Healthy Morning Drinks: ಸದಾ ಫಿಟ್ ಆಗಿರಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಡ್ರಿಂಕ್ಸ್ ಕುಡಿಯಿರಿ

Empty Somach Drinks:  ನೀವು ಆರೋಗ್ಯಕರ ಆಹಾರ ಅಥವಾ ಪಾನೀಯಗಳೊಂದಿಗೆ ದಿನವನ್ನು ಪ್ರಾರಂಭಿಸಿದರೆ, ನೀವು ಯಾವಾಗಲೂ ಆರೋಗ್ಯವಾಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಯಾವ ಜ್ಯೂಸ್ ಸೇವಿಸುವುದು ಒಳ್ಳೆಯದು. 

Written by - Yashaswini V | Last Updated : Jun 6, 2022, 05:37 PM IST
  • ಮುಂಜಾನೆ ಆಹಾರವು ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ
  • ನಮ್ಮ ದೇಹವು ಮುಂಜಾನೆ ಆಹಾರದಲ್ಲಿ ಸಿಗುವ ಪೋಷಕಾಂಶಗಳನ್ನೂ ಸುಲಭವಾಗಿ ಹೀರಿಕೊಳ್ಳುತ್ತದೆ.
  • ಹಾಗಾಗಿಯೇ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆರೋಗ್ಯಕರವಾದದ್ದನ್ನು ತಿನ್ನುವುದು ಮುಖ್ಯ ಎನ್ನುತ್ತಾರೆ ವೈದ್ಯರು
Healthy Morning Drinks: ಸದಾ ಫಿಟ್ ಆಗಿರಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಡ್ರಿಂಕ್ಸ್ ಕುಡಿಯಿರಿ title=
Morning Drinks To Stay Fit

ಫಿಟ್ ಆಗಿರಲು ಮುಂಜಾನೆ ಡ್ರಿಂಕ್ಸ್: ಆರೋಗ್ಯವೇ ಭಾಗ್ಯ, ಆರೋಗ್ಯವಾಗಿರಲು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಬಹಳ ಮುಖ್ಯ. ನೀವು ನಿಮ್ಮ ದಿನವನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸಿದರೆ ಇಡೀ ದಿನ ಸಕಾರಾತ್ಮಕತೆಯನ್ನು ಅನುಭವಿಸುತ್ತೀರಿ. ಅದೇ ರೀತಿ ನೀವು  ಆರೋಗ್ಯಕರ ಆಹಾರ ಅಥವಾ ಪಾನೀಯಗಳೊಂದಿಗೆ ದಿನವನ್ನು ಪ್ರಾರಂಭಿಸಿದರೆ, ನೀವು ಯಾವಾಗಲೂ ಆರೋಗ್ಯವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ? 

ವಾಸ್ತವವಾಗಿ, ಮುಂಜಾನೆ ಆಹಾರವು ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನಮ್ಮ ದೇಹವು ಮುಂಜಾನೆ ಆಹಾರದಲ್ಲಿ ಸಿಗುವ ಪೋಷಕಾಂಶಗಳನ್ನೂ ಸುಲಭವಾಗಿ ಹೀರಿಕೊಳ್ಳುತ್ತದೆ. ಹಾಗಾಗಿಯೇ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆರೋಗ್ಯಕರವಾದದ್ದನ್ನು ತಿನ್ನುವುದು ಮುಖ್ಯ ಎನ್ನುತ್ತಾರೆ ವೈದ್ಯರು. ನೀವು ಸದಾ ಆರೋಗ್ಯಕರವಾಗಿ, ಫಿಟ್ ಆಗಿರಲು ಬಯಸಿದರೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕೆಲವು ಪಾನೀಯಗಳನ್ನು ಸೇವಿಸುವುದು ನಿಮಗೆ ಪ್ರಯೋಜನಕಾರಿ ಆಗಿದೆ. ಆ ಪಾನೀಯಗಳು ಯಾವುವು ಎಂದು ತಿಳಿಯೋಣ...

