ಬೆಂಗಳೂರು : ಯೂರಿಕ್ ಆಸಿಡ್ ದೇಹದಲ್ಲಿನ ಪ್ಯೂರಿನ ಗಳ ವಿಭಜನೆಯ ಸಮಯದಲ್ಲಿ ರೂಪುಗೊಳ್ಳುವ ಉಪ ಉತ್ಪನ್ನವಾಗಿದೆ.ಪ್ಯೂರಿನ್ಗಳು ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತವೆ.ಕೆಲವು ಆಹಾರಗಳು ಮತ್ತು ಪಾನೀಯಗಳಲ್ಲಿಯೂ ಇದು ಕಂಡುಬರುತ್ತವೆ.ಅದರಲ್ಲಿ ಹೆಚ್ಚಿನವು ರಕ್ತದಲ್ಲಿ ಕರಗುತ್ತವೆ. ಜೊತೆಗೆ ಮೂತ್ರಪಿಂಡಗಳ ಮೂಲಕ ಮೂತ್ರದೊಂದಿಗೆ ದೇಹದಿಂದ ಹೊರ ಹೋಗುತ್ತದೆ.ಆದರೆ ಮೂತ್ರಪಿಂಡ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕುವುದು ಸಾಧ್ಯವಾಗದೇ ಇದ್ದಾಗ ಅದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಾಗ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಆದರೆ, ಅದರ ರೋಗಲಕ್ಷಣಗಳನ್ನು ಗುರುತಿಸುವುದು ಮುಖ್ಯವಾಗಿದೆ.ಈ ರೋಗ ಲಕ್ಷಣವನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸುವುದರಿಂದ ಸಂಧಿವಾತ ಮತ್ತು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ.ಯೂರಿಕ್ ಆಸಿಡ್ ಹೆಚ್ಚಾದಾಗ ಮೂತ್ರ ವಿಸರ್ಜಿಸುವಾಗ ಕೆಲವೊಂದು ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಇದನ್ನೂ ಓದಿ : White Hair: ಅಡುಗೆಗೆ ಬಳಸುವ ಈ ಪದಾರ್ಥದಿಂದ ನಿಮ್ಮ ಕೂದಲನ್ನು ಕಪ್ಪಾಗಿಸಬಹುದು..! ಇಲ್ಲಿದೆ ಬಳಸುವ ವಿಧಾನ
ಮೂತ್ರದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಾಗ ಕಾಣಿಸುವ ಲಕ್ಷಣಗಳು :
ಯೂರಿಕ್ ಆಸಿಡ್ ಹೆಚ್ಚಾದಾಗ ಮೂತ್ರದ ಬಣ್ಣ ಗಾಢವಾಗುತ್ತದೆ.ಆರೋಗ್ಯವಂತ ವ್ಯಕ್ತಿಯ ಮೂತ್ರವು ಸಾಮಾನ್ಯ ಹಳದಿಯಾಗಿರುತ್ತದೆ. ಆದರೆ ಯೂರಿಕ್ ಆಸಿಡ್ ಪ್ರಮಾಣವು ಹೆಚ್ಚಿದ್ದರೆ, ಅದರ ಬಣ್ಣವು ಗಾಢ ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗಬಹುದು.
ಯೂರಿಕ್ ಆಸಿಡ್ ಹೆಚ್ಚಳವಾದಾಗ ವ್ಯಕ್ತಿಯ ಮೂತ್ರದ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಸಾಮಾನ್ಯಕ್ಕಿಂತ ಕಡಿಮೆ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ, ಇದು ಎಚ್ಚರಿಕೆಯ ಸಂಕೇತವಾಗಿರಬಹುದು.ಮೂತ್ರಪಿಂಡಗಳ ಕಾರ್ಯನಿರ್ವಹಣೆಯಲ್ಲಿನ ಅಡಚಣೆಯನ್ನು ಇದು ಸೂಚಿಸುತ್ತದೆ.
ಮೂತ್ರ ವಿಸರ್ಜಿಸುವಾಗ ನೋವು ಅಥವಾ ಉರಿ ಕಾಣಿಸಿಕೊಂಡರೆ ಇದು ಹೆಚ್ಚಿನ ಯೂರಿಕ್ ಆಸಿಡ್ ಮಟ್ಟದ ಸಂಕೇತವಾಗಿರಬಹುದು.ಮೂತ್ರನಾಳದ ಸೋಂಕು ಅಥವಾ ಮೂತ್ರಪಿಂಡದ ಕಲ್ಲುಗಳಿಂದಲೂ ಹೀಗಾಗುತ್ತದೆ.
ಇದನ್ನೂ ಓದಿ : ಮಧುಮೇಹಿಗಳಿಗೆ ವರದಾನ ʼಈʼ ನೀರು.. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಶುಗರ್ ಯಾವಾಗ್ಲೂ ನಾರ್ಮಲ್ ಇರುತ್ತೆ!!
ಮೂತ್ರದಲ್ಲಿ ನೊರೆ ಕಾಣಿಸಿಕೊಂಡರೆ ಅದು ಯೂರಿಕ್ ಆಸಿಡ್ ಹೆಚ್ಚಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಮೂತ್ರದಲ್ಲಿನ ಫೋಮ್ ಮೂತ್ರಪಿಂಡಗಳು ದೇಹದಿಂದ ವಿಷವನ್ನು ಸರಿಯಾಗಿ ತೆಗೆದುಹಾಕಲು ಸಾಧ್ಯವಾಗುವುದಿಲ್ಲ ಮತ್ತು ಹೆಚ್ಚಿನ ಪ್ರಮಾಣದ ಪ್ರೋಟೀನ್ ಮೂತ್ರದೊಂದಿಗೆ ಹೊರ ಬರುತ್ತಿದೆ ಎನ್ನುವುದನ್ನು ತೋರಿಸುತ್ತದೆ.
ಆರೋಗ್ಯವಂತ ವ್ಯಕ್ತಿಯ ಮೂತ್ರವು ಸಾಮಾನ್ಯ ವಾಸನೆಯನ್ನು ಹೊಂದಿರುತ್ತದೆ. ಅದು ಫ್ಲಶ್ನೊಂದಿಗೆ ಹೋಗುತ್ತದೆ. ಆದರೆ ನಿಮ್ಮ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾದರೆ ಮೂತ್ರವು ಬಲವಾದ ವಾಸನೆಯನ್ನು ನೀಡುತ್ತದೆ.
(ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.