ನವದೆಹಲಿ: ವಂದೇ ಭಾರತ್ ಎಕ್ಸ್ ಪ್ರೆಸ್ (Vande Bharat Express) ರೈಲುಗಳ ಬಗ್ಗೆ ಭಾರತೀಯ ರೈಲ್ವೆ (Indian Railway)ಯಿಂದ ಒಂದು ಒಳ್ಳೆಯ ಸುದ್ದಿ ಪ್ರಕಟಗೊಂಡಿದೆ. ಪ್ರಯಾಣವನ್ನು ಹೆಚ್ಚು ಆರಾಮದಾಯಕ ಮತ್ತು ಸುಗಮವಾಗಿಸುವ ಸಲುವಾಗಿ, ವಂದೇ ಭಾರತ್ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವ ಕೆಲಸವನ್ನು ವೇಗಗೊಳಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. 2022 ರ ವೇಳೆಗೆ 44 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸಂಚಾರದಲ್ಲಿ ವಿಳಂಬವಾಗಲಿವೆ ಎಂಬ ಊಹಾಪೋಹಗಳ ನಡುವೆ, ರೈಲ್ವೆ ಮಂಗಳವಾರ ಈ ರೈಲುಗಳನ್ನು ನಿರ್ಮಾಣ ಕಾರ್ಯ ಇನ್ಮುಂದೆ ಒಂದಲ್ಲಿ ಒಟ್ಟು ಮೂರು ರೇಲ್ವೆ ಘಟಕಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದೆ.
ಅಷ್ಟೇ ಅಲ್ಲ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಈ ರೈಲುಗಳು ರೈಲು ಜಾಲವನ್ನು ಪ್ರವೇಶಿಸಲಿವೆ. ವಂದೇ ಭಾರತ್ ಎಕ್ಸ್ ಪ್ರೆಸ್ಸೇವೆಯನ್ನು ಕಳೆದ ವರ್ಷವೇ ಪ್ರಾರಂಭಿಸಲಾಗಿದೆ. ಪ್ರಸ್ತುತ, ಈ ಸೇವೆಯಡಿಯಲ್ಲಿ ದೆಹಲಿಯಿಂದ ವಾರಣಾಸಿ ಮತ್ತು ದೆಹಲಿಯಿಂದ ಕಟರಾಗೆ ರೈಲು ಓಡಿಸಲಾಗಿದೆ. ಈ ಸೇವೆಯನ್ನು ಇಡೀ ದೇಶಾದ್ಯಂತ ವಿಸ್ತರಿಸಲು ಭಾರತೀಯ ರೈಲ್ವೆ ಬಯಸಿದೆ.
ಈ ಕುರಿತು ಮಂಗಳವಾರ ಮಾಹಿತಿ ನೀಡಿರುವ ರೈಲ್ವೆ ಬೋರ್ಡ್ (Railway Board) ಅಧ್ಯಕ್ಷ ವಿ.ಕೆ ಯಾದವ್, ರೈಲುಗಳನ್ನು ಏಕಕಾಲಕ್ಕೆ ಮೂರು ರೈಲು ಘಟಕಗಳಾಗಿ ಅಂದರೆ, ಕಪುರ್ಥಲಾ ರೈಲ್ವೆ ಕೋಚ್ ಫ್ಯಾಕ್ಟರಿ, ರಾಯ್ಬರೇಲಿ ಆಧುನಿಕ ಕೋಚ್ ಫ್ಯಾಕ್ಟರಿ ಹಾಗೂ ಚೆನ್ನೈ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಗಳಾಗಿ ನಿರ್ಮಿಸಲಾಗುವುದು ಎಂದಿದ್ದಾರೆ.
"ಕೆಲ ರೈಲು ಉತ್ಪಾದನಾ ಘಟಕಗಳು ಈ ರೈಲುಗಳನ್ನು ನಿರ್ಮಿಸಲಿವೆ ಎಂದು ಈ ಹಿಂದೆಯೇ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಅವುಗಳ ನಿರ್ಮಾಣ ಕಾರ್ಯದಲ್ಲಿ ಬೇಕಾಗುವ ಸಯಾವಕಾಶ ಕಡಿಮೆಯಾಗಲಿದೆ. ಈ 44 ರೈಲುಗಳು ಮುಂದಿನ ಎರಡು-ಮೂರು ವರ್ಷಗಳಲ್ಲಿ ಚಲಿಸಲು ಆರಂಭಿಸಲಿವೆ. ಈ ಕುರಿತಾದ ಟೆಂಡರ್ ಗೆ ಅಂತಿಮ ರೂಪ ನೀಡಿದಾಗ ನಿಗದಿತ ಅವಧಿಯಲ್ಲಿ ಈ ರೈಲುಗಳು ಲಭ್ಯವಾಗಲಿವೆ." ಎಂದು ಯಾದವ್ ಹೇಳಿದ್ದಾರೆ.