ಇದನ್ನೂ ಓದಿ- Weight Loss Tips: ಈ ನಾಲ್ಕು ವಸ್ತುಗಳನ್ನು ಸೇವಿಸಿದರೆ ಕರಗುತ್ತದೆ ಹೊಟ್ಟೆಯ ಕೊಬ್ಬು.. !

ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಈ ಪಾನೀಯಗಳನ್ನು ಕುಡಿಯಿರಿ 
ಕೊತ್ತಂಬರಿ ನೀರು -

ಕೊತ್ತಂಬರಿ ನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬೇಸಿಗೆಯಲ್ಲಿ ಕೊತ್ತಂಬರಿ ಸೊಪ್ಪಿನ ನೀರು ಕುಡಿಯುವುದರಿಂದ ದೇಹ ತಂಪಾಗುತ್ತದೆ. ಹೊಟ್ಟೆ ಉರಿ ಶಮನವಾಗುತ್ತದೆ.ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್, ಮಿನರಲ್ಸ್ ಹೇರಳವಾಗಿದೆ. ಆದ್ದರಿಂದ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ನೀರನ್ನು ಕುಡಿಯುವುದರಿಂದ, ದೇಹವು ಅದರಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಇದಕ್ಕಾಗಿ ನೀವು 2 ಚಮಚ ಕೊತ್ತಂಬರಿ ಬೀಜಗಳನ್ನು ತೆಗೆದುಕೊಳ್ಳಿ. ಇದನ್ನು 2 ಗ್ಲಾಸ್ ನೀರಿನಲ್ಲಿ ಕುದಿಸಿ ಮತ್ತು ಫಿಲ್ಟರ್ ಮಾಡಿ. ಬಳಿಕ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. 

ನಿಂಬೆ ಪಾನಕ-
ಹೆಚ್ಚಿನ ಜನರು ತೂಕ ಇಳಿಸಿಕೊಳ್ಳಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಪಾನಕವನ್ನು ಅಂದರೆ ಲೆಮನ್ ವಾಟರ್ ಕುಡಿಯುತ್ತಾರೆ. ನಿಮ್ಮ ಬೆಳಗಿನ ಪಾನೀಯದ ಆಹಾರದಲ್ಲಿ ನೀವು ಇದನ್ನು ಸೇರಿಸಿಕೊಳ್ಳಬಹುದು. ಖಾಲಿ ಹೊಟ್ಟೆಯಲ್ಲಿ ನಿಂಬೆ ರಸವನ್ನು ಕುಡಿಯುವುದರಿಂದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಇದಕ್ಕಾಗಿ ನೀವು ಉಗುರುಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಸೇವಿಸುವುದು ಹೆಚ್ಚು ಪ್ರಯೋಜನಕಾರಿ.

ಇದನ್ನೂ ಓದಿ- White Hair Treatment: ಬಿಳಿ ಕೂದಲನ್ನು ಕಪ್ಪಾಗಿಸಲು ಹುಣಸೇಹಣ್ಣನ್ನು ಈ ರೀತಿ ಬಳಸಿ

ಹಣ್ಣಿನ ರಸ-
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣಿನ ರಸವನ್ನು ಕುಡಿಯುವುದು ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಇದರಿಂದ ದೇಹವು ಹಣ್ಣುಗಳಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಿತ್ತಳೆ, ದಾಳಿಂಬೆ, ಸೇಬು ಇತ್ಯಾದಿ ಹಣ್ಣುಗಳ ಜ್ಯೂಸ್ ಕುಡಿಯಬಹುದು. ಆದರೆ ಈ ಜ್ಯೂಸ್‌ನಲ್ಲಿ ಹಾಲು ಇಲ್ಲವೇ ಸಕ್ಕರೆಯನ್ನು ಬೆರೆಸಬಾರದು ಎಂಬುದನ್ನು ನೆನಪಿನಲ್ಲಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣಿನ ರಸವನ್ನು ಕುಡಿಯುವುದರಿಂದ ದೇಹವು ನಿರ್ವಿಶೀಕರಣಗೊಳ್ಳುತ್ತದೆ. ಅದೇ ಸಮಯದಲ್ಲಿ, ತೂಕವು ಸಹ ನಿಯಂತ್ರಣದಲ್ಲಿರುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News