ಬ್ಲಡ್ ಶುಗರ್ ನಾರ್ಮಲ್ ಮಾಡಲು ಒಂದೇ ಒಂದು ಲವಂಗದ ಮೊಗ್ಗು ಸಾಕು! ಬಳಕೆಯ ಸಮಯ ವಿಧಾನ ಹೀಗೆಯೇ ಇರಲಿ

ನಾವು ಅಡುಗೆಯಲ್ಲಿ ಬಳಸುವ ಮಸಾಲೆ ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಸಹಾಯಕವಾಗಿದೆ. ಇದರಲ್ಲಿ ಲವಂಗ ಕೂಡಾ ಒಂದು.   

Written by - Ranjitha R K | Last Updated : Aug 1, 2024, 02:15 PM IST
  • ನಾವು ನಿತ್ಯ ಮಾಡುವ ಅಡುಗೆಯಲ್ಲಿ ಅನೇಕ ರೀತಿಯ ಮಸಾಲೆಗಳನ್ನು ಬಳಸುತ್ತೇವೆ.
  • ಮಸಾಲೆ ಪದಾರ್ಥಗಳೇ ಆರೋಗ್ಯ ಸಂಜೀವಿನಿಯಾಗಿಯೂ ಕೆಲಸ ಮಾಡುತ್ತದೆ
  • ಆದರೆ ಆ ಬಗ್ಗೆ ನಮಗೆ ಅರಿವಿರುವುದಿಲ್ಲ ಅಷ್ಟೇ.
ಬ್ಲಡ್ ಶುಗರ್ ನಾರ್ಮಲ್ ಮಾಡಲು ಒಂದೇ ಒಂದು ಲವಂಗದ ಮೊಗ್ಗು ಸಾಕು!  ಬಳಕೆಯ ಸಮಯ ವಿಧಾನ ಹೀಗೆಯೇ ಇರಲಿ  title=

Clove benefits to control Blood Sugar:ನಾವು ನಿತ್ಯ ಮಾಡುವ ಅಡುಗೆಯಲ್ಲಿ ಅನೇಕ ರೀತಿಯ ಮಸಾಲೆಗಳನ್ನು ಬಳಸುತ್ತೇವೆ. ಈ ಮಸಾಲೆಗಳನ್ನು ಅಡುಗೆಯ ಘಮ ಹೆಚ್ಚಿಸಲು ಮತ್ತು ರುಚಿ ಹೆಚ್ಚಿಸುವ ಸಲುವಾಗಿಯೇ ಬಳಸಲಾಗುತ್ತದೆ. ಆದರೆ ನಾವು ಅಡುಗೆ ಮನೆಯಲ್ಲಿ ಬಳಸುವ ಮಸಾಲೆ ಪದಾರ್ಥಗಳೇ ಆರೋಗ್ಯ ಸಂಜೀವಿನಿಯಾಗಿಯೂ ಕೆಲಸ ಮಾಡುತ್ತದೆ. ಆದರೆ ಆ ಬಗ್ಗೆ ನಮಗೆ ಅರಿವಿರುವುದಿಲ್ಲ ಅಷ್ಟೇ. ಹೀಗೆ ಸಾಮಾನ್ಯವಾಗಿ ಬಹುತೇಕ ಅಡುಗೆಯಲ್ಲಿ ಬಳಸುವ ಮಸಾಲೆ ಪದಾರ್ಥ ಎಂದರೆ ಲವಂಗ. ಲವಂಗವನ್ನು ನಿಯಮಿತವಾಗಿ ಬಳಸುವುದರಿಂದ ಮಧುಮೇಹದ ಸಮಸ್ಯೆಯನ್ನು ಕೂಡಾ ಸುಲಭವಾಗಿ ನಿವಾರಿಸಬಹುದು. 

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ  ಅಂಥಹ ಸ್ಥಿತಿಯನ್ನು ಮಧುಮೇಹ ಅಥ್ವಾ ಬ್ಲಡ್ ಶುಗರ್ ಎಂದು ಕರೆಯಲಾಗುತ್ತದೆ. ಬ್ಲಡ್ ಶುಗರ್ ನಮ್ಮ ದೇಹದಲ್ಲಿ ಕಾಣಿಸಿಕೊಂಡಾಗ ನಿರಂತರವಾಗಿ ಔಷಧಿ ಸೇವಿಸುವುದು ಅನಿವಾರ್ಯವಾಗಿ ಬಿಡುತ್ತದೆ. ಹಾಗಿದ್ದರೆ ಮಾತ್ರ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಾಧ್ಯ. ಆದರೆ, ಕೆಲವೊಂದು ಮನೆ ಮದ್ದಿನ ಸಹಾಯದಿಂದಲೂ ಶುಗರ್ ಅನ್ನು ನಾರ್ಮಲ್ ಮಾಡಿಕೊಳ್ಳಬಹುದು.

ಇದನ್ನೂ ಓದಿ :  40ವರ್ಷ ತುಂಬಿದ ಬಳಿಕವೂ ಚಿರ ಯುವತಿಯಂತೆ ಕಾಣಲು ಬಯಸುವ ಮಹಿಳೆಯರ ಆಹಾರದಲ್ಲಿ ಇರಲೇಬೇಕು ಈ 5 ಸೂಪರ್‌ಫುಡ್‌ಗಳು

ನಾವಿಲ್ಲಿ ನಿತ್ಯ ಅಡುಗೆಯಲ್ಲಿ ಬಳಸುವ ಲವಂಗದ ಬಗ್ಗೆ ಹೇಳುತ್ತಿದ್ದೇವೆ. ಲವಂಗದಲ್ಲಿ ಅನೇಕ ಔಷಧೀಯ ಗುಣಗಳಿವೆ.ಲವಂಗವನ್ನು ಅನೇಕ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ.ಲವಂಗ ನಂಜುನಿರೋಧಕವಾಗಿದ್ದು ಮಧುಮೇಹದ ಸಮಸ್ಯೆಯನ್ನು ನಿವಾರಿಸುತ್ತದೆ.ನೋವು ನಿವಾರಕವಾಗಿ ಅಥವಾ ಪೈನ್ ಕಿಲ್ಲರ್ ಆಗಿಯೂ ಇದನ್ನು ಬಳಸಬಹುದು.   

ಲವಂಗವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಇನ್ಸುಲಿನ್ ಹೆಚ್ಚಳ ಮಾಡಲು ಸಹಾಯ ಮಾಡುತ್ತದೆ. ಲವಂಗವು ಹೈಪೊಗ್ಲಿಸಿಮಿಕ್ ಪರಿಣಾಮವನ್ನು ಹೊಂದಿದ್ದು, ಇನ್ಸುಲಿನ್ ಸ್ರವಿಸುವಿಕೆಯನ್ನು ಮತ್ತು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ :  ದೈನಂದಿನ ಜೀವನದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಎಂದಿಗೂ ಕಾಡಲ್ಲ ಮೂಳೆಗಳ ಸಮಸ್ಯೆ!

ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಲವಂಗವನ್ನು ಹಲವಾರು ರೀತಿಯಲ್ಲಿ ಸೇವಿಸಬಹುದು.ಅದರಲ್ಲಿ ಮುಖ್ಯವಾಗಿ ರಾತ್ರಿ ಮಲಗುವ ಮುನ್ನ 2 ರಿಂದ 3 ಲವಂಗವನ್ನು ಬಾಯಿಯಲ್ಲಿ ಇಟ್ಟುಕೊಂಡರೆ ಬೆಳಗಾಗುವುದರ ಹೊತ್ತಿಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿರುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News