ಬೆಂಗಳೂರು : ನಮ್ಮ ನಿಮ್ಮೆಲ್ಲರ ಮಧ್ಯೆ ಇಂತಹವರು ಯಾರಾದರೂ ಇದ್ದೇ ಇರುತ್ತಾರೆ. ಅವರು ಚೀಸ್ ಬರ್ಗರ್ ನಿಂದ ಚೀಸ್ ಫ್ರೈಸ್, ಪಿಜ್ಜಾ, ಡೋನಟ್, ಬಿರಿಯಾನಿ, ಕಬಾಬ್‌ಗಳವರೆಗೆ ಏನೇ ತಿಂದರೂ ಅವರು ದಪ್ಪ ಆಗುವುದೇ ಇಲ್ಲ. ಅದೇ ರೀತಿ ಇನ್ನೊಂದು ರೀತಿಯ ಜನರಿರುತ್ತಾರೆ ಅವರು ಕೇವಲ ಆರೋಗ್ಯಕರ ಹಣ್ಣು, ತರಕಾರಿಗಳನ್ನು ಹಿತ-ಮಿತವಾಗಿ ಸೇವಿಸುತ್ತಿದ್ದರೂ ಅವರ ತೂಕ (Weight Gain) ವೇಗವಾಗಿ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚಾಗಿ ಆಹಾರ ಸವಿದ ನಂತರವೂ ಅವರ ತೂಕ ಹೆಚ್ಚಾಗದೆ ಅವರು ತೆಳ್ಳಗೆ ಇರುವುದನ್ನು ಕಂಡು ಸಾಮಾನ್ಯವಾಗಿ ಒಂದಲ್ಲಾ ಒಂದು ಬಾರಿ ಅಸೂಯೇಯಂತು ಖಂಡಿತವಾಗಿಯೂ ಆಗಿರುತ್ತದೆ. ಅಷ್ಟಕ್ಕೂ ಅವರು ಹಾಗಿರಲು ಕಾರಣವೇನು? ಅದರ ಹಿಂದಿನ ರಹಸ್ಯವೇನು? ಎಂಬುದು ಎಲ್ಲರಿಗೂ ಕುತೂಹಲಕಾರಿ ಪ್ರಶ್ನೆಯಾಗಿದೆ.
ಮೆಟಬಾಲಿಸಂ/ಚಯಾಪಚ ಕಾರಣದಿಂದಾಗಿ ತೂಕ ಹೆಚ್ಚಾಗುವುದಿಲ್ಲ :
ಇದಕ್ಕೆ ಉತ್ತರ ಚಯಾಪಚಯ (Metabolism). ದೇಹದಲ್ಲಿ ಹೆಚ್ಚಿನ ಚಯಾಪಚಯ ದರವನ್ನು ಹೊಂದಿರುವ ಜನರು, ಅವರು ಜೀವನಕ್ರಮ ಅಥವಾ ಚಟುವಟಿಕೆಗಳ ಸಮಯದಲ್ಲಿ ಮಾತ್ರವಲ್ಲದೆ ವಿಶ್ರಾಂತಿ ಸ್ಥಿತಿಯಲ್ಲಿಯೂ ಕ್ಯಾಲೊರಿಗಳನ್ನು ವೇಗವಾಗಿ ಸುಡುವುದನ್ನು ಮುಂದುವರಿಸುತ್ತಾರೆ. ಹೆಚ್ಚಿನ ಚಯಾಪಚಯ ಎಂದರೆ ಒಬ್ಬ ವ್ಯಕ್ತಿಗೆ ತಮ್ಮ ದೇಹದ ಸರಿಯಾದ ತೂಕವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಕ್ಯಾಲೊರಿಗಳು ಬೇಕಾಗುತ್ತವೆ ಮತ್ತು ಅದಕ್ಕಾಗಿಯೇ ಹೆಚ್ಚಿನ ಚಯಾಪಚಯ ದರವನ್ನು ಹೊಂದಿರುವ ಜನರು ಹೆಚ್ಚಿನ ಕ್ಯಾಲೋರಿ ಆಹಾರವನ್ನು ಸೇವಿಸಿದ ನಂತರವೂ ಅವರು ಸಣ್ಣಗೆ ಇರುತ್ತಾರೆ. ಅವರ ತೂಕ ಹೆಚ್ಚಾಗುವುದಿಲ್ಲ.
ಚೆನ್ನಾಗಿ ಅಗಿದು ತಿಂದರೆ ತೂಕ ಹೆಚ್ಚಾಗುವುದಿಲ್ಲ:
ಚಯಾಪಚಯ ದರ ಮಾತ್ರವಲ್ಲ, ಇನ್ನೂ ಅನೇಕ ಕಾರಣಗಳಿವೆ, ಈ ಕಾರಣದಿಂದಾಗಿ ಕೆಲವರು ಅಧಿಕ ಆಹಾರ ಸೇವಿಸಿದ ನಂತರವೂ ಅವರ ತೂಕ ಹೆಚ್ಚಾಗುವುದಿಲ್ಲ. ಅವುಗಳಲ್ಲಿ ಒಂದು ತಿನ್ನುವ ವೇಗ. ನೀವು ಸಹ ಸ್ಲಿಮ್ ಹಾಗೂ ಫಿಟ್ ಆಗಲು ಬಯಸಿದರೆ, ತಿನ್ನುವಾಗ ಆತುರ ತೋರಿಸಬೇಡಿ. ಸರಿಯಾಗಿ ಅಗಿದು (Chew Properly) ಆಹಾರ ಸವಿಯುವ ಜನರು ಹೆಚ್ಚು ತೂಕವನ್ನು ಹೊಂದಿರುವುದಿಲ್ಲ. ಏಕೆಂದರೆ ಅವರ ಮೆದುಳು ಶೀಘ್ರದಲ್ಲೇ ಅವರಿಗೆ ಹೊಟ್ಟೆ ತುಂಬಿದೆ ಎಂದು ದೇಹಕ್ಕೆ ಸಂಕೇತವನ್ನು ನೀಡುತ್ತದೆ. ಇದನ್ನು ಮಾಡುವುದರಿಂದ ನೀವು ಕಡಿಮೆ ತಿನ್ನುತ್ತೀರಿ. ಆದರೆ ಹೊಟ್ಟೆ ತುಂಬಾ ತಿನ್ನುತ್ತೀರಿ.
