Health Tips : ಇಂತಹ ತಪ್ಪುಗಳಿಂದ ನಿಮ್ಮ ತುಟಿ ಕಪ್ಪಾಗುತ್ತದೆ..! 

ಇಂತಹ ಕೆಟ್ಟ ಅಭ್ಯಾಸಗಳನ್ನ ಬಿಟ್ಟರೆ ನೀವು ಮತ್ತೊಮ್ಮೆ ಆಕರ್ಷಕ ಮತ್ತು ಸುಂದರವಾದ ತುಟಿಗಳನ್ನು ಪಡೆಯಬಹುದು. 

Written by - PRATIBHA ANAND | Last Updated : Apr 7, 2022, 01:14 PM IST
  • ಕೆಲವು ಕಾರಣಗಳಿಂದ ನಿಮ್ಮ ತುಟಿಗಳು ಕಪ್ಪು ಬಣ್ಣಕ್ಕೆ ತಿರುಗುತ್ತದೆ
  • ನೀರಿನ ಕೊರತೆಯಿಂದ ತುಟಿಗಳ ಬಣ್ಣ ಬದಲಾಗುತ್ತದೆ
  • ಸಕ್ಕರೆಯಿಂದ ತುಟಿಗಳನ್ನ ಸ್ಕ್ರಬ್ ಮಾಡಿ
Health Tips : ಇಂತಹ ತಪ್ಪುಗಳಿಂದ ನಿಮ್ಮ ತುಟಿ ಕಪ್ಪಾಗುತ್ತದೆ..!  title=

ಸುಂದರವಾದ ಮತ್ತು ಮೃದುವಾದ ತುಟಿಗಳು ಪ್ರತಿಯೊಬ್ಬ ಮಹಿಳೆಯ ಬಯಕೆ. ಆದರೆ ಕೆಲವೊಮ್ಮೆ ಕೆಲವು ಕೆಟ್ಟ ಅಭ್ಯಾಸಗಳು ತುಟಿಗಳ ಬಣ್ಣವನ್ನು ಕಪ್ಪಾಗಿಸುತ್ತವೆ.  ಕೆಲವು ಕಾರಣಗಳಿಂದ ನಿಮ್ಮ ತುಟಿಗಳು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅಂತಹ ಕೆಲವು ಕೆಟ್ಟ ಅಭ್ಯಾಸಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಇಂತಹ ಕೆಟ್ಟ ಅಭ್ಯಾಸಗಳನ್ನ ಬಿಟ್ಟರೆ ನೀವು ಮತ್ತೊಮ್ಮೆ ಆಕರ್ಷಕ ಮತ್ತು ಸುಂದರವಾದ ತುಟಿಗಳನ್ನು ಪಡೆಯಬಹುದು. 

ನೀರಿನ ಕೊರತೆಯಿಂದ ತುಟಿಗಳ ಬಣ್ಣ ಬದಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಹೆಚ್ಚು ನೀರು ಕುಡಿಯುವುದು ಮುಖ್ಯ. ಚಳಿಗಾಲದಲ್ಲಿ ತುಟಿಗಳ(Lips) ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಜೊತೆಗೆ ಬೇಸಿಗೆಯಲ್ಲೂ ಕೂಡ ಅತೀ ಹೆಚ್ಚು ನೀರು ಕುಡಿಯುವುದು ಉತ್ತಮ.

ಇದನ್ನೂ ಓದಿ : Chikoo Health Benefits: ಸಪೋಟ ಹಣ್ಣಿನ ಸೇವನೆ ಈ 4 ಸಮಸ್ಯೆಗಳಿಗೆ ರಾಮಬಾಣವಿದ್ದಂತೆ!

ನಮ್ಮ ತುಟಿಗಳ ಮೇಲೆ ಸತ್ತ ಚರ್ಮದ ಕೋಶಗಳ ಶೇಖರಣೆಯಿಂದಾಗಿ ತುಟಿಗಳ ಬಣ್ಣವು ಕಪ್ಪಾಗುತ್ತದೆ. ಹೀಗಾಗಿ ಅದನ್ನು ತುಟಿಗಳಿಂದ ತೆಗೆದುಹಾಕುವುದು ಬಹಳ ಮುಖ್ಯ. ಸತ್ತ ಚರ್ಮದಿಂದಾಗಿ ತುಟಿಗಳ ಮೇಲೆ ಸುಕ್ಕುಗಳು ಸಹ ಉಂಟಾಗುತ್ತವೆ. ಇದಕ್ಕಾಗಿ ತುಟಿಗಳಿಗೆ ಮಸಾಜ್ ಮಾಡಿ ಮತ್ತು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ.

ತುಟಿಗಳನ್ನು ಸರಿಯಾದ ರೀತಿಯಲ್ಲಿ ಎಕ್ಸ್‌ಫೋಲಿಯೇಟ್ ಮಾಡುವುದು ಹೇಗೆ..?

- ಸಕ್ಕರೆಯಿಂದ ತುಟಿಗಳನ್ನ ಸ್ಕ್ರಬ್ ಮಾಡಿ, ಇದರಿಂದ ತುಟಿಯ ಮೇಲಿರುವ ಡೆಡ್ ಸೆಲ್ಸ್ ಇಲ್ಲವಾಗುತ್ತದೆ.

- ಕಾಫಿ ಪುಡಿಯನ್ನ ಟೋಮ್ಯಾಟೋ(Tomato) ರಸದೊಂದಿಗೆ ಬೆರಸಿ ಸ್ಕ್ರಬ್ ಮಾಡೋದ್ರಿಂದ ಡೆಡ್ ಸೆಲ್ಸ್ ಹೋಗಲಾಡಿಸಬಹುದು. 

ಇದನ್ನೂ ಓದಿ : Diabetes : ಮಧುಮೇಹಿಗಳೆ ಅಪ್ಪಿತಪ್ಪಿಯೂ ತಿನ್ನಬೇಡಿ ಈ ಎರಡು Dry Fruits

ನೀವು ಲಿಪ್‌ಸ್ಟಿಕ್ ಬಳಸಿದರೆ, ಅದರ ಅವಧಿ ಮುಗಿದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಅದನ್ನು ಬಳಸುವುದರಿಂದ ನಿಮ್ಮ ತುಟಿಗಳ ಬಣ್ಣ ಬದಲಾಗುತ್ತದೆ. 
ಧೂಮಪಾನದ ಅಭ್ಯಾಸವು ತುಟಿಗಳ ಕಪ್ಪಾಗುವಿಕೆಗೆ ಕಾರಣವಾಗುತ್ತದೆ. ಸಿಗರೇಟ್ ಹೊಗೆಯಲ್ಲಿರುವ ಬೆಂಜೊಪೈರಿನ್ ಮತ್ತು ನಿಕೋಟಿನ್ ದೇಹದಲ್ಲಿ ಮೆಲನಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ತುಟಿಗಳ ಬಣ್ಣ ಕಪ್ಪಾಗಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News