Symptoms of Lung Cancer: ಕೆಮ್ಮಿನ ಈ ರೋಗಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ

Symptoms of Lung Cancer: ಕೆಮ್ಮಿನ ಈ ವಿಶೇಷ ಲಕ್ಷಣವನ್ನು ನಿರ್ಲಕ್ಷಿಸಬೇಡಿ ಅಥವಾ ಸಾಮಾನ್ಯ ಸಮಸ್ಯೆ ಎಂದು ಪರಿಗಣಿಸಬೇಡಿ. ಇದು ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣವೂ ಆಗಿರಬಹುದು. ವಿಶೇಷವಾಗಿ ಧೂಮಪಾನಿಗಳು, ಈ ಬಗ್ಗೆ ಬಹಳ ಜಾಗರೂಕರಾಗಿರಿ. 

Written by - Yashaswini V | Last Updated : Dec 13, 2021, 12:25 PM IST
  • ಇಂತಹ ಕೆಮ್ಮು ಶ್ವಾಸಕೋಶದ ಕ್ಯಾನ್ಸರ್‌ನ ಲಕ್ಷಣವಾಗಿದೆ
  • ಇಂತಹ ಲಕ್ಷಣಗಳು ದೀರ್ಘಕಾಲದವರೆಗೆ ಇದ್ದರೆ ನಿರ್ಲಕ್ಷಿಸಬೇಡಿ
  • ಈ ರೀತಿಯ ತಕ್ಷಣ ಇದ್ದರೆ ವೈದ್ಯರನ್ನು ಸಂಪರ್ಕಿಸಿ
Symptoms of Lung Cancer: ಕೆಮ್ಮಿನ ಈ ರೋಗಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ title=
Symptoms of Lung Cancer

Symptoms of Lung Cancer: ಶ್ವಾಸಕೋಶದ ಕ್ಯಾನ್ಸರ್ ಬಹಳ ಗಂಭೀರವಾದ ಕಾಯಿಲೆಯಾಗಿದ್ದು, ಮಾಲಿನ್ಯ, ಹಾಳಾದ ಜೀವನಶೈಲಿಯಂತಹ ಹಲವು ಕಾರಣಗಳಿಂದ ಶ್ವಾಸಕೋಶದ ಕ್ಯಾನ್ಸರ್ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ. ಶ್ವಾಸಕೋಶದ ಕ್ಯಾನ್ಸರ್‌ಗೆ ಧೂಮಪಾನವೂ ಒಂದು ದೊಡ್ಡ ಕಾರಣವಾಗಿದೆ. ಶ್ವಾಸಕೋಶದ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಅದು ಮಾರಣಾಂತಿಕವಾಗಬಹುದು. ಅದರ ರೋಗಲಕ್ಷಣಗಳು ತಡವಾಗಿ ಕಾಣಿಸಿಕೊಳ್ಳುವುದರಿಂದ, ರೋಗಿಯನ್ನು ಉಳಿಸಲು ಕೆಲವೊಮ್ಮೆ ಕಷ್ಟವಾಗುತ್ತದೆ ಮತ್ತು ಉಳಿಸಿದರೂ ಸಹ ಅದು ಅವರ ಗುಣಮಟ್ಟದ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದರೆ, ವೈದ್ಯರ ಸಲಹೆಯಂತೆ ಆರಂಭಿಕ ಹಂತದಲ್ಲಿ  ಶ್ವಾಸಕೋಶದ ಕ್ಯಾನ್ಸರ್ ಅನ್ನು ಪತ್ತೆ ಹಚ್ಚುವುದರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದು. 

ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ರೋಗಲಕ್ಷಣ:
ಕೆಮ್ಮು (Cough)  ಸಾಕಷ್ಟು ಸಾಮಾನ್ಯವಾಗಿದೆ. ಯಾವುದೇ ವಯಸ್ಸಿನ ಜನರಿಗೆ ಹವಾಮಾನ ಬದಲಾದಾಗ ಅಥವಾ ಶೀತವನ್ನು ಹೊಂದಿರುವಾಗ ಯಾವುದೇ ಸಮಯದಲ್ಲಿ ಕೆಮ್ಮು ಬರಬಹುದು.  ಇದು ಸಾಮಾನ್ಯವಾಗಿ ಕೆಲವು ದಿನಗಳಲ್ಲಿ ಔಷಧಿಯನ್ನು ತೆಗೆದುಕೊಳ್ಳುವುದರೊಂದಿಗೆ ಅಥವಾ ತೆಗೆದುಕೊಳ್ಳದೆಯೇ ಉತ್ತಮಗೊಳ್ಳುತ್ತದೆ. ಆದರೆ ಶ್ವಾಸಕೋಶದ ಕ್ಯಾನ್ಸರ್‌ನ  ಆರಂಭಿಕ ರೋಗಲಕ್ಷಣಗಳೊಂದಿಗೆ ತಾಳೆ ಹಾಕಿ ನಾವು ಕೆಮ್ಮಿನ ಬಗ್ಗೆ ಹೇಳುವುದಾದರೆ, ಅದು ಸಾಮಾನ್ಯ ಕೆಮ್ಮಿಗಿಂತ ಭಿನ್ನವಾಗಿದೆ. ಈ ಕೆಮ್ಮು ಹಲವಾರು ದಿನಗಳವರೆಗೆ ಅಥವಾ ತಿಂಗಳುಗಳವರೆಗೆ ನಿಲ್ಲುವುದಿಲ್ಲ. ಧೂಮಪಾನ ಮಾಡುವವರು ದೀರ್ಘಕಾಲದ ಕೆಮ್ಮನ್ನು ಅಪ್ಪಿತಪ್ಪಿಯೂ ನಿರ್ಲಕ್ಷಿಸಬಾರದು. ಏಕೆಂದರೆ ಇದು ಶ್ವಾಸಕೋಶದ ಕ್ಯಾನ್ಸರ್ನ ಸಂಕೇತವೂ ಆಗಿರಬಹುದು.

