Health Tips: ಕಿಡ್ನಿ ಸ್ಟೋನ್ ರೋಗಿಗಳು ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಿಬೇಡಿ

ಮೂತ್ರಪಿಂಡಕ್ಕೆ ಹಾನಿಕಾರಕ ಆಹಾರಗಳು: ಕಿಡ್ನಿ ಸ್ಟೋನ್‌ ಸಮಸ್ಯೆಯಿಂದ ಬಳಲುತ್ತಿರುವ ಜನರು ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು, ಆಗಾಗ್ಗೆ ಶೌಚಾಲಯಕ್ಕೆ ಭೇಟಿ ನೀಡುವುದು, ಹೊಟ್ಟೆ ನೋವು, ಹಸಿವಿನ ಕೊರತೆ ಮತ್ತು ವಾಕರಿಕೆ ಎಂದು ದೂರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಆಹಾರಗಳಿಂದ ದೂರವಿರುವುದು ಮುಖ್ಯ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Feb 23, 2024, 09:12 AM IST
  • ಕಿಡ್ನಿ ಸ್ಟೋನ್ ಸಮಸ್ಯೆ ಇರುವವರ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರ ಪದಾರ್ಥಗಳಿಂದ ದೂರವಿರಬೇಕು
  • ಕಿಡ್ನಿ ಸ್ಟೋನ್ ರೋಗಿಗಳು ಅಪ್ಪಿತಪ್ಪಿಯೂ ತಂಪು ಪಾನೀಯಗಳು ಮತ್ತು ಚಹಾ-ಕಾಫಿಯನ್ನು ಸೇವಿಸಬಾರದು
  • ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವ ಜನರು ಉಪ್ಪನ್ನು ಒಳಗೊಂಡಿರುವ ವಸ್ತುಗಳನ್ನು ಸೇವಿಸಬಾರದು
Health Tips: ಕಿಡ್ನಿ ಸ್ಟೋನ್ ರೋಗಿಗಳು ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಿಬೇಡಿ title=
ಮೂತ್ರಪಿಂಡಕ್ಕೆ ಹಾನಿಕಾರಕ ಆಹಾರಗಳು

ಕಿಡ್ನಿ ಸ್ಟೋನ್ ಸಮಯದಲ್ಲಿ ಈ ಆಹಾರ ಸೇವಿಸಬೇಡಿ: ಭಾರತದಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚುತ್ತಿದೆ, ದೇಶದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ಇದಕ್ಕೆ ಬಲಿಪಶುಗಳಾಗುತ್ತಿದ್ದಾರೆ. ಮೂತ್ರಪಿಂಡವು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗವಾಗಿದೆ, ಇದರ ಮುಖ್ಯ ಕಾರ್ಯವೆಂದರೆ ರಕ್ತವನ್ನು ಫಿಲ್ಟರ್ ಮಾಡುವುದು. ಈ ಪ್ರಕ್ರಿಯೆಯು ಸಂಭವಿಸಿದಾಗ ಕ್ಯಾಲ್ಸಿಯಂ, ಸೋಡಿಯಂ ಮತ್ತು ಅನೇಕ ರೀತಿಯ ಖನಿಜಗಳ ಕಣಗಳು ಮೂತ್ರನಾಳದ ಮೂಲಕ ಮೂತ್ರಕೋಶವನ್ನು ತಲುಪುತ್ತವೆ. ಅಲ್ಲಿ ಈ ವಸ್ತುಗಳ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸುತ್ತದೆ. ನಂತರ ಅವು ಸಂಗ್ರಹವಾಗಿ ಕಲ್ಲಿನ ಆಕಾರವಾಗಲು ಪ್ರಾರಂಭಿಸುತ್ತವೆ. ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವವರು ತಮ್ಮ ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಅಪಾಯವು ಹೆಚ್ಚಾಗಬಹುದು ಎಂದು ಆಹಾರ ತಜ್ಞರು ಹೇಳಿದ್ದಾರೆ.   

