Winter Weight Loss Tips: ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಲು ಬಯಸುವಿರಾ? ನಿಮ್ಮ ಆಹಾರದಲ್ಲಿರಲಿ ಈ ಡ್ರೈ ಫ್ರೂಟ್ಸ್

Winter Weight Loss Tips: ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳುವುದು ಕಷ್ಟ ಎಂದು ಹಲವರು ಹೇಳುತ್ತಾರೆ. ಆದರೆ, ಕೆಲವು ಒಣ ಹಣ್ಣುಗಳ ಸಹಾಯದಿಂದ ನೀವು ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Dec 10, 2021, 02:10 PM IST
  • ಚಳಿಗಾಲದಲ್ಲಿ ಡ್ರೈ ಫ್ರೂಟ್ಸ್ ತಿಂದರೆ ದೇಹಕ್ಕೆ ಶಾಖ ಸಿಗುವುದಲ್ಲದೆ ತೂಕ ಕಡಿಮೆಯಾಗುತ್ತದೆ
  • ಬಾದಾಮಿಯನ್ನು ತೂಕ ಕಡಿಮೆ ಮಾಡಲು ಉತ್ತಮ ಎಂದು ಪರಿಗಣಿಸಲಾಗುತ್ತದೆ
  • ನೆನೆಸಿದ ವಾಲ್ನಟ್ಸ್ ಅನ್ನು ಪ್ರತಿದಿನ ತಿನ್ನುವುದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
Winter Weight Loss Tips: ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಲು ಬಯಸುವಿರಾ? ನಿಮ್ಮ ಆಹಾರದಲ್ಲಿರಲಿ ಈ ಡ್ರೈ ಫ್ರೂಟ್ಸ್ title=
Winter Weight Loss

Winter Weight Loss Tips: ಸಾಮಾನ್ಯವಾಗಿ ಬೇರೆ ಸಮಯಕ್ಕಿಂತ ಚಳಿಗಾಲದಲ್ಲಿ, ತೂಕ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ನೀವು ಒಣ ಹಣ್ಣುಗಳನ್ನು ಸೇವಿಸಬಹುದು. 

ಚಳಿಗಾಲದಲ್ಲಿ ಡ್ರೈ ಫ್ರೂಟ್ಸ್ ತಿಂದರೆ ದೇಹಕ್ಕೆ ಶಾಖ ಸಿಗುವುದಲ್ಲದೆ ತೂಕ ಕಡಿಮೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಅಂತಹ ಕೆಲವು ಒಣ ಹಣ್ಣುಗಳ ಬಗ್ಗೆ ಹೇಳಲಿದ್ದೇವೆ, ಇದರಿಂದಾಗಿ ನಿಮ್ಮ ತೂಕವನ್ನು ಕಡಿಮೆ ಮಾಡಬಹುದು (Winter Weight Loss). ಚಳಿಗಾಲದಲ್ಲಿ ತೂಕವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುವ ಒಣ ಹಣ್ಣುಗಳ ಬಗ್ಗೆ ತಿಳಿಯೋಣ...

ಇದನ್ನೂ ಓದಿ- Aerobic Exercise ಮಾಡಿ ಈ 5 ಪ್ರಯೋಜನ ಪಡೆಯಿರಿ : ಇದು ತೂಕ ಇಳಿಸಲು ಸುಲಭ ಮಾರ್ಗ

ಬಾದಾಮಿ- ಬಾದಾಮಿ (Almonds) ತೂಕ ಕಡಿಮೆ ಮಾಡಲು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ. ಬಾದಾಮಿಯು ಹೊಟ್ಟೆಯ ಕೊಬ್ಬನ್ನು ಮತ್ತು ಒಟ್ಟಾರೆ ದೇಹದ ದ್ರವ್ಯರಾಶಿ ಸೂಚಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾದಾಮಿಯು ಮೊನೊ-ಅನ್‌ಸ್ಯಾಚುರೇಟೆಡ್ ಕೊಬ್ಬಿನಿಂದ ಸಮೃದ್ಧವಾಗಿದೆ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿದೆ. ಇದನ್ನು ತಿಂದರೆ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ.

ವಾಲ್ನಟ್ಸ್ - ವಾಲ್ನಟ್ಸ್ ಪ್ರೋಟೀನ್, ಖನಿಜಗಳು ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿದೆ . ಇದನ್ನು ತಿಂದರೆ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ. ನೆನೆಸಿದ ವಾಲ್ನಟ್ಸ್ ಅನ್ನು ಪ್ರತಿದಿನ ತಿನ್ನುವುದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ- Creams During Pregnancy: ಗರ್ಭಾವಸ್ಥೆಯಲ್ಲಿ ಮಹಿಳೆಯರು ಈ ಕ್ರೀಮ್‌ಗಳನ್ನು ಬಳಸಲೇಬಾರದು

ಗೋಡಂಬಿ- ಗೋಡಂಬಿ ಅನ್ನು ತೂಕ ಕಡಿಮೆ (Weight Loss) ಮಾಡಲು ತುಂಬಾ ಅನುಕೂಲಕರ ಎಂದು ಪರಿಗಣಿಸಲಾಗುತ್ತದೆ. ಆದರೆ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಗೋಡಂಬಿಯಲ್ಲಿ ಪ್ರೊಟೀನ್ ಪ್ರಮಾಣ ಅತಿ ಹೆಚ್ಚು.

ಕಡಲೇಕಾಯಿ- ಬಡವರ ಬಾದಾಮಿ ಎಂದೇ ಹೆಸರುವಾಸಿಯಾಗಿರುವ ಕಡಲೇಕಾಯಿಯಲ್ಲಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಮತ್ತು ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳಿವೆ, ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಶೇಂಗಾ ತಿನ್ನುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ತೂಕ ಇಳಿಕೆಗೂ ಸಹಕಾರಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News