ಇದನ್ನೂ ಓದಿ- Health Tips: ನೀವೂ ಹಾಲಿನಲ್ಲಿ ಹಸಿಯಾದ ಮೊಟ್ಟೆ ಬೆರೆಸಿ ಸೇವಿಸುತ್ತೀರಾ? ಈ ಸುದ್ದಿ ತಪ್ಪದೆ ಓದಿ

ಆದಾಗ್ಯೂ, ಕೆಲವು ದಿನಗಳ ನಂತರ, ಶ್ವಾಸಕೋಶದ ಕ್ಯಾನ್ಸರ್ನ (Symptoms of Lung Cancer) ರೋಗಿಯು ಬಹಳಷ್ಟು ಕಫ, ರಕ್ತ ಅಥವಾ ಕೆಂಪು ಕಫದೊಂದಿಗೆ ಕೆಮ್ಮಲು ಪ್ರಾರಂಭಿಸುತ್ತಾನೆ. ಇದಲ್ಲದೆ ಅವರಲ್ಲಿ ಉಸಿರಾಟದ ತೊಂದರೆ ಕೂಡ ಕಾಣಿಸಿಕೊಳ್ಳಬಹುದು. ಇದರೊಂದಿಗೆ ಅವರ ಕೆಮ್ಮಿನ ಧ್ವನಿಯೂ ಬದಲಾಗುತ್ತದೆ. ಕಾಲಾನಂತರದಲ್ಲಿ, ಅವರು ಮಾತನಾಡುವಾಗಲೂ ತಕ್ಷಣ ಕೆಮ್ಮು ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಕಾರಣಕ್ಕೂ ತಜ್ಞರನ್ನು ಭೇಟಿ ಮಾಡಲು ವಿಳಂಬ ಮಾಡಬಾರದು. 

ಇದನ್ನೂ ಓದಿ- Healthy Breakfast : ಪ್ರತಿದಿನ ಬೆಳಗ್ಗೆ ತಪ್ಪದೆ ತಿಂಡಿಗೆ ಈ ಆಹಾರ ಸೇವಿಸಿ : ಇದರಿಂದ ಹೆಚ್ಚುತ್ತದೆ ದೇಹ ಶಕ್ತಿ!

ಈ ಜನರು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಸಹ ಹೊಂದಿರುತ್ತಾರೆ: 
ಸಾಮಾನ್ಯವಾಗಿ, ಧೂಮಪಾನಿಗಳು ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯವನ್ನು ಹೊಂದಿರುತ್ತಾರೆ, ಆದರೆ ಮಾಲಿನ್ಯ ಮತ್ತು ನಿಷ್ಕ್ರಿಯ ಧೂಮಪಾನವು ಸಹ ಇದಕ್ಕೆ ಕಾರಣವಾಗುತ್ತದೆ ಮತ್ತು ಧೂಮಪಾನ ಮಾಡದ ಜನರು ಶ್ವಾಸಕೋಶದ ಕ್ಯಾನ್ಸರ್ಗೆ ಬಲಿಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಕೆಮ್ಮು ದೀರ್ಘಕಾಲದವರೆಗೆ ಇದ್ದರೆ ಮತ್ತು ಅದರೊಂದಿಗೆ ಇತರ ಸಮಸ್ಯೆಗಳಿದ್ದರೆ - ಯಾವಾಗಲೂ ಕರ್ಕಶವಾದ ಧ್ವನಿ, ಹಸಿವು ಕಡಿಮೆಯಾಗುವುದು, ತೂಕ ನಷ್ಟ, ಎಲ್ಲಾ ಸಮಯದಲ್ಲೂ ಬಳಲಿಕೆ ಈ ರೀತಿಯ ಲಕ್ಷಣಗಳಿದ್ದರೆ ತಡಮಾಡದೇ  ವೈದ್ಯರನ್ನು ಸಂಪರ್ಕಿಸಿ.

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News