ವಯನಾಡ್ (ಕೇರಳ ) : ಭಾರತದಲ್ಲಿ ಕೊರೊನಾವೈರಸ್ (Coronavirus) ಭೀತಿ ಇನ್ನು ಕಡಿಮೆಯಾಗಿಲ್ಲ. ಈ ನಡುವೆಯೇ, ಜ್ವರಕ್ಕೆ ಸಂಬಂಧಿಸಿದ ಹೊಸ ರೋಗವೊಂದು ಕೇರಳದಲ್ಲಿ ಕಾಣಿಸಿಕೊಂಡಿದೆ. ಕೇರಳದ ವಯನಾಡು ಜಿಲ್ಲೆಯಲ್ಲಿ ಕೋತಿ ಜ್ವರದ (Monkey Fever) ಪ್ರಕರಣ ಬೆಳಕಿಗೆ ಬಂದಿದೆ. ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.
24 ವರ್ಷದ ವ್ಯಕ್ತಿಗೆ ಕೋತಿ ಜ್ವರ :
ಕೇರಳದ (Kerala) ವಯನಾಡ್ ಜಿಲ್ಲೆಯ (Wayanad District) ತಿರುನೆಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪನ್ವೇಲಿ ಬುಡಕಟ್ಟು ವಸಾಹತು ಪ್ರದೇಶದಲ್ಲಿ 24 ವರ್ಷದ ವ್ಯಕ್ತಿಯೊಬ್ಬರು ಕ್ಯಾಸನೂರು ಫಾರೆಸ್ಟ್ ಡಿಸೀಸ್ ನಿಂದ (KFD) ಬಳಲುತ್ತಿದ್ದಾರೆ. ಇದನ್ನು ಆಡು ಭಾಷೆಯಲ್ಲಿ ಕೋತಿ ಜ್ವರ (Monkey Fever) ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ : ನಿರುದ್ಯೋಗ, ಸಾಲದ ಸಮಸ್ಯೆ: 2018-20ರಲ್ಲಿ ಎಷ್ಟು ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗೊತ್ತಾ..?
ಸೀಸನಲ್ ಫೀವರ್ ಎಚ್ಚರಿಕೆ :
ಈ ಬಗ್ಗೆ ಮಾತನಾಡಿದ ಜಿಲ್ಲಾ ವೈದ್ಯಾಧಿಕಾರಿ ಡಾ.ಸಕೀನಾ, ಸೀಸನಲ್ ಫೀವರ್ (Seasonal Fever) ಬಗ್ಗೆ ಆರೋಗ್ಯಾಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಜನರು ಜಾಗರೂಕರಾಗಿರುವಂತೆ ಕರೆ ನೀಡಿದ್ದಾರೆ.
ಮಂಗನ ಜ್ವರದಿಂದ ಬಳಲುತ್ತಿರುವ ಯುವಕನ ಸ್ಥಿತಿ ಹೇಗಿದೆ ?
ಮಂಗನ ಜ್ವರದಿಂದ (Monkey Fever) ಬಳಲುತ್ತಿರುವ ಯುವಕನನ್ನು ಮಾನಂತವಾಡಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಆ ವ್ಯಕ್ತಿಯ ಸ್ಥಿತಿ ಸ್ಥಿರವಾಗಿದೆ ಎಂದು ಡಾ.ಸಕೀನಾ ತಿಳಿಸಿದ್ದಾರೆ. ಅಲ್ಲದೆ, ಇದರ ಹೊರತಾಗಿ ಜಿಲ್ಲೆಯಲ್ಲಿ ಮಂಗನ ಜ್ವರಕ್ಕೆ ಸಂಬಂಧಿಸಿದಂತೆ ಬೇರೆ ಪ್ರಕರಣಗಳು ವರದಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ವಂಶದ ರಾಜಕಾರಣ ಪ್ರಜಾಪ್ರಭುತ್ವದ ದೊಡ್ಡ ಶತ್ರು-ಪ್ರಧಾನಿ ಮೋದಿ
ಈ ವರ್ಷ ಕೇರಳದಲ್ಲಿ ಮೊದಲ ಪ್ರಕರಣ :
ಈ ವರ್ಷ ಕೇರಳದಲ್ಲಿ ಮಂಗನ ಜ್ವರದ ಮೊದಲ ಪ್ರಕರಣ ಇದಾಗಿದೆ. ಈ ರೋಗದ ವೈರಸ್ Flaviviridae Virus ಕುಟುಂಬಕ್ಕೆ ಸೇರಿದೆ. ಈ ರೋಗವು ಮಂಗಗಳಿಂದ ಮನುಷ್ಯರಿಗೆ ಹರಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.