Foods for Weight Loss: 4 ಪದಾರ್ಥ ಸೇವಿಸಿದರೆ ಒಂದು ವಾರದಲ್ಲಿ ಕಡಿಮೆಯಾಗುತ್ತದೆ ದೇಹದ ಬೊಜ್ಜು

Foods for Weight Loss: ಇನ್ನು ಸಾಮಾನ್ಯವಾಗಿ ಜನರು ತೂಕವನ್ನು ಕಳೆದುಕೊಳ್ಳಲು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ಕಡಿಮೆ ಆಹಾರ ಸೇವನೆ, ಎಣ್ಣೆ ಅಂಶವುಳ್ಳ ಆಹಾರ ತ್ಯಜಿಸುವುದು ಹೀಗೆ ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಬೇರೊಂದು ಮಾರ್ಗದ ಮೂಲಕ ನೀವು ತೂಕ ಹೆಚ್ಚಳದ ಸಮಸ್ಯೆಯನ್ನು ದೂರ ಮಾಡಬಹುದು.

Written by - Bhavishya Shetty | Last Updated : Nov 25, 2022, 10:24 AM IST
    • ದೇಹದ ತೂಕ ಹೆಚ್ಚಾದಂತೆ ಅನೇಕರಿಗೆ ಚಿಂತೆ ಕಾಡುತ್ತದೆ
    • ಜನರು ತೂಕವನ್ನು ಕಳೆದುಕೊಳ್ಳಲು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ
    • ತೂಕ ಹೆಚ್ಚಾಗುವುದರಿಂದ ಹೃದಯಾಘಾತದಂತಹ ಸಮಸ್ಯೆಗಳು ಎದುರಾಗಬಹುದು
Foods for Weight Loss: 4 ಪದಾರ್ಥ ಸೇವಿಸಿದರೆ ಒಂದು ವಾರದಲ್ಲಿ ಕಡಿಮೆಯಾಗುತ್ತದೆ ದೇಹದ ಬೊಜ್ಜು title=
Food to lose weight

Foods for Weight Loss: ದೇಹದ ತೂಕ ಹೆಚ್ಚಾದಂತೆ ಅನೇಕರಿಗೆ ಚಿಂತೆ ಕಾಡುತ್ತದೆ. ಅಷ್ಟೇ ಅಲ್ಲದೆ, ಬೊಜ್ಜು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದಾಗಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ತೂಕ ಹೆಚ್ಚಾಗುವುದರಿಂದ ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯಾಘಾತದಂತಹ ಸಮಸ್ಯೆಗಳು ಎದುರಾಗಬಹುದು.  

ಇನ್ನು ಸಾಮಾನ್ಯವಾಗಿ ಜನರು ತೂಕವನ್ನು ಕಳೆದುಕೊಳ್ಳಲು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ಕಡಿಮೆ ಆಹಾರ ಸೇವನೆ, ಎಣ್ಣೆ ಅಂಶವುಳ್ಳ ಆಹಾರ ತ್ಯಜಿಸುವುದು ಹೀಗೆ ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಬೇರೊಂದು ಮಾರ್ಗದ ಮೂಲಕ ನೀವು ತೂಕ ಹೆಚ್ಚಳದ ಸಮಸ್ಯೆಯನ್ನು ದೂರ ಮಾಡಬಹುದು. ಈ ಪದಾರ್ಥಗಳನ್ನು ತಿಂದರೆ ನಿಮಗೆ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಸುಲಭವಾಗಿ ತೂಕ ಇಳಿಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: Honey Benefits : ಹೃದಯದ ಆರೋಗ್ಯದ ಜೊತೆಗೆ ಸಕ್ಕರೆ ಪ್ರಮಾಣ ನಿಯಂತ್ರಿಸುತ್ತದೆ ಜೇನು ತುಪ್ಪ!

