Healthy Breakfast : ಪ್ರತಿದಿನ ಬೆಳಗ್ಗೆ ತಪ್ಪದೆ ತಿಂಡಿಗೆ ಈ ಆಹಾರ ಸೇವಿಸಿ : ಇದರಿಂದ ಹೆಚ್ಚುತ್ತದೆ ದೇಹ ಶಕ್ತಿ!

ಮೊಳಕೆಕಾಳುಗಳು, ಬೇಯಿಸಿದ ಮೊಟ್ಟೆ, ಅವರೆ, ಸೋಯಾಬೀನ್, ಬೆಳಿಗ್ಗೆ ಹಾಲು ತೆಗೆದುಕೊಳ್ಳಿ. ಇದರಿಂದ ಹಸಿವು ಕಡಿಮೆಯಾಗುತ್ತದೆ ಮತ್ತು ದೇಹವು ದಿನವಿಡೀ ಶಕ್ತಿಯಿಂದ ತುಂಬಿರುತ್ತದೆ.

Written by - Channabasava A Kashinakunti | Last Updated : Dec 12, 2021, 09:25 PM IST
  • ನೀವು ಆರೋಗ್ಯಕರ ಉಪಹಾರವನ್ನು ಸೇವಿಸುವುದು ಬಹಳ ಮುಖ್ಯ
  • ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನ
  • ಮೊಳಕೆಕಾಳುಗಳು, ಬೇಯಿಸಿದ ಮೊಟ್ಟೆ, ಅವರೆ, ಸೋಯಾಬೀನ್, ಬೆಳಿಗ್ಗೆ ಹಾಲು ತೆಗೆದುಕೊಳ್ಳಿ
Healthy Breakfast : ಪ್ರತಿದಿನ ಬೆಳಗ್ಗೆ ತಪ್ಪದೆ ತಿಂಡಿಗೆ ಈ ಆಹಾರ ಸೇವಿಸಿ : ಇದರಿಂದ ಹೆಚ್ಚುತ್ತದೆ ದೇಹ ಶಕ್ತಿ! title=

ಆರೋಗ್ಯವಾಗಿರಲು, ನೀವು ಆರೋಗ್ಯಕರ ಉಪಹಾರವನ್ನು ಸೇವಿಸುವುದು ಬಹಳ ಮುಖ್ಯ. ಲಘು, ಪೌಷ್ಟಿಕ ಮತ್ತು ಆರೋಗ್ಯಕರ ಟಿಫನ್ ನಿಮ್ಮ ಜೀರ್ಣಕಾರಿ ಆರೋಗ್ಯವು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ, ಆರೋಗ್ಯಕರ ಮತ್ತು ಹೊಟ್ಟೆ ತುಂಬುವ ಉಪಹಾರವು ದಿನ ಆರಂಭಿಸುವ ಸಾಮರ್ಥ್ಯವನ್ನು ಹೊಂದಿದೆ. ಆಹಾರ ತಜ್ಞರು ಡಾ.ರಂಜನಾ ಸಿಂಗ್ ಅವರು ನಿಮ್ಮ ಆಹಾರದಲ್ಲಿ ಸಾಧ್ಯವಾದಷ್ಟು ಪ್ರೋಟೀನ್ ಅನ್ನು ಸೇರಿಸಿಕೊಳ್ಳಿ, ಉದಾಹರಣೆಗೆ ಮೊಳಕೆಕಾಳುಗಳು, ಬೇಯಿಸಿದ ಮೊಟ್ಟೆ, ಅವರೆ, ಸೋಯಾಬೀನ್, ಬೆಳಿಗ್ಗೆ ಹಾಲು ತೆಗೆದುಕೊಳ್ಳಿ. ಇದರಿಂದ ಹಸಿವು ಕಡಿಮೆಯಾಗುತ್ತದೆ ಮತ್ತು ದೇಹವು ದಿನವಿಡೀ ಶಕ್ತಿಯಿಂದ ತುಂಬಿರುತ್ತದೆ.

ಬೆಳಗಿನ ಉಪಾಹಾರಕ್ಕಾಗಿ ಪ್ರೋಟೀನ್ ಭರಿತ ಈ ಆಹಾರ ಸೇವಿಸಿ

1. ಬೆಳಗಿನ ಉಪಾಹಾರದಲ್ಲಿ ಮೊಟ್ಟೆಗಳನ್ನು ಸೇವಿಸಿ

ಪ್ರತಿದಿನ ಬೆಳಗಿನ ಉಪಾಹಾರದಲ್ಲಿ ಮೊಟ್ಟೆ(Egg Breakfast)ಯನ್ನು ಸೇವಿಸುವುದರಿಂದ ದೇಹವು ಅನೇಕ ರೋಗಗಳನ್ನು ದೂರವಿಡುವ ಶಕ್ತಿಯನ್ನು ಉಳಿಸಿಕೊಳ್ಳುತ್ತದೆ ಎಂದು ಡಯಟ್ ತಜ್ಞರು ಡಾ.ರಂಜನಾ ಸಿಂಗ್ ಹೇಳುತ್ತಾರೆ, ಏಕೆಂದರೆ ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ಪೋಷಕಾಂಶಗಳು ಕಂಡುಬರುತ್ತವೆ. ಮೊಟ್ಟೆಯಲ್ಲಿ ವಿಟಮಿನ್ ಡಿ ಇದೆ, ಇದು ಮೂಳೆಗಳಿಗೆ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನುವ ಮೂಲಕ, ನಿಮ್ಮ ಇಡೀ ದಿನದ ವಿಟಮಿನ್ ಡಿ ಪ್ರಮಾಣವನ್ನು ನೀವು ಪೂರೈಸಬಹುದು.

