Benefits of Pomegranate: ಮಹಿಳೆಯರಿಗೆ 40 ವರ್ಷ ದಾಟಿದ ಬಳಿಕ ಅವರ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಅದರ ಪರಿಣಾಮವು ಮುಖದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತವೆ. ಈ ಸಮಯದಲ್ಲಿ, ದೇಹವು ರಕ್ತದ ಕೊರತೆ ಮತ್ತು ಚರ್ಮದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರೂ ಆರೋಗ್ಯಕರ ಆಹಾರವನ್ನು ಸೇವಿಸಲು ಸಲಹೆ ನೀಡುತ್ತಾರೆ. ಇದರಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಇನ್ನು ಮಧ್ಯವಯಸ್ಸಿನ ಮಹಿಳೆಯರು ಪ್ರತಿದಿನ ದಾಳಿಂಬೆಯನ್ನು ಸೇವಿಸಿದರೆ ನೀವು ಊಹಿಸಿರದಷ್ಟು ಪ್ರಯೋಜನ ಸಿಗುತ್ತದೆ. ಈ ಹಣ್ಣು ಆರೋಗ್ಯವನ್ನು ಉತ್ತಮವಾಗಿಡುತ್ತದೆ ಎಂದು ಅನೇಕ ಆರೋಗ್ಯ ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: Amla Benefits: ಚಳಿಗಾಲದಲ್ಲಿ ಪ್ರತಿದಿನ 1 ಬೆಟ್ಟದ ನೆಲ್ಲಿಕಾಯಿ ತಿನ್ನಿ, ಈ 5 ರೋಗಗಳು ದೂರವಾಗುತ್ತವೆ
ದಾಳಿಂಬೆಯಲ್ಲಿ ಕಂಡುಬರುವ ಪೋಷಕಾಂಶಗಳು
ದಾಳಿಂಬೆಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ಇದರಲ್ಲಿ ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಕೆ, ಆಂಟಿ-ಆಕ್ಸಿಡೆಂಟ್ ಅಂಶಗಳ ಗುಣಲಕ್ಷಣಗಳಿವೆ. ಇದು ವೃದ್ಧಾಪ್ಯದಲ್ಲಿ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ. ದಾಳಿಂಬೆ ಬೀಜಗಳು ದೇಹಕ್ಕೆ ಪ್ರಯೋಜನಕಾರಿಯಾದ ಪಾಲಿಫಿನಾಲ್ಗಳನ್ನು ನೀಡುತ್ತದೆ.
ಮಹಿಳೆಯರಿಗೆ ದಾಳಿಂಬೆಯ ಪ್ರಯೋಜನಗಳು
1. ಕೂದಲು ಬೆಳವಣಿಗೆ
ವೃದ್ಧಾಪ್ಯವು ನಿಮ್ಮ ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ದಾಳಿಂಬೆಯ ದೈನಂದಿನ ಸೇವನೆಯು ನಿಮ್ಮ ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರೊಂದಿಗೆ ನೆತ್ತಿಯು ಬಲಗೊಳ್ಳುತ್ತದೆ ಮತ್ತು ಕೂದಲು ಅದ್ಭುತವಾದ ಹೊಳಪನ್ನು ಪಡೆಯುತ್ತದೆ.
2. ಆರೋಗ್ಯಕರ ಚರ್ಮ
ವಯಸ್ಸು ಹೆಚ್ಚುತ್ತಿರುವ ಪರಿಣಾಮ ನಮ್ಮ ತ್ವಚೆಯ ಮೇಲೆ ತುಂಬಾ ಬೀರುತ್ತದೆ. ಇದನ್ನು ತಿಂದ ನಂತರ ಮುಖ ಮೊದಲಿಗಿಂತ ಭಿನ್ನವಾಗಿ ಕಾಣತೊಡಗುತ್ತದೆ. ದಾಳಿಂಬೆಯು ತ್ವಚೆಯ ತೇವಾಂಶವನ್ನು ಕಾಪಾಡಿಕೊಳ್ಳಲು, ಹೊಳಪನ್ನು ಕಾಪಾಡಿಕೊಳ್ಳಲು ಮತ್ತು ಮುಖದ ಮೇಲಿನ ಕಲೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಈ ಹಣ್ಣನ್ನು ಪ್ರತಿದಿನ ಸೇವಿಸಿದರೆ ಉತ್ತಮ.
3. ಸ್ನಾಯು ಚೇತರಿಕೆ
ವೃದ್ಧಾಪ್ಯದಲ್ಲಿ ನೀವು ಕೆಲವು ಭಾರವಾದ ಕೆಲಸವನ್ನು ಮಾಡಿದಾಗ ಸ್ನಾಯುಗಳು ಒತ್ತಡಕ್ಕೆ ಒಳಗಾಗುತ್ತವೆ. ಆಗ ಹೆಚ್ಚು ನೋವುಂಟಾಗಬಹುದು. ನಂತರ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನೀವು ಪ್ರತಿದಿನ ಒಂದು ದಾಳಿಂಬೆಯನ್ನು ಸೇವಿಸಿದರೆ, ಸ್ನಾಯುಗಳ ಚೇತರಿಕೆ ತ್ವರಿತವಾಗಿ ಮತ್ತು ನೋವು ತ್ವರಿತವಾಗಿ ಗುಣವಾಗುತ್ತದೆ.
ಇದನ್ನೂ ಓದಿ:Milk and Ghee: ಚಳಿಗಾಲದಲ್ಲಿ ಬಿಸಿ ಹಾಲಿಗೆ ತುಪ್ಪ ಬೆರೆಸಿ ಕುಡಿದರೆ ಎಲ್ಲಾ ಸಲೀಸು
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.