ಒಂದು ಆಯುರ್ವೇದ ಮೂಲಿಕೆ. ಇದು ಇಂದು ಪ್ರತಿಯೊಬ್ಬರ ಮನೆಗಳಲ್ಲಿ ಸುಲಭವಾಗಿ ಸಿಗುತ್ತದೆ. ಅಲೋವೆರಾವನ್ನು ಪ್ರಾಚೀನ ಕಾಲದಿಂದಲೂ ಸಕ್ಕರೆ ಕಾಯಿಲೆಗೆ ವರವೆಂದೇ ಹೇಳಲಾಗುತ್ತದೆ.  ಪ್ರತಿದಿನ ಇದರ ರಸವನ್ನು ಸೇವಿಸುತ್ತಿದ್ದರೆ ಈ ರೋಗದಿಂದ ಮುಕ್ತಿ ಪಡೆಯಬಹುದು. ಅಲೋವೆರಾದಲ್ಲಿ ಹೈಡ್ರೋಫಿಲಿಕ್ ಫೈಬರ್, ಗ್ಲುಕೋಮನ್ನನ್ ಮತ್ತು ಫೈಟೊಸ್ಟೆರಾಲ್ ಗಳಂತಹ ಅಂಶಗಳು ಕಂಡುಬರುತ್ತವೆ. ಈ ಅಂಶಗಳು ಮಧುಮೇಹವನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ. 

ಇದನ್ನೂ ಓದಿ : ಹಲ್ಲುಜ್ಜುವ ಬ್ರಷ್‌ ಅನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು?

ಬೇವು : 
ನಮ್ಮ ಸುತ್ತ ಮುತ್ತ ಬೇವಿನ ಮರ ಇದ್ದೇ ಇರುತ್ತದೆ. ಅನೇಕ ಕಂಪನಿಗಳು  ಔಷಧ ತಯಾರಿಕೆಯಲ್ಲಿ ಮತ್ತು ಸಾಬೂನು ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ. ಇದರ ಎಲೆಗಳನ್ನು ಅರೆದು ಕುಡಿಯುವುದರಿಂದ ನಮ್ಮ ಹೊಟ್ಟೆಯಲ್ಲಿರುವ ರೋಗಾಣುಗಳೂ ಸಾಯುತ್ತವೆ. ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಜೊತೆಗೆ ಮಧುಮೇಹ  ನಿಯಂತ್ರಣಕ್ಕೆ ಬೇವಿನ ರಸವನ್ನು ಅತ್ಯಂತ ನಿಖರವಾದ ಚಿಕಿತ್ಸೆ ಎಂದು  ಹೇಳಲಾಗುತ್ತದೆ. 

ನೆಲ್ಲಿಕಾಯಿ : 
ನೆಲ್ಲಿಕಾಯಿ ತನ್ನದೇ ಆದ ಅನೇಕ ಪ್ರಯೋಜನಗಳನ್ನು ಹೊಂದಿದೆ. ನೆಲ್ಲಿಕಾಯಿಯನ್ನು ಚರ್ಮದಿಂದ ಹಿಡಿದು ಹೊಟ್ಟೆಯವರೆಗಿನ ವಿವಿಧ ಸಮಸ್ಯೆಗಳಿಗೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ನಮ್ಮ ಮೂಳೆಗಳಿಗೆ ಒಳ್ಳೆಯದು.   ಪ್ರತಿನಿತ್ಯ ನೆಲ್ಲಿ ಕಾಯಿ ಜ್ಯೂಸ್ ಕುಡಿಯುವುದರಿಂದ ಮಧುಮೇಹ ಕಾಯಿಲೆಯಿಂದ ಮುಕ್ತಿ ಪಡೆಯಬಹುದು. 

ಇದನ್ನೂ ಓದಿ : ಆಲ್ಕೋಹಾಲ್ ಮಾತ್ರವಲ್ಲ, ನಿಮ್ಮ ಈ ಅಭ್ಯಾಸಗಳು ಲಿವರ್ ಡ್ಯಾಮೇಜ್ ಮಾಡಬಹುದು

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News