ಇದನ್ನೂ ಓದಿ : Turmeric Benefits : ದೇಹದ ಈ ಭಾಗಕ್ಕೆ ಅರಿಶಿನ ಹಚ್ಚಿ : ಅನೇಕ ರೋಗಗಳಿಂದ ದೂರವಿರಿ

2. ಬೆಳಗಿನ ಉಪಾಹಾರದಲ್ಲಿ ನೆನೆಸಿದ ಬಾದಾಮಿ ಸೇವಿಸಿ

ಬೆಳಗಿನ ಉಪಾಹಾರ(Morning Breakfast)ದಲ್ಲಿ ಬಾದಾಮಿಯನ್ನು ಸೇರಿಸಿಕೊಳ್ಳಬಹುದು. ಇದು ಅನೇಕ ಪೌಷ್ಟಿಕಾಂಶದ ಗುಣಗಳಿಂದ ಸಮೃದ್ಧವಾಗಿದೆ. ನೆನೆಸಿದ ಬಾದಾಮಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಬಾದಾಮಿಯು ಅಗತ್ಯವಾದ ವಿಟಮಿನ್‌ಗಳು, ಮ್ಯಾಂಗನೀಸ್, ಪ್ರೋಟೀನ್, ಫೈಬರ್ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ, ಇದು ಆರೋಗ್ಯಕರ ದೇಹಕ್ಕೆ ಬಹಳ ಮುಖ್ಯವಾಗಿದೆ. ಆದ್ದರಿಂದ, ನಿಮ್ಮ ದೈನಂದಿನ ಉಪಹಾರ ಆಹಾರದಲ್ಲಿ ನೀವು ಕೈಬೆರಳೆಣಿಕೆಯಷ್ಟು ಬಾದಾಮಿಗಳನ್ನು ಸೇರಿಸಿಕೊಳ್ಳಬೇಕು.

3. ಬೆಳಗಿನ ಉಪಾಹಾರದಲ್ಲಿ ಕಡಲೆಕಾಯಿ ಸೇವಿಸಿ

ಬೆಳಗಿನ ಉಪಾಹಾರದಲ್ಲಿ ಕಡಲೆಕಾಯಿಯನ್ನು ತಿನ್ನುವುದು ಪ್ರಯೋಜನಕಾರಿ. ಇದಕ್ಕಾಗಿ ರಾತ್ರಿ(Night) ಮಲಗುವ ಮುನ್ನ ಕಡಲೆಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸೇವಿಸಿ. ಆರೋಗ್ಯ ತಜ್ಞರ ಪ್ರಕಾರ, ಪೊಟ್ಯಾಸಿಯಮ್, ತಾಮ್ರ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸೆಲೆನಿಯಂನಂತಹ ಗುಣಗಳಿಂದ ಸಮೃದ್ಧವಾಗಿರುವ ಕಡಲೆಕಾಯಿಯನ್ನು ನೆನೆಸಿಡುವುದರಿಂದ ಅವುಗಳ ಪೌಷ್ಟಿಕಾಂಶದ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ದೂರವಾಗುತ್ತದೆ.

ಇದನ್ನೂ ಓದಿ : Kidney Health : ನಿಮ್ಮ ಕಿಡ್ನಿಗೆ ನೇರ ಹಾನಿ ಮಾಡುತ್ತವೆ ಈ 5 ಆಹಾರಗಳು : ಇವುಗಳಿಂದ ಆದಷ್ಟೂ ದೂರವಿರಿ

4. ಬೆಳಗಿನ ಉಪಾಹಾರದಲ್ಲಿ ಒಂದು ಬೌಲ್ ಮೊಸರು ಸೇವಿಸಿ

ಪ್ರತಿಯೊಬ್ಬರೂ ಬೆಳಗಿನ ಉಪಾಹಾರದಲ್ಲಿ ಖಂಡಿತವಾಗಿ ಒಂದು ಬೌಲ್ ಮೊಸರನ್ನು(Curd) ಸೇರಿಸಿಕೊಳ್ಳಬೇಕು ಎನ್ನುತ್ತಾರೆ ಡಯಟ್ ತಜ್ಞರಾದ ಡಾ.ರಂಜನಾ ಸಿಂಗ್. ಮೊಸರು ನಮ್ಮ ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬೆಳಗಿನ ಉಪಾಹಾರದಲ್ಲಿ ಮೊಸರು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ, ಇದು ನಿಮ್ಮ ಹೊಟ್ಟೆಯನ್ನು ಸ್ವಚ್ಛವಾಗಿರಿಸುತ್ತದೆ ಮತ್ತು ನಿಮ್ಮ ಜೀರ್ಣಕ್ರಿಯೆಯು ಸಹ ಉತ್ತಮವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News