Reliance Foundation: ರಿಲಯನ್ಸ್ ಫೌಂಡೇಶನ್ ನಿಂದ ಪದವಿ ವಿದ್ಯಾರ್ಥಿಗಳಿಗೆ ತಲಾ 2 ಲಕ್ಷ ವಿದ್ಯಾರ್ಥಿವೇತನ

Reliance Foundation Scholarships: 27 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳ ಐದು ಸಾವಿರ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ 2022-23 ಸಾಲಿನ ರಿಲಯನ್ಸ್ ಫೌಂಡೇಶನ್ ಪದವಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ.

Written by - Zee Kannada News Desk | Last Updated : May 22, 2023, 06:19 PM IST
  • ಲಯನ್ಸ್ ಫೌಂಡೇಶನ್ 10 ವರ್ಷಗಳಲ್ಲಿ 50,000 ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ
  • 4,984 ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ 40,000 ವಿದ್ಯಾರ್ಥಿಗಳಿಂದ ಅರ್ಜಿ ಸ್ವೀಕಾರ
  • ಆಯ್ಕೆಯಾದ ಮೊದಲ ವರ್ಷದ ಪದವಿ ವಿದ್ಯಾರ್ಥಿಗಳು ರೂ.2 ಲಕ್ಷದ ವರೆಗಿನ ಅನುದಾನ
Reliance Foundation: ರಿಲಯನ್ಸ್ ಫೌಂಡೇಶನ್ ನಿಂದ ಪದವಿ ವಿದ್ಯಾರ್ಥಿಗಳಿಗೆ ತಲಾ 2 ಲಕ್ಷ ವಿದ್ಯಾರ್ಥಿವೇತನ  title=

ಮುಂಬೈ: 27 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳ ಐದು ಸಾವಿರ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ 2022-23 ಸಾಲಿನ ರಿಲಯನ್ಸ್ ಫೌಂಡೇಶನ್ ಪದವಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಆಯ್ಕೆಯಾದ ವಿದ್ಯಾರ್ಥಿಗಳಿ ರೂ.2 ಲಕ್ಷ  ವರೆಗೆ ಅನುದಾನವನ್ನು ಪಡೆಯುತ್ತಾರೆ ಮತ್ತು ಈಗಾಲೇ ಸಕ್ರಿಯವಾಗಿರುವ ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕ್‌ನ ಭಾಗವಾಗುವ ಅವಕಾಶವನ್ನು ಪಡೆಯಲಿದ್ದಾರೆ. 

ಈ ಕುರಿತು ಮಾತನಾಡಿರುವ  ರಿಲಯನ್ಸ್ ಫೌಂಡೇಶನ್ ಸಿಇಒ ಶ್ರೀ ಜಗನ್ನಾಥ ಕುಮಾರ್, “ಉತ್ತಮ ಶಿಕ್ಷಣವನ್ನು ಪಡೆಯುವ  ಯುವ ಜನರ ಕನಸಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನವು ರೆಕ್ಕೆಗಳನ್ನು ನೀಡಲಿದೆ ಎಂದು ಆಶಿಸುತ್ತವೆ. ಇದು ವೈವಿಧ್ಯಮಯ ವಿದ್ಯಾರ್ಥಿಗಳ ಗುಂಪು, ಏಕೆಂದರೆ ವಿವಿಧ ಅಧ್ಯಯನ ವಿಭಾಗಗಳಿಂದ, ಭಾರತದ ಬಹುತೇಕ ಎಲ್ಲಾ ರಾಜ್ಯಗಳಿಂದ ಆಯ್ಕೆಯಾಗಿದ್ದಾರೆ.  ಭಾರತದ ಪ್ರಗತಿಗೆ ಕೊಡುಗೆ ನೀಡುವುದರೊಂದಿಗೆ ಅವರು ತಮಗಾಗಿ ಬಲವಾದ ಭವಿಷ್ಯವನ್ನು ನಿರ್ಮಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ” ಎಂದಿದ್ದಾರೆ. 

ಇದನ್ನೂ ಓದಿ: Manipur Clash: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಎರಡು ಸಮುದಾಯಗಳ ಮಧ್ಯೆ ಭಾರಿ ಘರ್ಷಣೆ

ರಿಲಯನ್ಸ್ ಫೌಂಡೇಶನ್ ಪದವಿ ವಿದ್ಯಾರ್ಥಿವೇತನವನ್ನು ಯಾವುದೇ ಅಧ್ಯಯನದ ಸ್ಟ್ರೀಮ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಮೆರಿಟ್-ಕಮ್-ಮೀನ್ಸ್ ಆಧಾರದ ಮೇಲೆ ನೀಡಲಾಗುತ್ತದೆ. ಈ ವರ್ಷಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಎಂಜಿನಿಯರಿಂಗ್/ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ, ವಾಣಿಜ್ಯ, ಕಲೆ, ವ್ಯಾಪಾರ/ನಿರ್ವಹಣೆ, ಕಂಪ್ಯೂಟರ್ ಅಪ್ಲಿಕೇಶನ್‌ಗಳು, ಕಾನೂನು, ಶಿಕ್ಷಣ, ಆತಿಥ್ಯ, ವಾಸ್ತುಶಿಲ್ಪ ಮತ್ತು ಇತರ ವೃತ್ತಿಪರ ಪದವಿಧಾರಿಗೆ ನೀಡಲಾಗಿದೆ.

