Health Tips: ಸಮತೋಲಿತ ಆಹಾರ ಸೇವಿಸಿದರೆ ಅನೇಕ ರೋಗಗಳು ಬರುವುದಿಲ್ಲ ಎನ್ನುತ್ತಾರೆ..ಹೀಗಾಗಿಯೇ ತಾಜಾ ಹಣ್ಣುಗಳು, ತರಕಾರಿಗಳನ್ನು ಸೇವಿಸುವಂತೆ ಸಲಹೆ ನೀಡಲಾಗುತ್ತದೆ.. ಏಕೆಂದರೆ ಇವು ಔಷಧೀಯ ಗುಣಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಕೆಲವರಿಗೆ ಬೀಟ್ರೂಟ್ ಸೆಟ್ ಆಗುವುದಿಲ್ಲ. ಇದರಲ್ಲಿರುವ ಕೆಲವು ಅಂಶಗಳಿಂದ ಅವರ ದೇಹಕ್ಕೆ ಹಾನಿಯಾಗಬಹುದು..
ಕಿಡ್ನಿ ಸ್ಟೋನ್ ಸಮಸ್ಯೆ: ಮೂತ್ರಪಿಂಡದ ಕಲ್ಲುಗಳನ್ನು ಹೊಂದಿರುವ ಜನರು ಬೀಟ್ರೂಟ್ ಸೇವನೆಯನ್ನು ಕಡಿಮೆ ಮಾಡಬೇಕು... ಏಕೆಂದರೆ ಆಕ್ಸಲೇಟ್ ಮೂತ್ರದಲ್ಲಿ ಹರಳುಗಳನ್ನು ರೂಪಿಸುತ್ತದೆ. ಈ ಹರಳುಗಳು ಮೂತ್ರಪಿಂಡದ ಕಲ್ಲುಗಳ ರಚನೆಗೆ ಕಾರಣವಾಗುತ್ತವೆ.
ಅಧಿಕ ಅಥವಾ ಕಡಿಮೆ ಬಿಪಿ: ಅಧಿಕ ಅಥವಾ ಕಡಿಮೆ ಬಿಪಿ ಇರುವವರು ಮತ್ತು ಔಷಧಿ ತೆಗೆದುಕೊಳ್ಳುತ್ತಿರುವವರು ಬೀಟ್ರೂಟ್ ತಿನ್ನಬಾರದು.. ಏಕೆಂದರೆ ಇದರಲ್ಲಿರುವ ಕೆಲವು ಅಂಶಗಳು ತಲೆ ತಿರುಗುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ..
ಜೀರ್ಣಕ್ರಿಯೆ ಸಮಸ್ಯೆ: ಜೀರ್ಣ ಶಕ್ತಿಯ ಕೊರತೆ ಇರುವವರಿಗೆ ಬೀಟ್ರೂಟ್ ಸೇವನೆ ಒಳ್ಳೆಯದಲ್ಲ. ಇದರನಲ್ಲಿ ನಾರಿನಂಶ ಅಧಿಕವಾಗಿದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ಗ್ಯಾಸ್, ಅಜೀರ್ಣ ಅಥವಾ ಅತಿಸಾರ ಸಮಸ್ಯೆಗಳು ಉಂಟಾಗಬಹುದು.
ಅಲರ್ಜಿ ಸಮಸ್ಯೆ: ಅಲರ್ಜಿ ಇರುವವರು ಬೀಟ್ರೂಟ್ನ್ನು ಎಂದಿಗೂ ಸೇವಿಸಬಾರದು.. ಇದರಿಂದ ತುರಿಕೆ, ದದ್ದು, ಊತ ಅಥವಾ ಉಸಿರಾಟದ ತೊಂದರೆಯುಂಟಾಗಬಹುದು..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.