ಬೆಂಗಳೂರು: ರಾಜ್ಯದಲ್ಲಿ ಸುಮಾರು 28 ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾನಿಲಯಗಳಿದ್ದರೂ ಸಹಿತ ಇವು ಯಾವು ಕೂಡ ಟಾಪ್ ಐದರೊಳಗೆ ಸ್ಥಾನವನ್ನು ಪಡೆಯಲು ಸಾಧ್ಯವಾಗಿಲ್ಲ. ಕೇಂದ್ರ ಮಾನವ ಅಭಿವೃದ್ದಿ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ರಾಜ್ಯದ ಖಾಸಗಿ ವಿವಿಗಳೇ ಪಾರಮ್ಯ ಮೆರೆದಿವೆ.
ಕೆಎಲ್ಇ ಸಂಸ್ಥೆಯು ಸ್ವಚ್ಚ ಕ್ಯಾಂಪಸ್ ವಿಭಾಗದಲ್ಲಿ ಮೂರನೇ ಸ್ಥಾನವನ್ನು ಪಡೆದರೆ ಆರನೇ ಸ್ಥಾನವನ್ನು ರೇವಾ ವಿಶ್ವವಿದ್ಯಾನಿಲಯ ಪಡೆದಿದೆ. ಆ ಮೂಲಕ ಟಾಪ್ ಟೆನ್ ವಿಭಾಗದಲ್ಲಿ ಎರಡು ವಿವಿಗಳು ಖಾಸಗಿಯದ್ದಾಗಿವೆ.
ಅದೇ ರೀತಿಯಾಗಿ ಕಾಲೇಜು ವಿಭಾಗದಲ್ಲಿಯೂ ಕೂಡ ಖಾಸಗಿಯದ್ದೇ ಪ್ರಾಬಲ್ಯ ಮುಂದುವರೆದಿದೆ. ಈ ವಿಭಾಗದಲ್ಲಿ ರಾಜ್ಯದ ಯಾವ ಸರ್ಕಾರಿ ಕಾಲೇಜು ಸ್ಥಾನವನ್ನು ಪಡೆದಿಲ್ಲ. ಮಂಗಳೂರಿನ ಸೆಂಟ್ ಅಲೋಸಿಯಸ್ ಕಾಲೇಜ್ ಸ್ವಚ್ಛ ಕಾಲೇಜ್ ಕ್ಯಾಂಪಸ್ ವಿಭಾಗದಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ.