ಈ ಒಂದು ಬೀಜವನ್ನು ಸೇವಿಸಿದರೆ ಸಾಕು ತಿಂಗಳೊಳಗೆ ಕರಗುವುದು ಹೊಟ್ಟೆ ಭಾಗದ ಕೊಬ್ಬು

Weight Loss With Poppy Seeds: ಈ ಒಂದು ಬೀಜವನ್ನು ಸೇವಿಸುವ ಮೂಲಕ ತಿಂಗಳೊಳಗೆ ಹೊಟ್ಟೆ ಮತ್ತು ಸೊಂಟದ ಭಾಗದ ಕೊಬ್ಬು ಕರಗಿಸುವುದು ಸಾಧ್ಯವಾಗುತ್ತದೆ.  

Written by - Ranjitha R K | Last Updated : Jul 24, 2023, 01:57 PM IST
  • ಪ್ರತಿಯೊಬ್ಬರೂ ಫಿಟ್ ಆಗಿರಬೇಕೆಂದು ಬಯಸುತ್ತಾರೆ.
  • ಸ್ಥೂಲಕಾಯತೆಯು ಅನೇಕ ರೋಗಗಳ ಆಗರ.
  • ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಹೇಗೆ?
ಈ ಒಂದು ಬೀಜವನ್ನು ಸೇವಿಸಿದರೆ ಸಾಕು ತಿಂಗಳೊಳಗೆ ಕರಗುವುದು ಹೊಟ್ಟೆ ಭಾಗದ ಕೊಬ್ಬು  title=

Weight Loss With Poppy Seeds : ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಫಿಟ್ ಆಗಿರಬೇಕೆಂದು ಬಯಸುತ್ತಾರೆ. ಸ್ಥೂಲಕಾಯತೆಯು ಅನೇಕ ರೋಗಗಳ ಆಗರ. ದೇಹದ ತೂಕ ಹೆಚ್ಚಾಗುತ್ತಿದ್ದಂತೆಯೇ ಒಂದೊಂದೇ ರೋಗಗಳಿಗೆ ಆಹ್ವಾನ ನೀಡುತ್ತಾ ಹೋಗುತ್ತದೆ. ಅನೇಕ ಜನರು ತೂಕ ಇಳಿಸಿಕೊಳ್ಳಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಆಹಾರ, ವ್ಯಾಯಾಮ, ಜಿಮ್ ಇತ್ಯಾದಿಗಳ ಮೂಲಕ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ಸಣ್ಣಸಣ್ಣ ಅಭ್ಯಾಸಗಳತ್ತ ಕೂಡಾ ಗಮನ ಹರಿಸಬೇಕು. ಕೆಲವು ಅಭ್ಯಾಸಗಳನ್ನು ಬದಲಾಯಿಸಿಕೊಂಡರೂ ಕೂಡಾ  ತೂಕವನ್ನು ಕಳೆದುಕೊಳ್ಳುವಲ್ಲಿ  ಸಹಾಯವಾಗುತ್ತದೆ. 

ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಹೇಗೆ? :
ಅನೇಕ ಜನರ ಮನಸ್ಸಿನಲ್ಲಿ ಸಾಮಾನ್ಯವಾಗಿ ಮೂಡುವ ಪ್ರಶ್ನೆಯೇ ಇದು. ಇದಕ್ಕಾಗಿ ನಾನಾ ರೀತಿಯ ಕಸರತ್ತುಗಳನ್ನು ಮಾಡಲಾಗುತ್ತದೆ. ಆದರೂ ಬಯಸಿದ ಫಲಿತಾಂಶಗಳನ್ನು ಪಡೆಯುವಲ್ಲಿ ವಿಫಲರಾಗುತ್ತಾರೆ. ಹೊಟ್ಟೆಯ ಕೊಬ್ಬು ಕರಗುವುದಿಲ್ಲ. ಹೀಗಾದಾಗ ದೈನಂದಿನ ವ್ಯಾಯಾಮದ ಜೊತೆಗೆ, ತೂಕ ನಷ್ಟದಲ್ಲಿ ಖಂಡಿತವಾಗಿಯೂ ಫಲಿತಾಂಶಗಳನ್ನು ತೋರಿಸುವಂತಹ ಆಹಾರದತ್ತ ಗಮನ ಹರಿಸುವುದು ಕೂಡಾ ಬಹಳ ಮುಖ್ಯ. ಹೌದು ಈ ಒಂದು ಬೀಜವನ್ನು ಸೇವಿಸಿದರೆ ನೀವು ಅಂದುಕೊಂಡಂತೆ ತೂಕವನ್ನು ಕಳೆದುಕೊಳ್ಳುವುದು ಸಾಧ್ಯವಾಗುತ್ತದೆ. 

ಗಸಗಸೆಯಲ್ಲಿರುವ ಪೋಷಕಾಂಶಗಳು : 
ಗಸಗಸೆ ಬೀಜಗಳು ಔಷಧೀಯ ಗುಣಗಳಿಂದ ಕೂಡಿದೆ.  ಇದು  ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ತಾಮ್ರ, ಒಮೆಗಾ 3 ಕೊಬ್ಬಿನಾಮ್ಲಗಳು, ಪ್ರೋಟೀನ್, ಕಾರ್ಬೋಹೈಡ್ರೇಟ್ ಗಳು, ಕ್ಯಾಲ್ಸಿಯಂ, ಫೈಬರ್ ಮತ್ತು ಮ್ಯಾಂಗನೀಸ್ ನ ಸಮೃದ್ಧ ಮೂಲವಾಗಿದೆ.

