ಉಳಿದಿರುವ ಚಪಾತಿ ಹಿಟ್ಟನ್ನು ಫ್ರಿಜ್ ನಲ್ಲಿಟ್ಟು ಬಳಸುತ್ತೀರಾ ? ಜೋಕೆ ಈ ಅಪಾಯ ಕಾಡಬಹುದು !

ಉಳಿದ ಹಿಟ್ಟಿನಲ್ಲಿ ಚಪಾತಿಯನ್ನು ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಫ್ರಿಜ್ ನಲ್ಲಿಟ್ಟು ಮತ್ತೆ ಬಳಸುವ ಹಿಟ್ಟಿನಿಂದ ಆಗುವ ಅನಾನುಕೂಲಗಳು ಯಾವುವು ನೋಡೋಣ .  

Written by - Ranjitha R K | Last Updated : Apr 17, 2024, 04:58 PM IST
  • ಒಮ್ಮೊಮ್ಮೆ ಚಪಾತಿ ಹಿಟ್ಟು ಕಲಸುವಾಗ ಸ್ವಲ್ಪ ಹೆಚ್ಚು ಕಲಸಿ ಬಿಡುತ್ತೇವೆ.
  • ಉಳಿದ ಹಿಟ್ಟನ್ನು ಹಾಗೆಯೇ ಫ್ರಿಜ್ ನಲ್ಲಿಡುವ ಅಭ್ಯಾಸ ಅನೇಕ ಮಹಿಳೆಯರಿಗೆ ಇರುತ್ತದೆ.
  • ಇದು ಆರೋಗ್ಯದ ಮೇಲೆ ಭಾರೀ ಕೆಟ್ಟ ಪರಿಣಾಮ ಬೀರುತ್ತದೆ.
ಉಳಿದಿರುವ ಚಪಾತಿ ಹಿಟ್ಟನ್ನು ಫ್ರಿಜ್ ನಲ್ಲಿಟ್ಟು ಬಳಸುತ್ತೀರಾ ? ಜೋಕೆ ಈ ಅಪಾಯ ಕಾಡಬಹುದು !  title=

ಬೆಂಗಳೂರು : ಒಮ್ಮೊಮ್ಮೆ ಚಪಾತಿ ಹಿಟ್ಟು ಕಲಸುವಾಗ ಸ್ವಲ್ಪ ಹೆಚ್ಚು ಕಲಸಿ ಬಿಡುತ್ತೇವೆ. ಎಲ್ಲಾ ಹಿಟ್ಟಿನ ಚಪಾತಿ ಮಾಡಿದರೆ ವೇಸ್ಟ್ ಆಗುತ್ತದೆ ಎನ್ನುವ ಕಾರಣಕ್ಕೆ ಉಳಿದ ಹಿಟ್ಟನ್ನು ಹಾಗೆಯೇ ಫ್ರಿಜ್ ನಲ್ಲಿಡುವ ಅಭ್ಯಾಸ ಅನೇಕ ಮಹಿಳೆಯರಿಗೆ ಇರುತ್ತದೆ. ಇನ್ನು ಕೆಲವರಿಗೆ ಒಮ್ಮೆ ಹಿಟ್ಟು ಕಲಸುವಾಗಲೇ ಒಂದೆರಡು ದಿನಗಳಿಗೆ ಆಗುವ ಹಾಗೆ ಹಿಟ್ಟು ಕಲಸುವ ಅಭ್ಯಾಸವೂ ಇರುತ್ತದೆ, ಕೆಲಸ ಸುಲಭವಾಗುತ್ತದೆ ಎನ್ನುವ ಉದ್ದೇಶದಿಂದ ಈ ರೀತಿ ಮಾಡುತ್ತಾರೆ. ಆದರೆ ಈ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದು ಆರೋಗ್ಯದ ಮೇಲೆ ಭಾರೀ ಕೆಟ್ಟ ಪರಿಣಾಮ ಬೀರುತ್ತದೆ.ಫ್ರಿಜ್ ನಲ್ಲಿಟ್ಟು ಮತ್ತೆ ಬಳಸುವ ಹಿಟ್ಟಿನಿಂದ ಆಗುವ ಅನಾನುಕೂಲಗಳು ಯಾವುವು ನೋಡೋಣ .  

