Swachh Bharat Mission: ಪ್ಲಾಸ್ಟಿಕ್ ಕಸ ನೀಡಿ, ಲಂಚ್-ಡಿನ್ನರ್ ಮಾಡಿ: ಹೀಗೊಂದು ವಿಶಿಷ್ಟ Garbage Cafe

Swachh Bharat Mission ಅಡಿಯಲ್ಲಿ, ರಾಷ್ಟ್ರ ರಾಜಧಾನಿ ದೆಹಲಿಯನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ವಿಶಿಷ್ಟ ಅಭಿಯಾನ ಪ್ರಾರಂಭಿಸಲಾಗಿದೆ. SDMC ಉಪಕ್ರಮದಲ್ಲಿ, ನಜಫಗಡ್ ದಲ್ಲಿ ಗಾರ್ಬೇಜ್ ಕೆಫೆ ತೆರೆಯಲಾಗಿದ್ದು, ಅಲ್ಲಿ ಕಸಕ್ಕೆ ಬದಲಾಗಿ ಆಹಾರ ಅಥವಾ ಸಿಹಿತಿಂಡಿಗಳು ಸಿಗಲಿವೆ.

Written by - Nitin Tabib | Last Updated : Jan 24, 2021, 12:30 PM IST
  • ಪ್ಲಾಸ್ಟಿಕ್ ತ್ಯಾಜ್ಯ ನೀಡಿ ಉಪಹಾರ, ಲಂಚ್ ಅಥವಾ ಡಿನ್ನರ್ ಮಾಡಿ.
  • ಇದಾವುದು ಬೇಡ ಎಂದಾದರೆ ಮನೆಗೆ ಸಿಹಿ ತೆಗೆದುಕೊಂಡು ಹೋಗಿ.
  • ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ನಿಂದ ಹೀಗೊಂದು ವಿಶಿಷ್ಟ ಅಭಿಯಾನ ಆರಂಭ.
Swachh Bharat Mission: ಪ್ಲಾಸ್ಟಿಕ್ ಕಸ ನೀಡಿ, ಲಂಚ್-ಡಿನ್ನರ್ ಮಾಡಿ: ಹೀಗೊಂದು ವಿಶಿಷ್ಟ Garbage Cafe title=
Swacch Bharat Mission (File Photo)

Swachh Bharat Mission - ನವದೆಹಲಿ:  ಪ್ಲಾಸ್ಟಿಕ್ ತ್ಯಾಜ್ಯದ ಬಾಳಲು ಊಟ ಪಡೆಯಬಹುದು ಎಂದು ನೀವೆಂದಾದರೂ ಊಹಿಸಿದ್ದೀರಾ. ಹೌದು, ಇಂತಹದೊಂದು ಅಭಿಯಾನ ದೆಹಲಿಯಲ್ಲಿ ಆರಂಭವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ದಕ್ಷಿಣ ಮುನ್ಸಿಪಲ್ ಕಾರ್ಪೋರೇಶನ್ (SDMC),  ನಜಫಗಡ್ ಸಿಹಿ ಅಂಗಡಿಯೊಂದರ ಸಹಯೋಗದಿಂದ ಇಂತಹುದೊಂದು ಅಭಿಯಾನ ಆರಂಭಿಸಿದೆ. SDMCಯ ಈ ಉಪಕ್ರಮದ ಅಡಿ ದ್ವಾರಕಾದ  ನಜಫಗಡ್ ಜೋನ್ ನಲ್ಲಿರುವ ವರ್ಧಮಾನ್ ಪ್ಲಾಸ್ ಸಿಟಿ ಮಾಲ್ ನಲ್ಲಿರುವ ಡೈಮಂಡ್ ಸ್ವೀಟ್ಸ್, ಗಾರ್ಬೇಜ್ ಕೆಫೆ (Garbage cafe) ಆರಂಭಿಸಿದೆ. ಇಲ್ಲಿ ಜನರು ಪ್ಲಾಸ್ಟಿಕ್ ಕಸ ನೀಡಿ ಊಟ ಮಾಡಬಹುದು. ಈ ಕೆಫೆಯಲ್ಲಿ ಜನರು ಪ್ಲಾಸ್ಟಿಕ್ ಕಸ ನೀಡಿ ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್ ಅಥವಾ ಮಿಠಾಯಿ ತಿನ್ನಬಹುದು.

ಇದನ್ನು ಓದಿ- Garbage-Free 5 ಸ್ಟಾರ್ ಸಿಟಿಗಳಲ್ಲಿ ಸ್ಥಾನ ಪಡೆದ 'ನಮ್ಮ ಮೈಸೂರು'