ಸೋರೆಕಾಯಿ: ಸೋರೆಕಾಯಿ ಭಾರತದಲ್ಲಿ ಅತೀ ಹೆಚ್ಚು ಉಪಯೋಗ ಮಾಡಲಾಗುತ್ತದೆ. ಸಾಂಬಾರ್, ಪಲ್ಯ, ಸಿಹಿ ತಿನಿಸು ಹೀಗೆ ಅನೇಕ ವಿಧಗಳಲ್ಲಿ ಈ ತರಕಾರಿಯನ್ನು ಬಳಸಲಾಗುತ್ತದೆ. ಈ ತರಕಾರಿಯನ್ನು ಹೆಚ್ಚು ತಿಂದರೂ ಸಹ ತೂಕ ಹೆಚ್ಚುವುದಿಲ್ಲ ಎಂದರೆ ನೀವು ನಂಬಲೆಬೇಕು. ವಿಟಮಿನ್ ಎ, ವಿಟಮಿನ್ ಸಿ, ಮೆಗ್ನೀಸಿಯಮ್ ಪೊಟ್ಯಾಸಿಯಮ್, ಸತು ಕ್ಯಾಲ್ಸಿಯಂ ಮತ್ತು ಕಬ್ಬಿಣ ಅಂಶ ಇದರಲ್ಲಿ ಕಂಡುಬರುತ್ತದೆ. ಇದು ತುಂಬಾ ಪ್ರಯೋಜನಕಾರಿಯಾಗಿದೆ.

ಬಾದಾಮಿ: ಬಾದಾಮಿಯನ್ನು ಸೂಪರ್‌ ಫುಡ್‌ ಎಂದು ಪರಿಗಣಿಸಲಾಗಿದೆ. ಇದು ಸಾಕಷ್ಟು ಫೈಬರ್‌ ಅಂಶಗಳನ್ನು ಹೊಂದಿದೆ.  ಬಾದಾಮಿ ತಿಂದರೆ ನಿಮಗೆ ದೀರ್ಘಕಾಲದವರೆಗೆ ಹಸಿವಿನ ಭಾವನೆ ಮೂಡುವುದಿಲ್ಲ. ಹಾಗಾಗಿ ಕಡಿಮೆ ಆಹಾರ ಸೇವನೆ ಮಾಡುತ್ತೀರಿ. ಇದರ ಜೊತೆಗೆ ಕೊಬ್ಬು ವೇಗವಾಗಿ ಕಡಿಮೆಯಾಗುತ್ತದೆ. ಬಾದಾಮಿ ತಿನ್ನುವುದರಿಂದ ದೇಹವು ಪ್ರೋಟೀನ್, ವಿಟಮಿನ್ ಇ, ಫೈಬರ್, ಒಮೆಗಾ 3 ಕೊಬ್ಬಿನಾಮ್ಲ ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳನ್ನು ಪಡೆಯುತ್ತದೆ.

ಮೊಸರು: ಮೊಸರು ನಮ್ಮ ದೇಹವನ್ನು ಪೋಷಿಸುವ ಅತ್ಯಂತ ಪೌಷ್ಟಿಕಾಂಶಯುತ ಆಹಾರ. ಇದು ವಿಟಮಿನ್ ಬಿ 2, ವಿಟಮಿನ್ ಬಿ 12, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿದೆ. ಇದು ತೂಕ ಇಳಿಸಿಕೊಳ್ಳಲು ತುಂಬಾ ಸಹಾಯ ಮಾಡುತ್ತದೆ. ಮೊಸರು ತಿನ್ನುವುದರಿಂದ ಹೊಟ್ಟೆಯು ತಂಪಾಗಿರುತ್ತದೆ. ಜೊತೆಗೆ ಜೀರ್ಣಕ್ರಿಯೆಯೂ ಸುಲಭವಾಗುತ್ತದೆ.

ಇದನ್ನೂ ಓದಿ: Radish Leaves Benefits: ಆರೋಗ್ಯದ ನಿಧಿ ಮೂಲಂಗಿ ಸೊಪ್ಪು

ನಿಂಬೆಹಣ್ಣು: ನಿಂಬೆಹಣ್ಣಿನಿಂದ ಜ್ಯೂಸ್ ಮಾಡಿಕೊಂಡು ಕುಡಿದರೆ ದೇಹಕ್ಕೆ ಶಕ್ತಿ ಸಿಗುತ್ತದೆ ಎಂಬುದು ನಿಮಗೆಲ್ಲಾ ತಿಳಿದಿರುವ ಸಂಗತಿ. ಇನ್ನು ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ನಿಂಬೆ ನೀರನ್ನು ಕುಡಿಯಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಇದು ದೇಹಕ್ಕೆ ಶಕ್ತಿಯನ್ನು ನೀಡುವುದು ಮಾತ್ರವಲ್ಲದೆ ತೂಕವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರೈಬೋಫ್ಲಾವಿನ್, ವಿಟಮಿನ್ ಇ, ವಿಟಮಿನ್ ಬಿ-6, ಫೋಲೇಟ್, ಥಯಾಮಿನ್ ಮತ್ತು ನಿಯಾಸಿನ್ ನಂತಹ ಪ್ರಮುಖ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಇದು ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News