ಉಳಿದ ಹಿಟ್ಟಿನಲ್ಲಿ ಚಪಾತಿಯನ್ನು ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಯಾಕೆಂದರೆ ಹಿಟ್ಟನ್ನು ಕಲಸಿ ಫ್ರಿಡ್ಜ್ ನಲ್ಲಿಟ್ಟರೆ ಫ್ರಿಡ್ಜ್ ನ ಹಾನಿಕಾರಕ ಗ್ಯಾಸ್ ಹಿಟ್ಟಿನೊಳಗೆ ಸೇರುತ್ತದೆ.ಈ ಕಾರಣದಿಂದಾಗಿ, ಈ  ಹಿಟ್ಟಿನಿಂದ ಮಾಡಿದ ಚಪಾತಿ ತಿನ್ನುವುದರಿಂದ ಅನಾರೋಗ್ಯಕ್ಕೆ ಒಳಗಾಗಬೇಕಾಗಬಹುದು. ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.  

ಇದನ್ನೂ ಓದಿ : Sleep Quality: ನಿದ್ರಾಹೀನತೆಯಿಂದ ಬಳಲುತ್ತಿದ್ದೀರೆ? ಸಂಜೆಯ ವೇಳೆ ಇಂತಹ ಉತ್ತಮ ಅಭ್ಯಾಸಗಳಿಂದ ರಾತ್ರಿ ನಿದ್ರೆಯನ್ನು ಪಡೆಯಬಹುದು!

ಹೊಟ್ಟೆಯ ಸಮಸ್ಯೆಗೆ ಕಾರಣವಾಗಬಹುದು :
ಒಮ್ಮೆ ಹಿಟ್ಟನ್ನು ಕಲಸಿ ಇಟ್ಟರೆ,ಅದರ ಹುದುಗುವಿಕೆಯ ಪ್ರಕ್ರಿಯೆ ಪ್ರಾರಂಭವಾಗುತ್ತದೆ.ಈ ಪ್ರಕ್ರಿಯೆಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಹಾಗಾಗಿ, ಹಿಟ್ಟನ್ನು ಫ್ರಿಡ್ಜ್ ನಲ್ಲಿಟ್ಟ ನಂತರ ಅದರಿಂದ ಚಪಾತಿ ಮಾಡಿ ತಿಂದರೆ ಹೊಟ್ಟೆ ಕೆಡಬಹುದು. 

ರೋಗನಿರೋಧಕ ಶಕ್ತಿ ದುರ್ಬಲವಾಗುತ್ತದೆ :
ಹಳಸಿದ ಹಿಟ್ಟಿನ ಚಪಾತಿ ತಿನ್ನುವುದರಿಂದ ಹೊಟ್ಟೆ ನೋವು, ಮಲಬದ್ಧತೆ ಮತ್ತು ಗ್ಯಾಸ್‌ನಂತಹ ತೊಂದರೆಗಳು ಉಂಟಾಗಬಹುದು.ಪ್ರತಿದಿನ ಹಳಸಿದ ಹಿಟ್ಟನ್ನು ಬಳಸಿದರೆ, ಜೀರ್ಣಕ್ರಿಯೆ ಹದಗೆಡುತ್ತದೆ.ರೋಗನಿರೋಧಕ ಶಕ್ತಿ ದುರ್ಬಲವಾದರೆ ಪದೇ  ಪದೇ  ಆರೋಗ್ಯ ಸಮಸ್ಯೆ ಕಾಡುತ್ತಲೇ ಇರುತ್ತದೆ.

ಇದನ್ನೂ ಓದಿ : ಈ ಹಣ್ಣುಗಳನ್ನು ಸೇವಿಸಿದರೆ ಕಿಡ್ನಿ ಸ್ಟೋನ್ ಪುಡಿಯಾಗಿ ಮೂತ್ರ ಪಿಂಡದಿಂದ ಹೊರ ಬರುವುದು !

ಹಿಟ್ಟು ಕಲಸಲು ಹೆಚ್ಚು ಹೊತ್ತು ತೆಗೆದುಕೊಳ್ಳುವುದಿಲ್ಲ. ಐದು ನಿಮಿಷದ ಕೆಲಸ ಉಳಿಸಲು ಹೋಗಿ ಅನಾರೋಗ್ಯ ತಂದುಕೊಳ್ಳುವುದಕ್ಕಿಂತ ಚಪಾತಿ ಮಾಡುವಾಗಲೇ ಹಿಟ್ಟು ಕಲಸುವುದು ಉತ್ತಮ.  

(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News