ದೇಹದಿಂದ ವಿಟಮಿನ್ 12 ಅನ್ನು ಹೀರಿಕೊಳ್ಳುತ್ತದೆ ಈ ಮೂರು ಆಹಾರಗಳು

Vitamin B12 Deficiency: ವಿಟಮಿನ್ ಬಿ 12 ನ ರೋಗಲಕ್ಷಣಗಳನ್ನು ಹೇಗೆ ಗುರುತಿಸುವುದು ಎಂದು ನೀವು ತಿಳಿದಿರಬೇಕು. ಆಗ ಮಾತ್ರ ನೀವು ಅದಕ್ಕೆ ಸಂಬಂಧಿಸಿದ ಆಹಾರ ಪದಾರ್ಥಗಳ ಸೇವನೆಯನ್ನು ಹೆಚ್ಚಿಸುವುದು ಸಾಧ್ಯವಾಗುತ್ತದೆ. 

Written by - Ranjitha R K | Last Updated : Jun 9, 2023, 04:13 PM IST
  • ಬಿ 12 ಕರಗುವ ವಿಟಮಿನ್.
  • ಇದು ರಕ್ತ, ನರಗಳು ಮತ್ತು ದೇಹದ ಬಲಕ್ಕೆ ಬಹಳ ಮುಖ್ಯ
  • ಕೆಲವು ಆಹಾರ ವಿಟಮಿನ್ ಬಿ 12 ಅನ್ನು ಕರಗಿಸಿ ಬಿಡುತ್ತದೆ.
ದೇಹದಿಂದ ವಿಟಮಿನ್ 12 ಅನ್ನು ಹೀರಿಕೊಳ್ಳುತ್ತದೆ ಈ ಮೂರು ಆಹಾರಗಳು  title=

Vitamin B12 Deficiency : ಬಿ 12 ಕರಗುವ ವಿಟಮಿನ್. ಇದು ರಕ್ತ, ನರಗಳು ಮತ್ತು ದೇಹದ ಬಲಕ್ಕೆ ಬಹಳ ಮುಖ್ಯವಾಗಿದೆ. ದೇಹದಲ್ಲಿ ಈ ಪೋಷಕಾಂಶದ ಕೊರತೆಯಿದ್ದರೆ, ದೌರ್ಬಲ್ಯ ಉಂಟಾಗಬಹುದು. ಹೆಚ್ಚಿನ ಆರೋಗ್ಯ ತಜ್ಞರು ಈ ಪೋಷಕಾಂಶವನ್ನು ಹೊಂದಿರುವ ಆಹಾರವನ್ನು ಸೇವಿಸಲು ಶಿಫಾರಸು ಮಾಡುವುದು ಇದೇ ಕಾರಣಕ್ಕೆ. ಆದರೆ ಕೆಲವು ಆಹಾರಗಳ ಸೇವನೆ ಕೂಡಾ ವಿಟಮಿನ್ ಬಿ 12 ಅನ್ನು ಕರಗಿಸಿ ಬಿಡುತ್ತದೆ. 

ಬಿ 12 ಕೊರತೆಯ ಲಕ್ಷಣಗಳು  : 
ಮೊದಲನೆಯದಾಗಿ, ವಿಟಮಿನ್ ಬಿ 12 ನ ರೋಗಲಕ್ಷಣಗಳನ್ನು ಹೇಗೆ ಗುರುತಿಸುವುದು ಎಂದು ನೀವು ತಿಳಿದಿರಬೇಕು. ಆಗ ಮಾತ್ರ ನೀವು ಅದಕ್ಕೆ ಸಂಬಂಧಿಸಿದ ಆಹಾರ ಪದಾರ್ಥಗಳ ಸೇವನೆಯನ್ನು ಹೆಚ್ಚಿಸುವುದು ಸಾಧ್ಯವಾಗುತ್ತದೆ. 

1. ಆಯಾಸ ಮತ್ತು ದೌರ್ಬಲ್ಯ
2. ಹಸಿವಿನ ಕೊರತೆ
3. ಮಲಬದ್ಧತೆ
4. ರಕ್ತಹೀನತೆ
5. ಮೂಳೆ ನೋವು
6. ಬುದ್ಧಿಮಾಂದ್ಯತೆ
7. ಮರೆವು
8. ನರಗಳ ಸಮಸ್ಯೆ 
9. ಮಹಿಳೆಯರಲ್ಲಿ ತಾತ್ಕಾಲಿಕ ಬಂಜೆತನ
10. ಹೊಟ್ಟೆಯ  ಸಮಸ್ಯೆ 
12 ಚರ್ಮದ ಸೋಂಕು
13. ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ರೋಗಗಳು
14. ಒತ್ತಡದಲ್ಲಿ ಹೆಚ್ಚಳ
15. ದೃಷ್ಟಿ ನಷ್ಟ
 
ಇದನ್ನೂ ಓದಿ :  ಯಾವ ಅಡ್ಡ ಪರಿಣಾಮವೂ ಇಲ್ಲದೆ ತೂಕ ಕಳೆದುಕೊಳ್ಳಲು ಈ ಒಂದು ಕಾಳು ಸಾಕು

ವಿಟಮಿನ್ ಬಿ ಹೇರಳವಾಗಿರುವ ಆಹಾರಗಳು : 
ಮೇಲಿನ ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ,  ಇದು ಎಚ್ಚರಿಕೆಯ ಗಂಟೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಹೀಗಾಗಿ ವಿಟಮಿನ್ ಬಿ 12 ಹೇರಳವಾಗಿರುವ ಆಹಾರಗಳ ಸೇವನೆಯನ್ನು ಹೆಚ್ಚಿಸಬೇಕು. 

