ಶ್ರೀನಗರ: ಶನಿವಾರದಂದು ಭಾರತ ಗಡಿ ನಿಯಂತ್ರಣ ರೇಖೆಯೊಳಗೆ ನುಸಳಲು ಯತ್ನಿಸಿದ ಐವರು ಉಗ್ರರನ್ನು ಭಾರತೀಯ ಸೈನಿಕರು ಹತ್ಯೆಗೈದಿದ್ದಾರೆ.
ಈ ಘಟನೆಯು ಜಮ್ಮು ಮತ್ತು ಕಾಶ್ಮೀರದ ಟ್ಯಾಂಗ್ಧರ್ ಸೆಕ್ಟರ್ನಲ್ಲಿ ನಲ್ಲಿ ನಡೆದಿದೆ. ಇತ್ತೀಚಿಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪಾಕಿಸ್ತಾನಕ್ಕೆ ಗಾಡಿಯಲ್ಲಿ ಶಾಂತಿ ಕಾಪಾಡಲು ಕರೆ ನೀಡಿದ ನಂತರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
#UPDATE Another terrorist killed by security forces in Tangdhar sector of #JammuAndKashmir. Total five terrorists have been killed after security forces foiled an infiltration attempt today. Operation underway
— ANI (@ANI) May 26, 2018
"ನಾವು ಗಡಿಯಲ್ಲಿ ಶಾಂತಿ ಬಯಸುತ್ತೇವೆ ಆದರೆ ಪಾಕಿಸ್ತಾನ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತದೆ. ಇದರಿಂದಾಗಿ ಸಾಕಷ್ಟು ಜೀವಹಾನಿಯಾಗುತ್ತಿದೆ. ಆದ್ದರಿಂದ ನಾವು ಅಂತಹ ಸಂದರ್ಭದಲ್ಲಿ ಪ್ರತೀಕಾರ ತೋರಿಸಲೇಬೇಕು ಒಂದುವೇಳೆ ಪಾಕಿಸ್ತಾನ ಶಾಂತಿಯನ್ನು ಬಯಸಿದರೆ, ಅದಕ್ಕೆ ನಾವು ಕೂಡ ಅದನ್ನು ಮುಂದುವರೆಸಬಹುದು ಆದರೆ ಇಲ್ಲೆಲ್ಲವೂ ಸಹಿತ ಅವರು ಕದನ ವಿರಾಮ ಉಲ್ಲಂಘನೆಯನ್ನು ನಿಲ್ಲಿಸುವುದರ ಮೂಲಕ ಪ್ರಾರಂಭವಾಗುತ್ತದೆ" ಎಂದು ರಾವತ್ ತಿಳಿಸಿದ್ದರು.
ಕಳೆದ ವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ರಮ್ ಜಾನ್ ಸಂದರ್ಭದಲ್ಲಿ ಭಯೋತ್ಪಾದಕರ ವಿರುದ್ಧ ಭದ್ರತಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಕೇಂದ್ರ ಸರಕಾರ ಆದೇಶಿಸಿತ್ತು. ಒಂದುವೇಳೆ ಮುಗ್ಧ ಜನರ ಜೀವನಕ್ಕೆ ಹಾನಿ ಮಾಡಿದರೆ ಪ್ರತಿಕಾರ ತೀರಿಸಿಕೊಳ್ಳಲು ಹಿಂಜರಿಯುವುದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿತ್ತು.