ಈ ನಾಲ್ಕು ಸಂದರ್ಭಗಳಲ್ಲಿ ಪರಂಗಿ ಹಣ್ಣನ್ನು ಅಪ್ಪಿತಪ್ಪಿಯೂ ಸೇವಿಸಬಾರದು

ಫಿಟ್‌ನೆಸ್‌ಗೆ ಪರಂಗಿಹಣ್ಣನ್ನು ಅತ್ಯುತ್ತಮ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಪರಂಗಿ ಹಣ್ಣಿನ ಸೇವನೆಯಿಂದ ತೂಕ ಇಳಿಕೆಯ ಜೊತೆಗೆ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಕೆಲವು ಸಮಸ್ಯೆಗಳಿರುವವರಿಗೆ ಪರಂಗಿಹಣ್ಣು ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Feb 24, 2023, 10:20 AM IST
  • ಪರಂಗಿ ಹಣ್ಣಿನಲ್ಲಿ ಮೆಗ್ನೀಸಿಯಮ್, ಫೈಬರ್, ವಿಟಮಿನ್ಸ್, ಫೈಬರ್ ನಂತಹ ಅನೇಕ ಪೋಷಕಾಂಶಗಳು ಕಂಡುಬರುತ್ತವೆ.
  • ಪರಂಗಿ ಹಣ್ಣು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
  • ಉತ್ತಮ ಆರೋಗ್ಯಕ್ಕೆ ಪರಂಗಿ ಹಣ್ಣು ಬಹಳ ಪ್ರಯೋಜನಕಾರಿ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ...
ಈ ನಾಲ್ಕು ಸಂದರ್ಭಗಳಲ್ಲಿ ಪರಂಗಿ ಹಣ್ಣನ್ನು ಅಪ್ಪಿತಪ್ಪಿಯೂ ಸೇವಿಸಬಾರದು  title=
Papaya Side Effects

ಬೆಂಗಳೂರು: ಎಲ್ಲಾ ಋತುಗಳು ಬಹಳ ಸುಲಭವಾಗಿ ಲಭ್ಯವಿರುವ ಹಣ್ಣುಗಳಲ್ಲಿ ಪರಂಗಿಹಣ್ಣು ಕೂಡ ಒಂದು. ಪರಂಗಿ ಹಣ್ಣಿನ ಸೇವನೆಯು ಉದರ ಸಂಬಂಧಿತ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವುದರ ಜೊತೆಗೆ ತೂಕ ಇಳಿಕೆಯಲ್ಲಿಯೂ ಪರಿಣಾಮಕಾರಿ ಆಗಿದೆ. ಇದಲ್ಲದೆ, ಪರಂಗಿ ಹಣ್ಣಿನ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ಇದು ನಮ್ಮನ್ನು ಹಲವು ಆರೋಗ್ಯ ಸಮಸ್ಯೆಗಳಿಂದಲೂ ದೂರ ಉಳಿಯುವಂತೆ ಮಾಡುತ್ತದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಪರಂಗಿ ಹಣ್ಣು ಕೆಲವರಿಗೆ ಬಹಳ ಅಪಾಯಕಾರಿ ಎಂದು ಸಾಬೀತು ಪಡಿಸಬಹುದು. ಅದರಲ್ಲೂ ನಾಲ್ಕು ಸಂದರ್ಭಗಳಲ್ಲಿ ಅಪ್ಪಿತಪ್ಪಿಯೂ ಪರಂಗಿ ಹಣ್ಣನ್ನು ತಿನ್ನಲೇಬಾರದು ಎಂದು ಹೇಳಲಾಗುತ್ತದೆ.

