ನವದೆಹಲಿ: 70ನೇ ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಧ್ವಜಾರೋಹಣ ನೆರವೇರಿಸಿದರು.
ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿರುವ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ, ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
PM Narendra Modi and President of South Africa Cyril Ramaphosa witness flypast at Republic Day parade in Delhi pic.twitter.com/xRmJDuSHT1
— ANI (@ANI) January 26, 2019
ಇದೇ ಸಂದರ್ಭದಲ್ಲಿ ಹುತಾತ್ಮ ಯೋಧ ಲ್ಯಾನ್ಸ್ ನಾಯಕ್ ನಾಜಿರ್ ಅಹ್ಮದ್ ವಾನಿ ಅವರಿಗೆ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿಯನ್ನು ರಾಷ್ಟ್ರಪತಿ ಸಮರ್ಪಿಸಿದರು. ವಾನಿ ಅವರ ಪತ್ನಿ ಮಹಾಜಬೀನ್ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು.
Delhi: Lance Naik Nazir Ahmed Wani, who lost his life while killing 6 terrorists in an operation in Kashmir, awarded the Ashok Chakra. Award was received by his wife and mother #RepublicDay2019 pic.twitter.com/3bjYdiwTLp
— ANI (@ANI) January 26, 2019
ಬಳಿಕ ಮಂಜು ಕವಿದ ವಾತಾವರಣದ ನಡುವೆಯೇ ಲೆಫ್ಟಿನೆಂಟ್ ಜನರಲ್ ಅಸಿತ್ ಮಿಸ್ತ್ರಿ ನೇತೃತ್ವದಲ್ಲಿ ರಾಜಪಥದಲ್ಲಿ ಪಥಸಂಚಲನ ಆರಂಭವಾಯಿತು. ವಿವಿಧ ಸೇನಾ ತುಕಡಿಗಳಿಂದ ಬಲ ಪ್ರದರ್ಶನ, ಪಥ ಸಂಚಲನದ ಮೂಲಕ ಸೇನಾ ಶಕ್ತಿ ಪ್ರದರ್ಶನ, ಸಿಆರ್ಪಿಎಫ್, ಕರಾವಳಿ ಮೀಸಲು ಪಡೆ, ರೈಲ್ವೆ ಭದ್ರತಾ ಪಡೆ, ವಿವಿಧ ರೆಜಿಮೆಂಟ್ಗಳಿಂದ ಪೆರೇಡ್, ನೌಕಾದಳ ಹಾಗೂ ವಾಯುಪಡೆಯ ಸ್ತಬ್ದಚಿತ್ರ ಪ್ರದರ್ಶನ, M777 American Ultra Light Howitzers ಗನ್ ಸಿಸ್ಟಂ, (MBT) T-90 ಬ್ಯಾಟಲ್ ಟ್ಯಾಂಕ್, ಭಾರತ ನಿರ್ಮಿತ Akash Weapon System ಮುಂತಾದ ಪ್ರಬಲ ಸೇನಾ ಅಸ್ತ್ರಗಳ ಕವಾಯತು ಗಣರಾಜ್ಯೋತ್ಸವ ಮೆರವಣಿಗೆಗೆ ರಂಗು ನೀಡಿದೆ.
#republicdayindia : Camel Mounted Band of BSF playing 'Hum Hai Seema Suraksha Bal', at Rajpath pic.twitter.com/u7gdMHcsMU
— ANI (@ANI) January 26, 2019