Swachh Bharat Mission ಅಡಿ ಈ ಅಭಿಯಾನ 
ವಾಸ್ತವದಲ್ಲಿ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ (SDMC), ಸ್ವಚ್ಛ ಭಾರತ ಮಿಷನ್ (Swachh Bharat Mission) ಅಡಿ ನಜಫಗಡ್ ಜೋನ್ ನಲ್ಲಿ ಈ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಅಡಿ ಇದೀಗ ನೀವು 1 ಕೆ.ಜಿ ಪ್ಲಾಸ್ಟಿಕ್ ಕಸ ನೀಡಿ ಅದರ ಬದಲು ಗಾರ್ಬೇಜ್ ಕೆಫೆಯಲ್ಲಿ ಬ್ರೇಕ್ ಫಾಸ್ಟ್, ಡಿನ್ನರ್, ಅಥವಾ ಲಂಚ್ ಮಾಡಬಹುದಾಗಿದೆ. ಒಂದು ವೇಳೆ ನೀವು ಇಲ್ಲಿ ಊಟ ಮಾಡಲು ಬಯಸುತ್ತಿಲ್ಲ ಎಂದಾದರೆ, ಮಿಠಾಯಿಯನ್ನು ಕೂಡ ನೀವು ನಿಮ್ಮ ಮನೆಗೆ ತೆಗೆದುಕೊಂಡು ಹೋಗಬಹುದು. ಈ ಕುರಿತು ಮಾತನಾಡುವ ನಜಫಗಡ್ ಡೆಪ್ಯುಟಿ ಕಮಿಷನರ್ ರಾಧಾಕೃಷ್ಣ, ಜನರು ಇಲ್ಲಿ ನೀಡಲಾಗುವ ಕಸವನ್ನು ಡಿಕಂಪೋಸ್ ಮಾಡಲಾಗುವುದು. ಅಂಗಡಿ ಮಾಲೀಕರು ಈ ಅಭಿಯಾನದಲ್ಲಿ ಯಾವುದೇ ಶುಲ್ಕ ಪಡೆಯದೇ ಸೇರಿಕೊಂಡಿದ್ದಾರೆ. ವಾತಾವರಣದ  ಪ್ರತಿ ಜನರನ್ನು ಜಾಗೃತರನ್ನಾಗಿಸಲು ಈ ಅಭಿಯಾನ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಈ ಕುರಿತು ಜನರಿಗೆ ಮನವಿ ಮಾಡುತ್ತಿದ್ದು, ಎಲ್ಲಾ ಮನೆಗಳಿಂದ ಹೊರಬೀಳುವ ಪ್ಲಾಸ್ಟಿಕ್  ಕಸದ ವಿಲೇವಾರಿ ಮಾಡಬೇಕಿದೆ ಎಂದು ಹೇಳಿದೆ.

ಇದನ್ನು ಓದಿ- ಮಹಾತ್ಮ ಗಾಂಧಿ ಯವರ "ಸ್ವಚ್ಚತೆ" ಪರಂಪರೆಯನ್ನು ಸ್ಮರಿಸಿದ ಪ್ರಧಾನಿ ಮೋದಿ

ಎಷ್ಟು ಕಸ ನೀಡಿದರೆ ಎಷ್ಟು ಸಿಹಿ ಸಿಗುತ್ತದೆ?
ಈ ಅಭಿಯಾನದ ಅಡಿ ಇನ್ನೂ ಹಲವು ಮಾಲೀಕರೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಡೈಮಂಡ್ ಸ್ವೀಟ್ಸ್ ಮಾಲೀಕರು ಈ ಉಪಕ್ರಮದಲ್ಲಿ ನಮಗೆ ಬೆಂಬಲ ನೀಡಿದ್ದಾರೆ ಎಂದು ರಾಧಾಕೃಷ್ಣ ಹೇಳಿದ್ದಾರೆ. ಈ ಅಭಿಯಾನಕ್ಕೆ ಸಂಬಂಧಿಸಿದ ಸ್ಲೋಗನ್ ವೊಂದನ್ನು ಈ ಅಂಗಡಿಯಲ್ಲಿ ಬರೆಯಲಾಗಿದೆ.  'Bring waste plastic from your house and get free meal' ಎಂದು ಈ ಸ್ಲೋಗನ್ ಸಾರಿಹೇಳುತ್ತಿದೆ. ಡೈಮಂಡ್ ಸ್ವೀಟ್ಸ್ ಮಾಲೀಕೆಯಾಗಿರುವ ಪೂಜಾ ಶರ್ಮಾ ಅವರ ಪ್ರಕಾರ, ಬೆಳಿಗ್ಗೆಯಿಂದ ರಾತ್ರಿಯವರೆಗೆ ಅಂಗಡಿ ತೆರೆದಿರುತ್ತದೆ. ಬೆಳಿಗ್ಗೆ ಕಸವನ್ನು ತರುವವರಿಗೆ ಬ್ರೇಕ್ ಫಾಸ್ಟ್ ಅಥವಾ ಸಿಹಿತಿಂಡಿಗಳು ಸಿಗುತ್ತವೆ. ಹಗಲಿನಲ್ಲಿ ಪ್ಲಾಸ್ಟಿಕ್ ಕಸ ತರುವವರಿಗೆ ಮಧ್ಯಾಹ್ನದ ಊಟ ಅಥವಾ ಸಿಹಿತಿಂಡಿ ಸಿಗುತ್ತದೆ ಮತ್ತು ರಾತ್ರಿಯಲ್ಲಿ ಪ್ಲಾಸ್ಟಿಕ್ ಕಸವನ್ನು ತರುವವರಿಗೆ, ಅವರು ರಾತ್ರಿ ಊಟ ಅಥವಾ ಸಿಹಿತಿಂಡಿಗಳನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ. 1 ಕೆಜಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಅರ್ಧ ಕೆಜಿ ಸಿಹಿತಿಂಡಿ ಮತ್ತು 5 ಕೆಜಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ 1 ಕೆಜಿ ಸಿಹಿತಿಂಡಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. 

ಇದನ್ನು ಓದಿ- ಸ್ವಚ್ಛ ಕ್ಯಾಂಪಸ್ ರ್ಯಾಂಕಿಂಗ್ ನಲ್ಲಿ ರಾಜ್ಯ ಸರ್ಕಾರಿ ವಿವಿಗಳಿಗಿಲ್ಲ ಸ್ಥಾನ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News