2022-23ನೇ ಸಾಲಿನಲ್ಲಿ 4,984 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 40,000 ವಿದ್ಯಾರ್ಥಿಗಳ ಅರ್ಜಿಗಳಲ್ಲಿ ಕಠಿಣ ಆಯ್ಕೆ ಪ್ರಕ್ರಿಯೆಯ ಮೂಲಕ 5,000 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 51% ಹುಡುಗಿಯರೇ ಇರುವುದು ವಿಶೇಷ. 

ಈ ಆಯ್ಕೆ ಪ್ರಕ್ರಿಯೆಯಲ್ಲಿ ಸಾಮರ್ಥ್ಯ ಪರೀಕ್ಷೆ, 12 ನೇ ತರಗತಿ ಅಂಕಗಳು ಮತ್ತು ಇತರ ಅರ್ಹತಾ ಮಾನದಂಡಗಳು ಒಳಗೊಂಡಿದೆ. ಕಾರ್ಯಕ್ರಮಕ್ಕೆ ಅಂತರ್ಗತವಾಗಿರುವ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಈ ಸುತ್ತಿನಲ್ಲಿ 99 ವಿಕಲಚೇತನ ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನಕ್ಕಾಗಿ ಆಯ್ಕೆ ಮಾಡಲಾಗಿದೆ. 

ಇದನ್ನೂ ಓದಿ: Jaish e Mohammed ಉಗ್ರ ಸಂಘಟನೆಗೆ ಸೇರಿದ ಕುಖ್ಯಾತ ಭಯೋತ್ಪಾದಕನ ಬಂಧನ, ದೊಡ್ಡ ದಾಳಿಯ ಸಂಚು ವಿಫಲ

ಕಳೆದ ಡಿಸೆಂಬರ್‌ನಲ್ಲಿ ತನ್ನ ಬದ್ಧತೆಯನ್ನು ಬಲಪಡಿಸುವ ಮೂಲಕ ರಿಲಯನ್ಸ್ ಫೌಂಡೇಶನ್ ಮುಂದಿನ 10 ವರ್ಷಗಳಲ್ಲಿ 50,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವುದಾಗಿ ಘೋಷಿಸಿತ್ತು. ಈ ಸ್ಕಾಲರ್‌ಶಿಪ್‌ ಎಲ್ಲರಿಗೂ ಶಿಕ್ಷಣದ ಪ್ರವೇಶವನ್ನು ಸುಲಭಗೊಳಿಸುವ ಮತ್ತು ಭಾರತದ ಭವಿಷ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೋಷಿಸುವ ರಿಲಯನ್ಸ್‌ನ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. 1996 ರಿಂದ ಧೀರೂಭಾಯಿ ಅಂಬಾನಿ ವಿದ್ಯಾರ್ಥಿವೇತನವನ್ನು ಮೆರಿಟ್-ಕಮ್-ಮೀನ್ಸ್ ಆಧಾರದ ಮೇಲೆ ಸುಮಾರು 13,000 ಪದವಿ ವಿದ್ಯಾರ್ಥಿಗಳಿಗೆ ನೀಡಲಾಗಿದೆ, ಅದರಲ್ಲಿ 2,720 ವಿದ್ಯಾರ್ಥಿಗಳು ವಿಕಲಚೇತನರು.

ಆಯ್ದ ವಿದ್ಯಾರ್ಥಿಗಳು ತಮ್ಮ ಆಯ್ಕೆ ಮತ್ತು ಹೆಚ್ಚಿನ ವಿವರಗಳ ಬಗ್ಗೆ ನೇರವಾಗಿ ಸಂವಹನವನ್ನು ಸ್ವೀಕರಿಸುತ್ತಾರೆ. ಅರ್ಜಿದಾರರು ತಮ್ಮ ಅರ್ಜಿಗಳ ಫಲಿತಾಂಶವನ್ನು ತಿಳಿಯಲು www.reliancefoundation.org ಗೆ ಭೇಟಿ ನೀಡಬಹುದು.

2022-23ಕ್ಕೆ ಆಯ್ಕೆಯಾದ ರಿಲಯನ್ಸ್ ಫೌಂಡೇಶನ್ ಸ್ನಾಕಕ್ಕೋತ್ತರ ವಿದ್ಯಾರ್ಥಿವೇತನ ಪ್ರಕಟಣೆಯನ್ನು ಜುಲೈನಲ್ಲಿ ಹೊರಬರಲಿದೆ. ರಿಲಯನ್ಸ್ ಫೌಂಡೇಶನ್ ಪದವಿ ವಿದ್ಯಾರ್ಥಿವೇತನದ (2023-24) ಮುಂದಿನ ಸುತ್ತಿನ ಅರ್ಜಿಗಳನ್ನು ಮುಂಬರುವ ತಿಂಗಳುಗಳಲ್ಲಿ ನೀಡಲಾಗುವುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News