Thyroid ಸಮಸ್ಯೆ ಇದ್ದರೆ ಶರೀರ ಈ ಸಂಕೇತಗಳನ್ನು ನೀಡುತ್ತದೆ

Thyroid Problem: ಥೈರಾಯಿಡ್ ಸಮಸ್ಯೆಯಿಂದ ಬಳಲುವ ಹಲವು ಜನರನ್ನು ನೀವು ನೋಡಿರಬಹುದು. ಒಂದು ವೇಳೆ ಈ ಸಮಸ್ಯೆ ನಿಮಗೂ ಕೂಡ ಕಾಡಬಾರದು ಎಂದು ನೀವು ಬಯಸುತ್ತಿದ್ದರೆ. ಅದರ ಲಕ್ಷಣಗಳನ್ನು ಸಮಯ ಇರುವಾಗಲೇ ಗುರುತಿಸಿ ಅದಕ್ಕೆ ಉಪಚಾರ ಮಾಡಿ.  

Written by - Nitin Tabib | Last Updated : Nov 25, 2022, 01:18 PM IST
  • ಸಾಮಾನ್ಯವಾಗಿ ಜನರು ತೂಕ ಹೆಚ್ಚಾಗುವುದರಿಂದ ಮತ್ತು
  • ಹಾರ್ಮೋನುಗಳ ಅಸಮತೋಲನದಿಂದ ಈ ಸಮಸ್ಯೆ ಎದುರಾಗುತ್ತದೆ.
  • ನಮ್ಮ ಕತ್ತಿನ ಬಳಿ ಒಂದು ಗ್ರಂಥಿ ಇದ್ದು ಅಲ್ಲಿ ಹಾರ್ಮೋನ್ ಗಳು ಉತ್ಪತ್ತಿಯಾಗುತ್ತವೆ.
Thyroid ಸಮಸ್ಯೆ ಇದ್ದರೆ ಶರೀರ ಈ ಸಂಕೇತಗಳನ್ನು ನೀಡುತ್ತದೆ title=
Thyroid Symptoms

Thyroid Symptoms: ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ, ಹೀಗಿರುವಾಗ ಈ ರೋಗದ ಬಗ್ಗೆ ಎಚ್ಚರಿಕೆ ವಹಿಸುವುದು ತುಂಬಾ ಅವಶ್ಯಕ. ಸಾಮಾನ್ಯವಾಗಿ ಜನರು ತೂಕ ಹೆಚ್ಚಾಗುವುದರಿಂದ ಮತ್ತು ಹಾರ್ಮೋನುಗಳ ಅಸಮತೋಲನದಿಂದ ಈ ಸಮಸ್ಯೆ ಎದುರಾಗುತ್ತದೆ. ನಮ್ಮ ಕತ್ತಿನ ಬಳಿ ಒಂದು ಗ್ರಂಥಿ ಇದ್ದು ಅಲ್ಲಿ ಹಾರ್ಮೋನ್ ಗಳು ಉತ್ಪತ್ತಿಯಾಗುತ್ತವೆ. ಈ ಕಾರಣದಿಂದಾಗಿ, ಎರಡು ರೀತಿಯ ಸಮಸ್ಯೆಗಳು ಎದುರಾಗುತ್ತವೆ, ಇವುಗಳನ್ನು ಹೈಪರ್ ಥೈರಾಯ್ಡಿಸಮ್ ಮತ್ತು ಹೈಪೋಥೈರಾಯ್ಡಿಸಮ್ ಎಂದು ಕರೆಯಲಾಗುತ್ತದೆ. ಅಂದರೆ ಹೆಚ್ಚು ಅಥವಾ ಕಡಿಮೆ ಥೈರಾಯ್ಡ್ ಹೊಂದಿರುವ ಸಮಸ್ಯೆ ಎಂದರ್ಥ, ಎರಡೂ ವೈದ್ಯಕೀಯ ಪರಿಸ್ಥಿತಿಗಳು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಈ ಅಪಾಯವನ್ನು ಹೇಗೆ ಗುರುತಿಸುವುದು ತಿಳಿದುಕೊಳ್ಳೋಣ ಬನ್ನಿ.

