ಪುಣೆ: ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡಿದಾಗ ಅದು ಖಂಡಿತ ಫಲ ನೀಡೇ ನೀಡುತ್ತದೆ ಎಂದು ಹಿರಿಯರು ಹೇಳುತ್ತಾರೆ. ಕನಸಿಗೆ ವಯಸ್ಸಿನ ಮಿತಿಯಿಲ್ಲ. ಯಾವುದೇ ಕನಸು ವಯಸ್ಸನ್ನು ನೋಡುವುದಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಪುಣೆಯ ಹಝಿಕ್ ಕಾಜಿ.
ದೇಶ ಮತ್ತು ವಿಶ್ವದ ಏರುತ್ತಿರುವ ಮಾಲಿನ್ಯದ ನಡುವೆ, 12 ವರ್ಷದ ಹಝಿಕ್ ಕಾಜಿ ಸಮುದ್ರದಲ್ಲಿ ಮಾಲಿನ್ಯ-ಕಡಿಮೆ ಮಾಡುವ ಹಡಗು ವಿನ್ಯಾಸಗೊಳಿಸಿದ್ದಾರೆ. ಕಾಜಿ ಈ ಹಡಗಿದೆ ERVIS ಎಂದು ಹೆಸರಿಟ್ಟಿದ್ದಾರೆ.
ಸುದ್ದಿ ಸಂಸ್ಥೆ ANI ನೊಂದಿಗೆ ಈ ಬಗ್ಗೆ ಮಾತನಾಡಿದ ಅವರು, "ನಾನು ಕೆಲವು ಸಾಕ್ಷ್ಯಚಿತ್ರವನ್ನು ನೋಡಿದೆ ಮತ್ತು ಸಮುದ್ರ ಜೀವನದ ಮೇಲೆ ತ್ಯಾಜ್ಯದ ಪರಿಣಾಮವು ಬೀರಿದೆ. ಅದನ್ನು ಸರಿಪಡಿಸಲು ನಾನು ಏನಾದರೂ ಮಾಡಬೇಕೆಂದು ಭಾವಿಸಿದೆ" ಎಂದು ಹೇಳಿದರು.
12-year-old Pune-based boy Haaziq Kazi designs ship called ERVIS to help reduce pollution in the ocean and save marine life
Read @ANI Story | https://t.co/203IiInn3m pic.twitter.com/k7f5yC14s6
— ANI Digital (@ani_digital) January 23, 2019
"ನಾವು ಆಹಾರವಾಗಿ ಸೇವಿಸುವ ಮೀನುಗಳು ಸಮುದ್ರದಲ್ಲಿ ಪ್ಲಾಸ್ಟಿಕ್ ಅನ್ನು ತಿನ್ನುತ್ತವೆ. ಅಂದರೆ, ಮಾಲಿನ್ಯದ ಚಕ್ರವು ನಮಗೆ ಮತ್ತೆ ಬರುತ್ತದೆ ಮತ್ತು ಪರಿಣಾಮವು ಜೀವನದ ಮೇಲೆ ಪರಿಣಾಮ ಬೀರುತ್ತದೆ." ಅದಕ್ಕಾಗಿ ERVIS ಎಂಬ ಹೊಸ ಹಡಗನ್ನು ವಿನ್ಯಾಸಗೊಳಿಸಲಾಗಿದೆ. ERVIS ಸಾಗರದಲ್ಲಿ ತ್ಯಾಜ್ಯವನ್ನು ಹೀರಿಕೊಳ್ಳಲು ಕೇಂದ್ರಾಭಿಮುಖದ ಶಕ್ತಿಯನ್ನು ಬಳಸುತ್ತದೆ. ಅದರ ನಂತರ ನೀರು ಮತ್ತು ತ್ಯಾಜ್ಯವನ್ನು ಪ್ರತ್ಯೇಕಿಸಲಾಗುತ್ತದೆ. ಸಾಗರ ಜೀವಿಗಳು ಮತ್ತು ನೀರನ್ನು ಸಮುದ್ರಕ್ಕೆ ಮರಳಿ ಕಳುಹಿಸಲಾಗುತ್ತದೆ, ಆದರೆ ತ್ಯಾಜ್ಯವನ್ನು ಐದು ಭಾಗಗಳಾಗಿ ವಿಭಜಿಸಲಾಗುತ್ತದೆ ಎಂದು ಕಾಜಿ ಹೇಳಿದರು.