ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತಂದು ಹೃದಯವನ್ನು ಆರೋಗ್ಯವಾಗಿಡುತ್ತದೆ ಈ ಹಣ್ಣು ! ಒಂದೇ ತಿಂದರೆ ಸಾಕು

Dragon Fruit As Cholesterol Lowering Food: ಈ ಹಣ್ಣು ನೋಡುವುದಕ್ಕೆ ವಿಚಿತ್ರವಾಗಿ ಕಂಡರೂ  ಇದರ ಉಪಯೋಗ ಮಾತ್ರ ಬಲು ಹೆಚ್ಚು. ಅಲ್ಲದೆ ಇತರ ಹಣ್ಣುಗಳಿಗೆ ಹೋಲಿಸಿದರೆ ಈ ಹಣ್ಣಿನ ಬೆಲೆ ಕೂಡಾ ಕೊಂಚ ಜಾಸ್ತಿ. 

Written by - Ranjitha R K | Last Updated : Jul 31, 2023, 03:19 PM IST
  • ಭಾರತದಲ್ಲಿ ಯಾವುದೇ ಅಡುಗೆ ಮಾಡಬೇಕಾದರೂ ಎಣ್ಣೆ ಮಸಾಲೆ ತುಸು ಹೆಚ್ಚೇ ಬಳಸಲಾಗುತ್ತದೆ.
  • ಇದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ
  • ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತಂದು ಹೃದಯವನ್ನು ಆರೋಗ್ಯವಾಗಿಡುತ್ತದೆ ಈ ಹಣ್ಣು ! ಒಂದೇ ತಿಂದರೆ ಸಾಕು  title=

Dragon Fruit As Cholesterol Lowering Food : ಭಾರತದಲ್ಲಿ ಯಾವುದೇ ಅಡುಗೆ ಮಾಡಬೇಕಾದರೂ ಎಣ್ಣೆ ಮಸಾಲೆ ತುಸು ಹೆಚ್ಚೇ ಬಳಸಲಾಗುತ್ತದೆ. ಇದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಹೃದಯಾಘಾತದಂತಹ ಮಾರಣಾಂತಿಕ ಕಾಯಿಲೆಯ ಅಪಾಯವು ಹೆಚ್ಚಾಗುತ್ತದೆ. ಆದರೆ ಈ ಒಂದು ಹಣ್ಣನ್ನು ಸೇವಿಸುವ ಮೂಲಕ ಈ ಎಲ್ಲಾ ಅಪಾಯವನ್ನು ತೊಡೆದು ಹಾಕಬಹುದು. ಈ ಹಣ್ಣು ನೋಡುವುದಕ್ಕೆ ವಿಚಿತ್ರವಾಗಿ ಕಂಡರೂ  ಇದರ ಉಪಯೋಗ ಮಾತ್ರ ಬಲು ಹೆಚ್ಚು. ಅಲ್ಲದೆ ಇತರ ಹಣ್ಣುಗಳಿಗೆ ಹೋಲಿಸಿದರೆ ಈ ಹಣ್ಣಿನ ಬೆಲೆ ಕೂಡಾ ಕೊಂಚ ಜಾಸ್ತಿ. 

ಡ್ರ್ಯಾಗನ್ ಹಣ್ಣು ತಿನ್ನುವ ಅದ್ಭುತ ಪ್ರಯೋಜನಗಳು : 
ಡ್ರ್ಯಾಗನ್ ಹಣ್ಣಿನ ಒಳಭಾಗವು ಬಿಳಿ ಮತ್ತು ಗುಲಾಬಿ ಬಣ್ಣದ್ದಾಗಿದೆ. ಅನೇಕ ಜನರಿಗೆ ಈ ಹಣ್ಣಿನ ರುಚಿ ಬಹಳ ಇಷ್ಟವಾಗುತ್ತದೆ. ಈ ರಸಭರಿತ ಹಣ್ಣಿನಲ್ಲಿ ಸಾಕಷ್ಟು ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಇದಲ್ಲದೆ, ಇದು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. 

ಇದನ್ನೂ ಓದಿ : ಈ ನಾಲ್ಕು ವಸ್ತುಗಳನ್ನು ಸೇವಿಸಿದರೆ ಸಾಕು ! ಕೇವಲ 15 ದಿನಗಳಲ್ಲಿ Fat Burn ಸಾಧ್ಯ
1. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ : 
ಡ್ರ್ಯಾಗನ್ ಹಣ್ಣು ಅತಿ ಕಡಿಮೆ ಪ್ರಮಾಣದ ಕೊಬ್ಬನ್ನು ಹೊಂದಿರುತ್ತದೆ, ಇದರಿಂದಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಬಿಡುವುದಿಲ್ಲ. ಇದು ಹೃದಯ ಕಾಯಿಲೆಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ನಿಮ್ಮ ತೂಕವನ್ನು ಕಡಿಮೆ ಮಾಡ ಬಯಸುವವರಿಗೂ ಇದು ಬೆಸ್ಟ್ ಆಯ್ಕೆ. ಈ ರಸಭರಿತ ಹಣ್ಣನ್ನು ನಿಯಮಿತವಾಗಿ ಸೇವಿಸಬೇಕು. ಒಮೆಗಾ -3 ಕೊಬ್ಬಿನಾಮ್ಲವು ಅದರ ಬೀಜಗಳಲ್ಲಿ ಕಂಡುಬರುತ್ತದೆ. ಇದು ಪ್ರಮುಖ ಪೋಷಕಾಂಶವಾಗಿದೆ.

2. ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ :
ಡ್ರ್ಯಾಗನ್ ಹಣ್ಣಿನಲ್ಲಿ ಹೇರಳವಾದ ನಾರಿನಂಶವಿದೆ. ಇದು ಪರಿಧಮನಿಯ ಕಾಯಿಲೆ ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು  ತಡೆಯುತ್ತದೆ. ವಾಸ್ತವವಾಗಿ, ಫೈಬರ್ ಭರಿತ ಆಹಾರಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ಇದು ರಕ್ತದೊತ್ತಡ ಮತ್ತು ತೂಕವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.

ಇದನ್ನೂ ಓದಿ : ಗ್ರೀನ್‌ ಆಪಲ್‌ ಆರೋಗ್ಯ ಪ್ರಯೋಜನ ತಿಳಿದರೆ ಶಾಕ್ ಆಗುತ್ತೀರಿ

3. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ :
ಕರೋನಾ ವೈರಸ್ ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವತ್ತ ಒತ್ತು ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ನೋಡುವುದಾದರೆ ರೋಗ ನಿರೋದಕ ಶಕ್ತಿ ಹೆಚ್ಚಿಸಲು ಡ್ರ್ಯಾಗನ್ ಹಣ್ಣು ಸರಿಯಾದ ಆಯ್ಕೆ. ಇದರಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಖನಿಜಗಳು ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ದೇಹದ ಅನೇಕ ಅಗತ್ಯಗಳನ್ನು ಪೂರೈಸುತ್ತದೆ.

(  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News