ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ 'ಸಸ್ಯಾಹಾರಿ ಮೊಟ್ಟೆ'! ಹೇಗೆ ತಯಾರಾಗುತ್ತೆ ಗೊತ್ತಾ?

ಅತೀ ಶೀಘ್ರದಲ್ಲಿಯೇ ಸಸ್ಯಾಹಾರಿ ಮೊಟ್ಟೆಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ ಇದನ್ನು ಹೇಗೆ ತಯಾರಿಸಲಾಗುತ್ತೆ ಅಂತ ತಿಳೀಬೇಕಾ? ಹಾಗಿದ್ದರೆ ಈ ಸುದ್ದಿ ಓದಿ...

Last Updated : May 18, 2019, 03:47 PM IST
ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ 'ಸಸ್ಯಾಹಾರಿ ಮೊಟ್ಟೆ'! ಹೇಗೆ ತಯಾರಾಗುತ್ತೆ ಗೊತ್ತಾ? title=

ನವದೆಹಲಿ: ಮೊಟ್ಟೆಯಲ್ಲಿ ಸಾಕಷ್ಟು ಪೌಷ್ಟಿಕಾಂಶಗಳಿದ್ದರೂ ಸಹ ಹಲವರು ತಿನ್ನಲು ಹಿಂದೇಟು ಹಾಕುತ್ತಾರೆ. ಕಾರಣ ಅದು ಮಾಂಸಹಾರಿ ಎಂದು. ಪಟ್ಟಣ ಪ್ರದೇಶಗಳಲ್ಲಿ ಸಸ್ಯಾಹಾರಿಗಳೂ ಸಹ ಮೊಟ್ಟೆ ಸೇವಿಸುತ್ತಾರೆ. ಆದರೆ ಗ್ರಾಮೀಣ ಭಾಗದ ಜನತೆ ಮಾತ್ರ, ಮೊಟ್ಟೆಯಲ್ಲಿ ಎಷ್ಟೇ ಪೌಷ್ಟಿಕಾಂಶ ಇದ್ದರೂ ಸಹ ನಮಗೆ ಬೇಡ... ಅದು ಮಾಂಸಾಹಾರ ಎಂದು ದೂರ ಇಟ್ಟಿದ್ದಾರೆ. ಈ ಎಲ್ಲಾ ಗೊಂದಲಗಳಿಗೆ ಇನ್ನು ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ. ಯಾಕೆ ಗೊತ್ತಾ? ಅತೀ ಶೀಘ್ರದಲ್ಲಿಯೇ ಸಸ್ಯಾಹಾರಿ ಮೊಟ್ಟೆಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ ಇದನ್ನು ಹೇಗೆ ತಯಾರಿಸಲಾಗುತ್ತೆ ಅಂತ ತಿಳೀಬೇಕಾ? ಹಾಗಿದ್ದರೆ ಈ ಸುದ್ದಿ ಓದಿ...

ಮೊಟ್ಟೆಗಳನ್ನು ತಿನ್ನದ ಜನರಿಗಾಗಿಯೇ ದೊಡ್ಡ ಕಂಪನಿಯೊಂದು ಲಿಕ್ವಿಡ್ ಎಗ್ ಸಬ್'ಸ್ಟಿಟ್ಯೂಟ್ ಲಾಂಚ್ ಮಾಡಿದೆ. ಇದನ್ನು ಪೂರ್ತಿಯಾಗಿ ಹೆಸರು ಬೇಳೆಯಿಂದ ತಯಾರಿಸಲಾಗುತ್ತದೆ. ಈ ಸಸ್ಯಾಹಾರಿ ಮೊಟ್ಟೆಯನ್ನು ಕಂಪನಿಯು ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲಿಯೇ ಪರಿಚಯಿಸುವ ಸಾಧ್ಯತೆಯಿದೆ. ಕಂಪನಿ ಹೇಳುವಂತೆ, ಮೊಟ್ಟೆಯ ಮತ್ತೊಂದು ರೂಪವಾದ ಈ ಉತ್ಪನ್ನಕ್ಕೆ ಅಮೇರಿಕಾದಲ್ಲಿ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಭಾರತದ ಸಸ್ಯಹಾರಿಗಳೂ ಸಹ ಈ ಉತ್ಪನ್ನವನ್ನು ಒಪ್ಪುತ್ತಾರೆ ಎಂಬ ವಿಶ್ವಾಸವಿದೆ ಎಂದು ಕಂಪನಿ ಹೇಳಿದೆ. 

ವೈದ್ಯಕೀಯ ಸಂಶೋಧನೆಗಳ ಪ್ರಕಾರ ಮೊಟ್ಟೆ ಬಹಳ ಪೌಷ್ಟಿಕ ಆಹಾರ. ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಮೊಟ್ಟೆ ಸೇವಿಸುತ್ತಾರೆ. ಇದರಲ್ಲಿ ಹೇರಳವಾದ ಪ್ರೋಟಿನ್ ಮತ್ತು ಪೌಷ್ಟಿಕಾಂಶಗಳಿವೆ. ಪ್ರತಿ ಮೊಟ್ಟೆಯಲ್ಲಿ ಶೇ.6 ರಷ್ಟು ವಿಟಮಿನ್ ಎ, ವಿಟಮಿನ್ ಬಿ5 ಶೇ.7, ವಿಟಮಿನ್ ಬಿ12 ಶೇ15 ಹಾಗೂ ಪ್ರಾಸ್ಪರಸ್ ಶೇ9 ರಷ್ಟು ಇರುತ್ತದೆ. ಜೊತೆಗೆ ವಿಟಮಿನಿ ಇ.  ಪಾಲಿಕ್ ಆಸಿಡ್, ಒಮೆಗಾ 3 ಸೇರಿದಂತೆ ಹಲವು ಅಂಶಗಳು ಮೊಟ್ಟೆಯಲ್ಲಿವೆ. ಹೀಗಾಗಿ ಮೊಟ್ಟೆ ಆರೋಗ್ಯಕ್ಕೆ ಬಹಳ ಒಳ್ಳೆಯದು.
 

Trending News