ಆಹಾರ ಸೇವನೆ ಬಳಿಕ ಟೀ ಕುಡಿಯುವ ಅಭ್ಯಾಸವಿದೆಯೇ? ಹಾಗಿದ್ದರೆ ತಪ್ಪದೇ ಇದನ್ನು ಓದಿ

ಆಹಾರ ಸೇವಿಸಿದ ನಂತರ, ಚಹಾ ಕುಡಿಯುವ ಅಭ್ಯಾಸ ನಮ್ಮಲ್ಲಿ ಸಾಕಷ್ಟು ಜನರಿಗಿದೆ. ಆದರೆ ನಿಮ್ಮ ಅಭ್ಯಾಸವು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ನಿಮಗೆ ತಿಳಿದಿದೆಯೇ...?

Updated: Oct 8, 2018 , 06:17 PM IST
ಆಹಾರ ಸೇವನೆ ಬಳಿಕ ಟೀ ಕುಡಿಯುವ ಅಭ್ಯಾಸವಿದೆಯೇ? ಹಾಗಿದ್ದರೆ ತಪ್ಪದೇ ಇದನ್ನು ಓದಿ

ಬೆಂಗಳೂರು: ಚಹಾದ ಹೆಸರನ್ನು ಕೇಳಿದ ತಕ್ಷಣವೇ ಕೆಲವು ಜನರ ಮುಖದಿಂದ ಆಯಾಸ ಕಣ್ಮರೆಯಾಗುತ್ತದೆ. ಇತರರು ಸಂಜೆಯ ಸಮಯದಲ್ಲಿ ಚಹಾ ಬಯಸುತ್ತಾರೆ, ಕೆಲವರಿಗೆ ಚಹಾ ಕುಡಿಯದೆ ನಿದ್ರೆ ಬರುವುದಿಲ್ಲ. ಆಹಾರ ಸೇವಿಸಿದ ನಂತರ, ಚಹಾ ಕುಡಿಯುವ ಅಭ್ಯಾಸ ನಮ್ಮಲ್ಲಿ ಸಾಕಷ್ಟು ಜನರಿಗಿದೆ. ಆದರೆ ನಿಮ್ಮ ಅಭ್ಯಾಸವು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ನಿಮಗೆ ತಿಳಿದಿದೆಯೇ...?

ಆಹಾರ ಸೇವನೆ ನಂತರ ತಕ್ಷಣವೇ ಚಹಾ ಕುಡಿಯುವುದು ಅವರ ಅಭ್ಯಾಸ ಎಂದು ಕೆಲವರು ಹೇಳುತ್ತಾರೆ. ವಿಶೇಷವಾಗಿ ಚಳಿಗಾಲದಲ್ಲಿ ಅವರು ಯಾವಾಗಲೂ ಆಹಾರ ಸೇವನೆ ಬಳಿಕ ಚಹಾವನ್ನು ಬಯಸುತ್ತಾರೆ. ಆದರೆ ಆಹಾರ ಸೇವಿಸಿದ ತಕ್ಷಣವೇ ಚಹಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಚಹಾದ ಎಲೆಗಳು ಆಮ್ಲೀಯ ಗುಣಗಳನ್ನು ಹೊಂದಿರುತ್ತವೆ. ಇದು ಆಹಾರದಲ್ಲಿನ ಪ್ರೋಟೀನ್ ನೊಂದಿಗೆ ಬೆರೆತಾಗ ಪ್ರೋಟೀನ್ ಕಠಿಣವಾಗುತ್ತದೆ, ಹೀಗಾಗಿ ಜೀರ್ಣಕ್ರಿಯೆ ಕಷ್ಟವಾಗುತ್ತದೆ. ಆದ್ದರಿಂದ ಆಹಾರ ಸೇವನೆ ಬಳಿಕ ಚಹಾ ಸೇವಿಸದಿದ್ದರೆ ಉತ್ತಮ.

ಕೆಫೀನ್ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ:
ಇದರ ಜೊತೆಗೆ, ಕೆಫೀನ್ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ದೇಹದಲ್ಲಿ ಕೆಫೀನ್ ಪ್ರಮಾಣವು ಕಾರ್ಟಿಸೋಲ್ ಅನ್ನು ಹೆಚ್ಚಿಸುತ್ತದೆ, ಅಂದರೆ, ಸ್ಟೀರಾಯ್ಡ್ಗಳು ಹಾರ್ಮೋನುಗಳನ್ನು ಹೆಚ್ಚಿಸುತ್ತವೆ, ಇದರಿಂದ ದೇಹವು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇವುಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು, ಮಧುಮೇಹ ಮತ್ತು ತೂಕ ಹೆಚ್ಚಾಗುವುದು ಇತ್ಯಾದಿ ಸೇರಿವೆ.

ಮಹಿಳೆಯರಿಗೆ ಕಬ್ಬಿಣಾಂಶದ ಕೊರತೆ:
ಚಹಾವು 'ಪಾಲಿಫಿನಾಲ್ಗಳು' ಮತ್ತು 'ಟ್ಯಾನಿನ್' ಗಳಂತಹ ಅಂಶಗಳನ್ನು ಒಳಗೊಂಡಿದೆ, ಇದು ಶರೀರಕ್ಕೆ ಆಹಾರದಿಂದ ಕಬ್ಬಿಣವನ್ನು ಹೀರಿಕೊಳ್ಳಲು ಅನುಮತಿಸುವುದಿಲ್ಲ. ಚಹಾ ಸೇವನೆ ಹಾನಿಕಾರಕವಾಗಿದೆ, ವಿಶೇಷವಾಗಿ ಮಹಿಳೆಯರಿಗೆ ಇದರಿಂದ ಐರನ್ ಕೊರತೆ ಉಂಟಾಗುತ್ತದೆ. ನಿಮಗೆ ಚಹಾ ಅಥವಾ ಕಾಫಿ ಇಲ್ಲದೆ ಬದುಕಲು ಸಾಧ್ಯವಾಗದಿದ್ದರೆ, ಊಟದ ನಂತರ ಕನಿಷ್ಠ ಒಂದು ಗಂಟೆ ಬಿಟ್ಟು ಚಹಾ/ಕಾಫಿ ಸೇವಿಸಿ.