ಇದನ್ನೂ ಓದಿ - Weight Loss: ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ, ಈ ಅಭ್ಯಾಸಗಳನ್ನು ಇಂದೇ ಬಿಡಿ
ತೂಕ ಇಳಿಸಿಕೊಳ್ಳಲು ಉತ್ತಮ ನಿದ್ರೆ ಅಗತ್ಯ :
ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಹಸಿವನ್ನು ಹೆಚ್ಚಿಸುತ್ತದೆ ಮತ್ತು ಅದೇ ಸಮಯದಲ್ಲಿ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಕಷ್ಟವಾಗುತ್ತದೆ. ಸಾಕಷ್ಟು ನಿದ್ರೆ ತೆಗೆದುಕೊಳ್ಳದಿದ್ದರೆ, ನಿದ್ರಾಹೀನತೆಯಿಂದಾಗಿ (Loss of Sleep) ಕಾರ್ಟಿಸೋಲ್ ಹಾರ್ಮೋನ್ ಉತ್ಪಾದನೆಯು ಪ್ರಾರಂಭವಾಗುತ್ತದೆ, ಇದರಿಂದಾಗಿ ದೇಹವು ಹೆಚ್ಚು ಹಾನಿಯಾಗುತ್ತದೆ. ಆದ್ದರಿಂದ, ನೀವು ಸಾಕಷ್ಟು ತಿಂದ ನಂತರವೂ ನಿಮ್ಮ ತೂಕವನ್ನು ಕಾಪಾಡಿಕೊಳ್ಳಲು ಬಯಸಿದರೆ, ಪ್ರತಿದಿನ ಉತ್ತಮ ನಿದ್ರೆ ಮಾಡುವುದು ಕೂಡ ಅತ್ಯಗತ್ಯ.
ಇದನ್ನೂ ಓದಿ - Weight Loss ಮಾಡಲು ದೇಸಿ ತುಪ್ಪವನ್ನು ಈ ರೀತಿ ಬಳಸಿ
ಜೆನೆಟಿಕ್ಸ್ ಸಹ ಒಂದು ಪ್ರಮುಖ ಪಾತ್ರವನ್ನು ಹೊಂದಿದೆ :
ಒಬ್ಬ ವ್ಯಕ್ತಿಯು ತೂಕವನ್ನು ಹೆಚ್ಚಿರಲು ಅಥವಾ ಕಡಿಮೆ ಇರಲು ನಿಮ್ಮ ಜೀನ್‌ಗಳು ಸಹ ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪಿಎಲ್ಒಎಸ್ ಜೆನೆಟಿಕ್ಸ್ ಜರ್ನಲ್ನಲ್ಲಿ 2019 ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸುಮಾರು 250 ವಿವಿಧ ರೀತಿಯ ಡಿಎನ್ಎಗಳಿವೆ, ಅವು ಬೊಜ್ಜಿಗೆ (Obesity) ಸಂಬಂಧಿಸಿವೆ. ಸ್ಲಿಮ್ ಮತ್ತು ದೇಹದಲ್ಲಿ ಬೊಜ್ಜು ಕಡಿಮೆ ಇರುವ ಜನರ ಮೇಲೆ ನಡೆಸಲಾಗಿರುವ ಅಧ್ಯಯನದಲ್ಲಿ ಇದನ್ನು ಕಂಡುಕೊಳ್ಳಲಾಗಿದೆ. ಅಲ್ಲದೆ, ಅಮೇರಿಕನ್ ಕೌನ್ಸಿಲ್ ಆನ್ ಎಕ್ಸರ್ಸೈಜ್ ಪ್ರಕಾರ, ವ್ಯಾಯಾಮೇತರ ಚಟುವಟಿಕೆ ಥರ್ಮೋಜೆನೆಸಿಸ್ (NEAT) ಸಹಾಯದಿಂದ ಚಯಾಪಚಯವನ್ನು 50 ಪ್ರತಿಶತದವರೆಗೆ ಹೆಚ್ಚಿಸಬಹುದು. ಸರಿಯಾದ ತಾಲೀಮು ಇಲ್ಲದ ಚಟುವಟಿಕೆಗಳನ್ನು ಇದು ಒಳಗೊಂಡಿದೆ - ಉದಾಹರಣೆಗೆ ಫೋನ್‌ನಲ್ಲಿ ಮಾತನಾಡುವಾಗ ನಡೆಯುವುದು, ಕುಳಿತುಕೊಳ್ಳುವಾಗ ನಿಮ್ಮ ಕಾಲು ಮತ್ತು ಬೆರಳುಗಳನ್ನು ಚಲಿಸುವುದು ಇತ್ಯಾದಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.