ಇದನ್ನೂ ಓದಿ : Elaichi Benefits: ಏಲಕ್ಕಿ ಸೇವಿಸಿ ಈ ರೋಗಗಳನ್ನು ದೂರಗೊಳಿಸಿ..

ತೂಕ ನಷ್ಟಕ್ಕೆ ಗಸಗಸೆ ಬೀಜಗಳನ್ನು ಈ ರೀತಿಯಲ್ಲಿ ಬಳಸಬಹುದು:
ಹೊಟ್ಟೆ ಮತ್ತು ಸೊಂಟದ ಸುತ್ತ ಸೇರಿಕೊಂಡಿರುವ ಕೊಬ್ಬನ್ನು ಕರಗಿಸಲು  ಗಸಗಸೆ ರಾಮಬಾಣವಾಗಿದೆ. ಏಕೆಂದರೆ ಇದರಲ್ಲಿರುವ ಒಮೆಗಾ 3 ಫ್ಯಾಟಿ ಆಸಿಡ್ ತೂಕ ಇಳಿಸಲು ಸಹಾಯ ಮಾಡುತ್ತದೆ. ಗ್ರೇಟರ್ ನೋಯ್ಡಾದ ಜಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖ್ಯಾತ ಪೌಷ್ಟಿಕತಜ್ಞರಾದ ಡಾ ಆಯುಷಿ ಯಾದವ್ ಅವರು ಗಸಗಸೆ ಬೀಜಗಳನ್ನು ತೂಕ ಇಳಿಸುವ ಆಹಾರವಾಗಿ ಹೇಗೆ ಬಳಸಬಹುದು ಎಂಬುದನ್ನು ವಿವರಿಸುತ್ತಾರೆ. 

1. ಆಹಾರದ ಟಾಪಿಂಗ್ ಆಗಿ ಬಳಸಬಹುದು: 
ಗಸಗಸೆಯಲ್ಲಿ ನಾರಿನಂಶ ಹೇರಳವಾಗಿದ್ದು, ತೂಕ ಇಳಿಸಲು ನೆರವಾಗುತ್ತದೆ. ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಬೇಕು. ನಾವು ತಯಾರಿಸುವ ಯಾವುದೇ ಆಹಾರದ ಮೇಲೆ ಈ ಬೀಜಗಳನ್ನು ಸಿಂಪಡಿಸಿ.  ಹೀಗೆ ಆಹಾರದೊಂದಿಗೆ ಗಸಗಸೆ ಸೇವಿಸುತ್ತಾ ಬಂದರೆ ಕೆಲವೇ ವಾರಗಳಲ್ಲಿ ಹೊಟ್ಟೆಯ ಭಾಗದ ಕೊಬ್ಬು ಕರಗಲು ಆರಂಭವಾಗುತ್ತದೆ. 

ಇದನ್ನೂ ಓದಿ : ಫಸ್ಟ್‌ ಟೈಮ್‌ ಲೈಂಗಿಕ ಕ್ರಿಯೆ ನಡೆಸಲು ಸೂಕ್ತ ವಯಸ್ಸು ಯಾವುದು ಗೊತ್ತೇ..! ನಿವು ಅಂದುಕೊಂಡಿದ್ದಲ್ಲ

2. ಗಸಗಸೆ ಬೀಜದ ಸಿರಪ್ ಕುಡಿಯಿರಿ : 
ಗಸಗಸೆಯಿಂದ ತೂಕ ಇಳಿಸಿಕೊಳ್ಳಲು ಬಯಸುವವರು ಗಸಗಸೆ ಸಿರಪ್ ಅನ್ನು ಸೇವಿಸಿ.  ಗಸಗಸೆ ಸಿರಪ್ ಅನ್ನು ಮಾರುಕಟ್ಟೆಯಿಂದ ಖರೀದಿಸಿ ಅದರಿಂದ  ಶರಬತ್ತು ತಯಾರಿಸಿ ಕುಡಿಯಬಹುದು. ಇದನ್ನು ಕುಡಿಯುವುದರಿಂದ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಇದು ಅನಗತ್ಯ ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಪ್ಪಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಹೆಚ್ಚುತ್ತಿರುವ ತೂಕ ನಿಯಂತ್ರಣಕ್ಕೆ ಬರುತ್ತದೆ. 

3. ಗಸಗಸೆಯನ್ನು ಹಾಲಿನೊಂದಿಗೆ ಸೇವಿಸಬಹುದು : 
ಗಸಗಸೆ ಮತ್ತು ಹಾಲನ್ನು ಒಟ್ಟಿಗೆ ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದರ ಬಳಕೆಯು ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಗಸಗಸೆಯನ್ನು ಹಾಲಿನಲ್ಲಿ ಕುದಿಸಿ ಅದನ್ನು ಕುಡಿಯಿರಿ. ಹೀಗೆ ಮಾಡಿದಾಗ  ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುತ್ತದೆ. ಹೊಟ್ಟೆ ತುಂಬಿರುವ ಕಾರಣ ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ. ಬೆಳಗಿನ ಉಪಾಹಾರದಲ್ಲಿ ಇದನ್ನು ತಿನ್ನುವುದು ತೂಕ ನಷ್ಟಕ್ಕೆ ಪ್ರಯೋಜನಕಾರಿಯಾಗಿದೆ. 

ಇದನ್ನೂ ಓದಿ : ತೂಕ ಇಳಿಸಿಕೊಳ್ಳಲು 'ಟೀ' ಹೇಗೆ ಕುಡಿಯಬೇಕು ಗೊತ್ತೆ..? ಮಿಸ್‌ ಮಾಡ್ದೆ ನೋಡಿ..

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News