ನವದೆಹಲಿ : ದೇಶದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದೆ. ಸಕ್ಕರೆ ಕಾಯಿಲೆ ರೋಗಿಗಳು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಇದರಿಂದ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಅನೇಕ ಜನ ಉತ್ತಮ ಆರೋಗ್ಯಕ್ಕಾಗಿ ಒಣ ಹಣ್ಣುಗಳನ್ನು ಸೇವಿಸುತ್ತಾರೆ, ಆದರೆ ಕೆಲವು ಹಣ್ಣುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಬನ್ನಿ ಈ ಒಣ ಹಣ್ಣುಗಳ ಬಗ್ಗೆ ನಿಮಗಾಗಿ ಮಾಹಿತಿ ಇಲ್ಲಿದೆ.
ಮಧುಮೇಹಿಗಳು ಈ 2 ಒಣ ಹಣ್ಣುಗಳನ್ನು ತಿನ್ನಬಾರದು
1. ಖರ್ಜೂರ
ಖರ್ಜೂರ(Dates)ದಲ್ಲಿ ಸಕ್ಕರೆಯ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಈ ಕಾರಣದಿಂದಾಗಿ, ಇದರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗುವ ಅಪಾಯವಿದೆ. ಹೀಗಾಗಿ ಮಧುಮೇಹ ರೋಗಿಗಳು ಖರ್ಜೂರ ಸೇವಿಸುವುದನ್ನು ತಪ್ಪಿಸಬೇಕು.
ಇದನ್ನೂ ಓದಿ : ಔಷಧಿ ಇಲ್ಲದೆಯೇ ಗುಣಪಡಿಸಬಹುದು ಹೃದಯದ ಕಾಯಿಲೆಯನ್ನು, ಮಾಡಬೇಕಾಗಿರುವುದು ಇಷ್ಟೇ ..!
2. ಒಣದ್ರಾಕ್ಷಿ
ಒಣದ್ರಾಕ್ಷಿಗಳಲ್ಲಿ ಗ್ಲೂಕೋಸ್ ಹೇರಳವಾಗಿ ಕಂಡುಬರುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿನ ಗ್ಲೂಕೋಸ್ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹೀಗಾಗಿ ಮಧುಮೇಹ ರೋಗಿಗಳು ಒಣದ್ರಾಕ್ಷಿಗಳನ್ನು ಸೇವಿಸಬಾರದು.
ಈ ಆಹಾರಗಳಿಂದಲೂ ಕೂಡ ಅಂತರ ಕಾಯ್ದುಕೊಳ್ಳಿ
1. ಬಿಳಿ ಬ್ರೆಡ್
ಮಧುಮೇಹ ರೋಗಿಗಳು(Diabetes Patient) ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ನೀವು ಬಿಳಿ ಬ್ರೆಡ್ ಅನ್ನು ತಿನ್ನಬಾರದು. ಇದರಲ್ಲಿ ಪಿಷ್ಟ ಹೆಚ್ಚಿರುವ ಕಾರಣ ಈ ಆಹಾರವನ್ನು ಸೇವಿಸಬಾರದು.
2. ಸಪೋಟ
ಮಧುಮೇಹ ಹೊಂದಿರುವ ರೋಗಿಗಳು ಹಣ್ಣುಗಳಲ್ಲಿ ಸಪೋಟವನ್ನು ತಿನ್ನುವುದನ್ನು ತಪ್ಪಿಸಬೇಕು. ಈ ಹಣ್ಣು ತುಂಬಾ ಸಿಹಿಯಾಗಿರುತ್ತದೆ ಮತ್ತು ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕೂಡ ತುಂಬಾ ಹೆಚ್ಚಾಗಿದೆ. ಆದ್ದರಿಂದ, ಸಕ್ಕರೆ ರೋಗಿಗಳು ಚಿಕೂ ಹಣ್ಣು ತಿನ್ನಬಾರದು.
ಇದನ್ನೂ ಓದಿ : Health Tips: ಈ ಡ್ರೈ ಫ್ರೂಟ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ!
3. ಆಲೂಗಡ್ಡೆ
ಮಧುಮೇಹ ರೋಗಿಗಳೂ ಆಲೂಗಡ್ಡೆ(Potato)ಯನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಹೆಚ್ಚು ಆಲೂಗಡ್ಡೆ ತಿನ್ನುವುದು ಸಕ್ಕರೆ ರೋಗಿಗಳಿಗೆ ಹಾನಿಕಾರಕವಾಗಿದೆ. ಆಲೂಗೆಡ್ಡೆಯಲ್ಲಿ ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿರುತ್ತವೆ ಹಾಗೆಯೇ ಅದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಪ್ರಮಾಣವೂ ತುಂಬಾ ಹೆಚ್ಚಾಗಿರುತ್ತದೆ. ಆಲೂಗಡ್ಡೆ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವ ಅಪಾಯವಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.