ಮೇದಕ್ : ತೆಲಂಗಾಣದ ಮೇದಕ್ ಪಟ್ಟಣದ ಬುಡಕಟ್ಟು ಕಲ್ಯಾಣ ವಸತಿ ಶಾಲೆಯಲ್ಲಿ ನೀರು ಉಳಿಸುವ ಸಲುವಾಗಿ ಶಾಲಾ ಆಡಳಿತವು 180 ಬಾಲಕಿಯರಿಗೆ ಕ್ಷೌರ ಮಾಡಿಸಲು ಆದೇಶ ನೀಡಿದ ಘಟನೆ ನಡೆದಿದೆ.
ಶಾಲೆಯಲ್ಲಿ ಓದುತ್ತಿರುವ ಬಾಲಕಿಯರು ಪ್ರಾಂಶುಪಾಲರ ಆದೇಶದ ಮೇರೆಗೆ ಕ್ಷೌರ ಮಾಡಿಸಲಾಗಿದೆ ಎಂದು ಆರೋಪಿಸಿದರು, ಅವರ ನಿರ್ಧಾರದ ಹಿಂದೆ ಶಾಲಾ ಹಾಸ್ಟೆಲ್‌ನಲ್ಲಿ ನೀರಿನ ಕೊರತೆಯನ್ನು ಅವರು ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
'ನನ್ನ ಕೂದಲನ್ನು ಕತ್ತರಿಸಲು ನನಗೆ ಇಷ್ಟವಿರಲಿಲ್ಲ, ಆದರೆ ಪ್ರಾಂಶುಪಾಲರು ನಮಗೆ ಆದೇಶಿಸಿದ್ದರಿಂದಾಗಿ ನಮಗೆ ಬೇರೆ ಯಾವುದೇ ಆಯ್ಕೆಗಳಿರಲ್ಲ. ಕ್ಷೌರ ಮಾಡಿಸುವ ಬಗ್ಗೆಯೂ ನಮ್ಮ ಪೋಷಕರಿಗೆ ಮಾಹಿತಿ ನೀಡಿಲ್ಲ" ಎಂದು 6 ನೇ ತರಗತಿ ವಿದ್ಯಾರ್ಥಿನಿ ಅಖಿಲಾ ಹೇಳಿದರು. ಇದೇ ವೇಳೆ ಶಾಲೆಯ ಇತರ ವಿದ್ಯಾರ್ಥಿಗಳೂ ಸಹ ಅಖಿಲಾ ಅವರ ಮಾತಿಗೆ ಧನಿಗೂಡಿಸಿದರು. ಅವರಲ್ಲಿ ಕೆಲವು ವಿದ್ಯಾರ್ಥಿನಿಯರು ಕೂದಲನ್ನು ಕತ್ತರಿಸಿದ ಕಾರಣಕ್ಕಾಗಿ ಅವರ ಕುಟುಂಬ ಸದಸ್ಯರು ಶಿಕ್ಷೆ ನೀಡಿದ್ದಾರೆ ಎಂದು ವಿವರಿಸಿದರು.
"ನಾವು ಶಾಲೆಯಿಂದ ಕ್ಷೌರ ಮಾಡಿಸಿಕೊಂಡಿದ್ದೇವೆ ಎಂಬ ಅಂಶ ನನ್ನ ಪೋಷಕರಿಗೆ ತಿಳಿದಿರಲಿಲ್ಲ. ನನ್ನ ಕೂದಲು ಕತ್ತರಿಸಿದ್ದಕ್ಕಾಗಿ ನನ್ನ ಕುಟುಂಬ ಸದಸ್ಯರಿಂದ ನಾನು ಹೊಡೆಸಿಕೊಂಡಿದ್ದೇನೆ "ಎಂದು ಅಖಿಲಾ ಸಹಪಾಠಿ ನಂದಿನಿ ಹೇಳಿದರು.