ವ್ಯಾಯಾಮವಿಲ್ಲದೆ Weight control ಮಾಡಬೇಕಾದರೆ ಡಯೆಟ್ ನಲ್ಲಿರಲಿ ಫೈಬರ್

ತರಕಾರಿಗಳು, ಹಣ್ಣುಗಳು, ಬೀಜಗಳು, ಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಕಂಡುಬರುತ್ತದೆ. ಫೈಬರ್ ಬೊಜ್ಜು, ಕ್ಯಾನ್ಸರ್, ರಕ್ತದೊತ್ತಡ ಮತ್ತು ಮಧುಮೇಹದಂತಹ ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ. 

Written by - Ranjitha R K | Last Updated : Mar 28, 2021, 10:25 AM IST
  • ಈ ಆಹಾರಗಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇರುತ್ತದೆ
  • ಫೈಬರ್ ಯುಕ್ತ ಆಹಾರ ದೇಹ ತೂಕ ನಿಯಂತ್ರಣದಲ್ಲಿಡುತ್ತದೆ
  • ಫೈಬರ್ ನಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ
ವ್ಯಾಯಾಮವಿಲ್ಲದೆ Weight control ಮಾಡಬೇಕಾದರೆ ಡಯೆಟ್ ನಲ್ಲಿರಲಿ ಫೈಬರ್    title=
ಫೈಬರ್ ಯುಕ್ತ ಆಹಾರ ದೇಹ ತೂಕ ನಿಯಂತ್ರಣದಲ್ಲಿಡುತ್ತದೆ (file photo)

ನವದೆಹಲಿ : ಇತ್ತೀಚೀನ ದಿನಗಳಲ್ಲಿ ಹೆಚ್ಚುತ್ತಿರುವ ದೇಹ ತೂಕ ಬಹುತೇಕ ಜನರ ಸಮಸ್ಯೆಯಾಗಿದೆ. ಹೆಚ್ಚುತ್ತಿರುವ ದೇಹ ತೂಕ  ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಜನರು ತಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು (Weight control) ಮತ್ತು ಆರೋಗ್ಯವಾಗಿರಲು ಬಯಸುತ್ತಾರೆ. ಇದಕ್ಕಾಗಿ, ವ್ಯಾಯಾಮ (exercise) ಮಾಡಬೇಕಾಗುತ್ತದೆ. ಆದರೆ ವ್ಯಾಯಾಮ ಇಲ್ಲದೆ ಬರೀ ನೀವು ಸೇವಿಸುವ ಆಹಾರದಿಂದಲೇ  (Food) ತೂಕವನ್ನು ನಿಯಂತ್ರಿಸುವುದು ಕೂಡಾ ಸಾಧ್ಯ.  ಫೈಬರ್ (Fiber) ಹೆಚ್ಚಾಗಿರುವ ಆಹಾರ ಸೇವಿಸುವುದರಿಂದ ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು. 

ಈ ಆಹಾರಗಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇರುತ್ತದೆ : 
ತರಕಾರಿಗಳು (Vegetables) , ಹಣ್ಣುಗಳು (Fruits) , ಬೀಜಗಳು, ಧಾನ್ಯಗಳಲ್ಲಿ ಫೈಬರ್ ಕಂಡುಬರುತ್ತದೆ. ಫೈಬರ್ ಬೊಜ್ಜು, ಕ್ಯಾನ್ಸರ್ (cancer) , ರಕ್ತದೊತ್ತಡ ಮತ್ತು ಮಧುಮೇಹದಂತಹ ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ. ಫೈಬರ್ ನಲ್ಲಿ ಎರಡು ವಿಧಗಳಿವೆ. ಒಂದು ಕರಗುವ ಫೈಬರ್ ಮತ್ತು ಇನ್ನೊಂದು ಕರಗದ ಫೈಬರ್. ಕರಗುವ ಫೈಬರ್ ಅಂದರೆ ಅದು ನೀರಿನಲ್ಲಿ ಕರಗುತ್ತದೆ.

