ರಸ್ತೆ ಅಪಘಾತ: 5 ಸಾವು, ಓರ್ವನಿಗೆ ಗಾಯ

ಜಾತ್ರೆಯಿಂದ ಹಿಂದಿರುಗುತ್ತಿದ್ದ ಆರು ಮಂದಿಯಿದ್ದ ಕಾರು ಕೇಂದ್ರಪಾರಾ ಪಟ್ಟಣದ ಆನ್ಲಾಬಂಕ ಚೌಕದ ಬಳಿ ನಿಲ್ಲಿಸಿದ್ದ ಟ್ರಕ್ಕಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

Last Updated : Jan 7, 2019, 04:49 PM IST
ರಸ್ತೆ ಅಪಘಾತ: 5 ಸಾವು, ಓರ್ವನಿಗೆ ಗಾಯ title=
ಸಾಂದರ್ಭಿಕ ಚಿತ್ರ

ಕೇಂದ್ರಪಾರ: ಸರಕು ಸಾಗಣಾ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ತೀವ್ರವಾಗಿ ಗಾಯಗೊಂಡ ಘಟನೆ ಒಡಿಷಾದ ಕೇಂದ್ರಪಾರಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. 

ಜಾತ್ರೆಯಿಂದ ಹಿಂದಿರುಗುತ್ತಿದ್ದ ಆರು ಮಂದಿಯಿದ್ದ ಕಾರು ಕೇಂದ್ರಪಾರಾ ಪಟ್ಟಣದ ಆನ್ಲಾಬಂಕ ಚೌಕದ ಬಳಿ ನಿಲ್ಲಿಸಿದ್ದ ಟ್ರಕ್ಕಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾದ ಕಾರಣ ಗ್ಯಾಸ್ ಕಟರ್ ಬಳಸಿ ಮೃತದೇಹಗಳನ್ನು ಹೊರತೆಯಲಾಗಿದೆ ಎಂದು ಡೆರಾಬಿಶ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಧೀರ್ ಸಾಹು ತಿಳಿಸಿದ್ದಾರೆ. 

ಮೃತರಲ್ಲಿ ನಾಲ್ವರನ್ನು ರಾಜೇಶ್ ಜೆನಾ, ದೇಬಶೀಶ್ ಸೇಠಿ, ಹರೇಕೃಷ್ಣಾ ಸಾಹು ಮತ್ತು ದೀಪಕ್ ಧಲ್ ಎಂದು ಗುರುತಿಸಲಾಗಿದೆ. ಮತ್ತೊಂದು ಮೃತದೇಹವನ್ನು ಇನ್ನೂ ಗುರುತಿಸಲಾಗಿಲ್ಲ. ಅಪಘಾತದಲ್ಲಿ ಬದುಕುಳಿದು ತೀವ್ರ ಗಾಯಗೊಂಡ ವ್ಯಕ್ತಿಯನ್ನು ಕಟಕ್'ನಲ್ಲಿರುವ ಎಸ್ಸಿಬಿ ಮೆಡಿಕಲ್ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Trending News