1. ಕೊಬ್ಬಿನ ಅಂಶ ಇರುವ ಮೀನು
2.  ಚಿಪ್ಪು ಮೀನು 
3. ಮೊಟ್ಟೆ 
4. ಮಾಂಸ
5. ಹಾಲಿನ ಉತ್ಪನ್ನಗಳು
6.  ಧಾನ್ಯಗಳು
7. ಪಾಲಕ್ 
8. ಬೀಟ್ರೂಟ್
9. ಅಣಬೆ
10. ಆಲೂಗಡ್ಡೆ

ಇದನ್ನೂ ಓದಿ :  ಅರಿಶಿಣ ಔಷಧ.. ಆದರೆ..! ನಿಮ್ಮಲ್ಲಿ ಈ ಸಮಸ್ಯೆಗಳಿದ್ದರೆ ಅದರಿಂದ ದೂರವಿರಿ

ವಿಟಮಿನ್ ಬಿ 12 ಅನ್ನು ಹೀರಿಕೊಳ್ಳುತ್ತವೆ ಈ ಮೂರು ವಸ್ತುಗಳು : 
3 ವಿಧದ ವಸ್ತುಗಳ ಸೇವನೆಯು ಅಟ್ರೋಫಿಕ್ ಅಥವಾ ದೀರ್ಘಕಾಲದ ಜಠರದುರಿತವನ್ನು ಉಂಟುಮಾಡುತ್ತದೆ ಎನ್ನುವುದು ಅನೇಕ  ಸಂಶೋಧನೆಗಳಲ್ಲಿ ಕಂಡುಬಂದಿದೆ. ಇದರಿಂದಾಗಿ ಹೈಡ್ರೋಕ್ಲೋರಿಕ್ ಆಮ್ಲ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಪ್ರಾರಂಭವಾಗುತ್ತದೆ. 

1. ಸಿಹಿ ಪದಾರ್ಥಗಳು
ಸಾಮಾನ್ಯವಾಗಿ, ಮಧುಮೇಹ ಮತ್ತು ಸ್ಥೂಲಕಾಯತೆಯನ್ನು ತಪ್ಪಿಸಲು ಸಿಹಿ ಆಹಾರದಿಂದ ದೂರವಿರುವಂತೆ ಸೂಚಿಸಲಾಗುತ್ತದೆ. ದೇಹದಲ್ಲಿ ವಿಟಮಿನ್ ಬಿ 12 ಅನ್ನು ಕಾಪಾಡಿಕೊಳ್ಳಲು ಬಯಸುವುದಾದರೆ ಸಿಹಿ ಪದಾರ್ಥಗಳಿಂದ ದೂರವಿರಿ.

ಇದನ್ನೂ ಓದಿ :  Health Tips:ಫ್ಯಾಟಿ ಲೀವರ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಆಹಾರಗಳು ವರದಾನಕ್ಕೆ ಸಮ!

2. ಮೆಣಸು ಮಸಾಲಾ ಪದಾರ್ಥ :
ಭಾರತದ ಅನೇಕ ಪಾಕವಿಧಾನಗಳಲ್ಲಿ ಮೆಣಸಿನಕಾಯಿ ಮಸಾಲೆಯನ್ನು ಬಳಸಲಾಗುತ್ತದೆ. ಈ ಮೂಲಕ ಆಹಾರದ ರುಚಿಯನ್ನು ಹೆಚ್ಚಿಸಲಾಗುತ್ತದೆ. ಆದರೆ ಅದನ್ನು ಅತಿಯಾಗಿ ಸೇವಿಸುವವರ ದೇಹದಿಂದ ವಿಟಮಿನ್ ಬಿ 12 ಕಡಿಮೆಯಾಗಲು ಪ್ರಾರಂಭಿಸುತ್ತದೆ.

3. ಆಲ್ಕೋಹಾಲ್ : 
ಆಲ್ಕೋಹಾಲ್ ಸಾಮಾಜಿಕ ಅನಿಷ್ಟ ಮಾತ್ರವಲ್ಲ, ಇದು ನಮ್ಮ ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಇಂದಿನ ದಿನಗಳಲ್ಲಿ ಯುವಕರು ಹೆಚ್ಚು ಹೆಚ್ಚು ಮದ್ಯ ಸೇವನೆಯತ್ತ ವಾಲುತ್ತಿದ್ದಾರೆ. ಆಲ್ಕೊಹಾಲ್ ಸೇವನೆಯು ದೇಹದಲ್ಲಿ ವಿಟಮಿನ್ ಬಿ 12 ಕೊರತೆಗೆ ಕಾರಣವಾಗುತ್ತದೆ.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News