ಈ ನಾಲ್ಕು ಸಂದರ್ಭಗಳಲ್ಲಿ ಪರಂಗಿಹಣ್ಣನ್ನು ತಿನ್ನಲೇಬಾರದು: 
ಗರ್ಭಿಣಿಯರು:

ಮೆಗ್ನೀಸಿಯಮ್, ಫೈಬರ್, ವಿಟಮಿನ್ಸ್, ಫೈಬರ್ ನಂತಹ ಅನೇಕ ಪೋಷಕಾಂಶಗಳ ಆಗರವಾಗಿರುವ ಪರಂಗಿಹಣ್ಣು ಆರೋಗ್ಯಕ್ಕೆ ಅತ್ಯುತ್ತಮವಾದರೂ ಕೂಡ, ಗರ್ಭಿಣಿಯರಿಗೆ ಪಪ್ಪಾಯಿ ಸೇವನೆ ಒಳ್ಳೆಯದಲ್ಲ. ಪರಂಗಿಹಣ್ಣಿನಲ್ಲಿ ಕಂಡು ಬರುವ ಪಾಪೈನ್ ದೇಹದಲ್ಲಿನ ಜೀವಕೋಶ ಪೊರೆಯನ್ನು ಹಾನಿಗೊಳಿಸುತ್ತದೆ. ಹಾಗಾಗಿ, ಗರ್ಭಿಣಿಯರು ಅಪ್ಪಿತಪ್ಪಿಯೂ ಪರಂಗಿಹಣ್ಣನ್ನು ತಿನ್ನಲೇಬಾರದು.

ಇದನ್ನೂ ಓದಿ- ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಈ ಆಹಾರಗಳನ್ನು ನಿತ್ಯ ಸೇವಿಸಿ 

ಔಷಧಿ ಸೇವನೆಯ ಮೊದಲು:
ಕೆಲವರು ಪರಂಗಿ ಹಣ್ಣನ್ನು ತಿಂದು ಸ್ವಲ್ಪ ಹೊತ್ತಿನಲ್ಲೇ ಔಷಧಿ ಸೇವಿಸುತ್ತಾರೆ. ಆದರೆ, ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಲಿದೆ. ಪಪ್ಪಾಯಿ ಮತ್ತು ಔಷಧಿಗಳ ಕಾಕ್ಟೈಲ್ ದೇಹದಲ್ಲಿ ರಕ್ತವನ್ನು ತೆಳುವಾಗಿಸುತ್ತದೆ. ಹಾಗಾಗಿ, ಇವುಗಳನ್ನು ಒಟ್ಟಿಗೆ ಸೇವಿಸುವುದರಿಂದ ದೇಹದಿಂದ ರಕ್ತಸ್ರಾವವಾಗುವ ಅಪಾಯ ಹೆಚ್ಚು ಎಂದು ಹೇಳಲಾಗುತದೆ.

ಸ್ಕಿನ್ ಅಲರ್ಜಿ:
ಕೆಲವರಿಗೆ ಪರಂಗಿ ಹಣ್ಣಿನ ಸೇವನೆಯಿಂದ ಚರ್ಮದ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಇದಲ್ಲದೆ, ಪರಂಗಿ ಹಣ್ಣಿನ ಸೇವನೆಯಿಂದ ಕೆಲವರಲ್ಲಿ ಕೆಂಪು ದದ್ದುಗಳು, ತಲೆನೋವು, ತಲೆತಿರುಗುವಿಕೆ ಮತ್ತು ಊತ ಉಂಟಾಗುತ್ತದೆ. ಇಂತಹವರು ಕೂಡ ಪರಂಗಿ ಹಣ್ಣನ್ನು ತಿನ್ನಬಾರದು.

ಇದನ್ನೂ ಓದಿ- ಬೆಲ್ಲದ ಚಹಾ ಸೇವನೆಯಿಂದ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನಗಳು

ಲೋ ಶುಗರ್:
ಲೋ ಶುಗರ್ ಸಮಸ್ಯೆ ಇರುವವರಿಗೂ ಕೂಡ ಪರಂಗಿ ಹಣ್ಣಿನ ಸೇವನೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. ವಾಸ್ತವವಾಗಿ, ಮಧುಮೇಹ ಸಮಸ್ಯೆ ಇರುವವರಿಗೆ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಿಸಲು ಪರಂಗಿಹಣ್ಣನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಲೋ ಶುಗರ್ ಸಮಸ್ಯೆ ಇರುವವರು ಪರಂಗಿ ಸೇವಿಸುವುದರಿಂದ ಇದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News