ಇದನ್ನೂ ಓದಿ : Coronavirus Second Wave: ಪುನಃ ಗತಿ ಪಡೆದುಕೊಂಡ ಕೊರೊನಾ, ಈ ಐದು ವಿಧಾನ ಅನುಸರಿಸಿ ವೈರಸ್ ನಿಂದ ಪಾರಾಗಿ

ದೇಹ ತೂಕ ನಿಯಂತ್ರಣದಲ್ಲಿರುತ್ತದೆ :  
ದೇಹ ತೂಕ ನಿಯಂತ್ರಿಸಲು ಬಯಸುವವರು ಆಹಾರದಲ್ಲಿ (Food) ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಸೇವಿಸಬೇಕು. ಫೈಬರ್ ಯುಕ್ತ ಆಹಾರ ಸೇವಿಸಿದರೆ ಬಹಳ ಹೊತ್ತಿನವರೆಗೆ ಹಸಿವಾಗುವುದಿಲ್ಲ. ಹಾಗಾಗಿ ಮತ್ತೆ ಮತ್ತೆ ಏನನ್ನಾದರೂ ತಿನ್ನಬೇಕು ಅನ್ನಿಸುವುದಿಲ್ಲ. ಅಲ್ಲದೆ, ಫೈಬರ್ (Fiber) ರಕ್ತದಲ್ಲಿ ಸಕ್ಕರೆ ಅಂಶವನ್ನು ಬೆರೆಸುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ನಾರ್ಮಲ್ ಆಗಿರುತ್ತದೆ.  

ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ : 
ಫೈಬರ್ ಹೊಂದಿರುವ ಆಹಾರವನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ (digestion) ಸಹಾಯವಾಗುತ್ತದೆ. ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಕಂಡುಬರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಫೈಬರ್ ಗಳು ಅವಶ್ಯಕ. ಆಹಾರವನ್ನು ಜೀರ್ಣಿಸಿಕೊಳ್ಳಲು ಈ ಉತ್ತಮ ಬ್ಯಾಕ್ಟೀರಿಯಾಗಳು ಬಹಳ ಮುಖ್ಯವಾಗಿರುತ್ತದೆ.  ಈ ಉತ್ತಮ ಬ್ಯಾಕ್ಟೀರಿಯಾಗಳಿಗೆ ಫೈಬರ್ ಸಿಗದಿದ್ದರೆ ಅವುಗಳು ನಮಗೆ ಹಾನಿ ಮಾಡುತ್ತವೆ.

ಇದನ್ನೂ ಓದಿ : ಈ ಕಾರಣಗಳಿಗಾಗಿ ಬೇಸಿಗೆಯಲ್ಲಿ ತಿನ್ನಲೇ ಬೇಕು ದಿನಕ್ಕೊಂದು ಕಿತ್ತಳೆ ಹಣ್ಣು

ಹೃದ್ರೋಗಗಳಿಂದ ರಕ್ಷಿಸುತ್ತದೆ :
ನಾರಿನ ಅಂಶವನ್ನು ಒಳಗೊಂಡಿರುವ ಆಹಾರ ಹೃದಯಕ್ಕೆ ಬಹಳ ಒಳ್ಳೆಯದು ಎನ್ನುವುದು ಅನೇಕ ಅಧ್ಯಯನಗಳಿಂದ ಸಾಬೀತಾಗಿದೆ. ಇದು ರಕ್ತದೊತ್ತಡವನ್ನು (Blood pressure) ಕೂಡಾ ನಿಯಂತ್ರಿಸುತ್ತದೆ. ಫೈಬರ್ ನಮ್ಮ ದೇಹದಲ್ಲಿರುವ ಬ್ಯಾಡ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಹೊಟ್ಟೆಯ ಅಲ್ಸರ್ ನಿಂದ ರಕ್ಷಿಸುತ್ತದೆ : 
ಫೈಬರ್ ಗಳು ಹೊಟ್ಟೆಯ ಹುಣ್ಣನ್ನು ತಡೆಯುತ್ತವೆ. ಅಲ್ಲದೆ, ಆಹಾರ ಜೀರ್ಣಕ್ರಿಯೆಗೆ ಫೈಬರ್ ಸೇವನೆ ಬಹಳ ಮುಖ್ಯ.  

ಇದನ್ನೂ ಓದಿ : Tips For Better Sleep During Night: ದಿನವಿಡೀ ಲವಲವಿಕೆಯಿಂದ ಇರಲು ಪುರುಷರಿಗೆ ಇಲ್ಲಿದೆ ಮನೆಮದ್ದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News