ವಿದ್ಯುತ್ ತಂತಿ ತಗುಲಿ ಇಬ್ಬರು ಮಕ್ಕಳು ಸಾವು

ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಪಿಪ್ರ ಗ್ರಾಮದ ನಿವಾಸಿಗಳಾದ ರವಿ (12) ಮತ್ತು ಅಮನ್ (10) ಎಂಬ ಮಕ್ಕಳೇ ಮೃತಪಟ್ಟ ದುರ್ದೈವಿಗಳು.

Last Updated : May 17, 2019, 12:40 PM IST
ವಿದ್ಯುತ್ ತಂತಿ ತಗುಲಿ ಇಬ್ಬರು ಮಕ್ಕಳು ಸಾವು title=

ಮಹೋಬಾ: ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಪ್ರಾಣಿಗಳ ಪ್ರವೇಶವನ್ನು ತಡೆಗಟ್ಟಲು ಹಾಕಿದ್ದ ವಿದ್ಯುತ್ ತಂತಿ ಬೇಲಿ ತಗುಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಪಿಪ್ರ ಗ್ರಾಮದ ನಿವಾಸಿಗಳಾದ ರವಿ (12) ಮತ್ತು ಅಮನ್ (10) ಎಂಬ ಮಕ್ಕಳೇ ಮೃತಪಟ್ಟ ದುರ್ದೈವಿಗಳಾಗಿದ್ದು, ಇವರು ತಮ್ಮ ಕುಟುಂಬದೊಂದಿಗೆ ಪಲ್ಕಾ ಗ್ರಾಮಕ್ಕೆ ವಿವಾಹ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ವಿಪಿನ್ ತ್ರಿಪಾಠಿ ತಿಳಿಸಿದ್ದಾರೆ.

ಸ್ನಾನ ಮಾಡಿದ ಬಳಿಕ ಹತ್ತಿರದಲ್ಲಿದ್ದ ತೋಟದ ಸುತ್ತ ಅಳವಡಿಸಿದ್ದ ತಂತಿ ಬೇಲಿಯ ಮೇಲೆ ಒದ್ದೆ ಬಟ್ಟೆಗಳನ್ನು ಒಣಹಾಕಲು ಹೋದಾಗ ವಿದ್ಯುತ್ ಸಂಪರ್ಕಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
 
ಈ ಸಂಬಂಧ ತೋಟದ ಸುತ್ತ ವಿದ್ಯುತ್ ತಂತಿ ಅಳವಡಿಸಿದ್ದ ತೋಟದ ಮಾಲೀಕ ವಿನೋದ್ ನಾಮ್ದೇವ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
 

Trending News