ಕಿಡ್ನಿಯಲ್ಲಿ ಕಲ್ಲುಗಳಿದ್ದರೆ ಇವುಗಳನ್ನು ಸೇವಿಸಬೇಡಿ

1. ವಿಟಮಿನ್ ಸಿ ಆಧಾರಿತ ಆಹಾರಗಳು: ಕಿಡ್ನಿ ಸ್ಟೋನ್ ಸಮಸ್ಯೆಯ ಸಂದರ್ಭದಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರ ಪದಾರ್ಥಗಳಿಂದ ದೂರವಿರಬೇಕು. ಈ ಕಾರಣದಿಂದಾಗಿ ಹೆಚ್ಚಿನ ಕಲ್ಲುಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ನಿಂಬೆ, ಪಾಲಕ್, ಕಿತ್ತಳೆ, ಸಾಸಿವೆ ಸೊಪ್ಪು, ಕಿವಿ ಮತ್ತು ಪೇರಲದಂತಹ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸುವುದು ಉತ್ತಮ.

ಇದನ್ನೂ ಓದಿ: Bad Cholesterol: ಅಡುಗೆ ಮನೆಯಲ್ಲಿರುವ ಈ 2 ಸಿಹಿ-ಹುಳಿ ಪದಾರ್ಥ ಬಳಸಿ ಹೆಚ್ಚುತ್ತಿರುವ ಕೆಟ್ಟ ಕೊಲೆಸ್ಟ್ರಾಲ್ ಗೆ ಬ್ರೇಕ್ ಹಾಕಿ!

2. ತಂಪು ಪಾನೀಯಗಳು ಮತ್ತು ಚಹಾ-ಕಾಫಿ: ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ನಿರ್ಜಲೀಕರಣದ ಸಮಸ್ಯೆಯನ್ನು ಹೊಂದಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಕೆಫೀನ್ ದೇಹಕ್ಕೆ ಹಾನಿಕಾರಕವೆಂದು ಸಾಬೀತುಪಡಿಸುತ್ತದೆ. ಆದ್ದರಿಂದ ಕಿಡ್ನಿ ಸ್ಟೋನ್ ರೋಗಿಗಳಿಗೆ ತಂಪು ಪಾನೀಯಗಳು ಮತ್ತು ಚಹಾ-ಕಾಫಿ ವಿಷಕ್ಕಿಂತ ಕಡಿಮೆಯಿಲ್ಲ. ಏಕೆಂದರೆ ಇವುಗಳು ಬಹಳಷ್ಟು ಕೆಫೀನ್ ಅನ್ನು ಹೊಂದಿರುತ್ತವೆ. 

3. ಉಪ್ಪು: ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವ ಜನರು ಉಪ್ಪು ಮತ್ತು ಉಪ್ಪನ್ನು ಒಳಗೊಂಡಿರುವ ವಸ್ತುಗಳ ಸೇವನೆಯನ್ನು ಕಡಿಮೆ ಮಾಡಬೇಕು. ಏಕೆಂದರೆ ಇವುಗಳು ಹೆಚ್ಚಿನ ಪ್ರಮಾಣದ ಸೋಡಿಯಂ ಅನ್ನು ಹೊಂದಿರುತ್ತವೆ, ಇದು ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ.

4. ಮಾಂಸಾಹಾರಿ ಆಹಾರಗಳು: ಮಾಂಸ, ಮೀನು ಮತ್ತು ಮೊಟ್ಟೆಗಳು ಕಿಡ್ನಿ ಸ್ಟೋನ್ ರೋಗಿಗಳಿಗೆ ಒಳ್ಳೆಯದಲ್ಲ. ಏಕೆಂದರೆ ಇವುಗಳು ಹೇರಳವಾದ ಪ್ರೋಟೀನ್ ಅನ್ನು ಹೊಂದಿರುತ್ತವೆ ಮತ್ತು ಈ ಪೋಷಕಾಂಶವು ದೇಹಕ್ಕೆ ಮುಖ್ಯವಾದುದಾದರೂ, ಇದು ಮೂತ್ರಪಿಂಡದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಇದನ್ನೂ ಓದಿ:  ಈ ಸಮಯದಲ್ಲಿ ನೀರು ಕುಡಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು..! ತಿಳಿಯಿರಿ

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮನೆಮದ್ದುಗಳು ಮತ್ತು ಮಾಹಿತಿಯು ನಿಮ್ಮ ತಿಳುವಳಿಕೆಗೆ ಮಾತ್ರ. ಇಲ್ಲಿನ ಸಲಹೆ ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಬೇಕು. Zee Kannada News ಇದಕ್ಕೆ ಹೊಣೆಯಾಗಿರುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News