ಥೈರಾಯ್ಡ್ ರೋಗಲಕ್ಷಣಗಳು
>> ಕೂದಲು ಉದುರುವುದು ಅಥವಾ ತೆಳುವಾಗುವುದು
>> ನಿದ್ರಾಹೀನತೆ
>> ಆತಂಕ ಮತ್ತು ಕಿರಿಕಿರಿ
>> ಅಪಾರ ಬೆವರುವುದು
>> ಮಾಸಿಕ ಋತುಚಕ್ರದ ಅವಧಿಯಲ್ಲಿ ಏರುಪೇರು
>> ಕೈ ಕಾಲುಗಳ ನಡುಕ
>> ವೇಗದ ಹೃದಯ ಬಡಿತ
>>  ಹಸಿವಿನಲ್ಲಿ ಹೆಚ್ಚಳ
>> ತೂಕ ಇಳಿಕೆ
>> ಸ್ನಾಯು-ಕೀಲು ನೋವು ಮತ್ತು ದೌರ್ಬಲ್ಯ ಇತ್ತ್ಯಾದಿಗಳು 

ಥೈರಾಯ್ಡ್ ಸಮಸ್ಯೆಯಿಂದ ಪಾರಾಗಲು ಈ ಆಹಾರಗಳನ್ನು ಸೇವಿಸಿ

1. ತೆಂಗಿನಕಾಯಿ
ಥೈರಾಯ್ಡ್ ರೋಗಿಗಳಿಗೆ ತೆಂಗಿನಕಾಯಿ ತುಂಬಾ ಪ್ರಯೋಜನಕಾರಿಯಾಗಿದೆ ಎನ್ನಲಾಗುತ್ತದೆ, ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಇತರ ಅನೇಕ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತವೆ. 

2. ಅಯೋಡಿನ್
ಥೈರಾಯ್ಡ್ ನಿಂದ ತೊಂದರೆ ಇರುವವರು ತಮ್ಮ ದೈನಂದಿನ ಆಹಾರದಲ್ಲಿ ಅಯೋಡಿನ್(ಅಯೋಡಿನ್ ಯುಕ್ತ ಉಪ್ಪು) ಅನ್ನು  ಸೇರಿಸಿಕೊಳ್ಳಬೇಕು, ಹೀಗೆ ಮಾಡಿದರೆ ಥೈರಾಯ್ಡ್ ಗ್ರಂಥಿಯ ದುಷ್ಪರಿಣಾಮಗಳು ಉಂಟಾಗುವುದಿಲ್ಲ.

3. ಬೆಟ್ಟದ ನೆಲ್ಲಿಕಾಯಿ
ಬೆಟ್ಟದ ನೆಲ್ಲಿಕಾಯಿ ಹಲವು ರೋಗಗಳಿಗೆ ರಾಮಬಾಣ ಮದ್ದಾಗಿದ್ದರೂ, ಇದು ಥೈರಾಯ್ಡ್ ಸಮಸ್ಯೆಯನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ನೀವು ಬಯಸಿದರೆ, ನೀವು ಆಮ್ಲಾ ಜ್ಯೂಸ್, ಅದರ ಪುಡಿ ಅಥವಾ ತರಕಾರಿ ಸೇವಿಸಬಹುದು.

ಇದನ್ನೂ ಓದಿ-Foods for Weight Loss: 4 ಪದಾರ್ಥ ಸೇವಿಸಿದರೆ ಒಂದು ವಾರದಲ್ಲಿ ಕಡಿಮೆಯಾಗುತ್ತದೆ ದೇಹದ ಬೊಜ್ಜು

4. ಹಾಲಿನ ಉತ್ಪನ್ನಗಳು
ಹಾಲು ಒಂದು ಪರಿಪೂರ್ಣ ಆಹಾರವಾಗಿದೆ. ಏಕೆಂದರೆ ಹಾಲಿನಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದರಲ್ಲಿರುವ ಜೀವಸತ್ವಗಳು, ಖನಿಜಗಳು ಮತ್ತು ಕ್ಯಾಲ್ಸಿಯಂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ. ಥೈರಾಯ್ಡ್ ರೋಗಿಗಳಿಗೂ ಇದು ತುಂಬಾ ಪ್ರಯೋಜನಕಾರಿ ಸಾಬೀತಾಗುತ್ತದೆ.

ಇದನ್ನೂ ಓದಿ-Radish Leaves Benefits: ಆರೋಗ್ಯದ ನಿಧಿ ಮೂಲಂಗಿ ಸೊಪ್ಪು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆಯಿರಿ. ಜೀ ಕನ್ನಡ ನ್ಯೂಸ್ ಈ ಮಾಹ್ತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News