ಫೋನಿಯಲ್ಲಿ ಮನೆ ಕೊಚ್ಚಿ ಹೋದ ನಂತರ ಶೌಚಾಲಯದಲ್ಲಿ ವಾಸಿಸುತ್ತಿರುವ ಕುಟುಂಬ..!

ಫೋನಿ ಚಂಡಮಾರುತದಲ್ಲಿ ಮನೆ ಕೊಚ್ಚಿ ಹೋದ ನಂತರ ಒಡಿಶಾದ ಕೇಂದ್ರಾರಾ ಜಿಲ್ಲೆಯ ದಲಿತ ವ್ಯಕ್ತಿಯೊಬ್ಬ ತನ್ನ ಕುಟುಂಬದೊಂದಿಗೆ ಶೌಚಾಲಯದಲ್ಲಿ ವಾಸಿಸುತ್ತಿರುವ ಸಂಗತಿ ಈಗ ಬೆಳಕಿಗೆ ಬಂದಿದೆ.

Updated: May 18, 2019 , 03:24 PM IST
ಫೋನಿಯಲ್ಲಿ ಮನೆ ಕೊಚ್ಚಿ ಹೋದ ನಂತರ ಶೌಚಾಲಯದಲ್ಲಿ ವಾಸಿಸುತ್ತಿರುವ ಕುಟುಂಬ..!

ನವದೆಹಲಿ: ಫೋನಿ ಚಂಡಮಾರುತದಲ್ಲಿ ಮನೆ ಕೊಚ್ಚಿ ಹೋದ ನಂತರ ಒಡಿಶಾದ ಕೇಂದ್ರಾರಾ ಜಿಲ್ಲೆಯ ದಲಿತ ವ್ಯಕ್ತಿಯೊಬ್ಬ ತನ್ನ ಕುಟುಂಬದೊಂದಿಗೆ ಶೌಚಾಲಯದಲ್ಲಿ ವಾಸಿಸುತ್ತಿರುವ ಸಂಗತಿ ಈಗ ಬೆಳಕಿಗೆ ಬಂದಿದೆ.

ರಾಘುಡಿಪುರ್ ಗ್ರಾಮದ ದಿನಗೂಲಿ ಕಾರ್ಮಿಕನಾಗಿರುವ ಖಿರೊದ್ ಜೆನಾ ಸ್ವಚ್ ಭಾರತ್ ಮಿಷನ್ ಅಡಿಯಲ್ಲಿ 7 ಅಡಿ x 6 ಅಡಿ ವಿಸ್ತೀರ್ಣ ದಲ್ಲಿ ನಿರ್ಮಿಸಲಾಗಿರುವ ಶೌಚಾಲಯದಲ್ಲಿ ಜೀವನವನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ."ಚಂಡಮಾರುತವು ನನ್ನ ಮನೆಯನ್ನು ನಾಶಗೊಳಿಸಿತು. ಆದರೆ ಶೌಚಾಲಯವು ನಮ್ಮನ್ನು ಉಳಿಸಿಕೊಂಡಿತು, ನನಗೆ ಈಗ ಎಲ್ಲಿಯೂ ಹೋಗಲು ಜಾಗವಿಲ್ಲ ಎರಡು ದಿನಗಳಿಂದ ಶೌಚಾಲಯವು ಆಶ್ರಯ ಮನೆಯಾಗಿ ಮಾರ್ಪಟ್ಟಿದೆ. ನಾವು ಇಲ್ಲಿ ಎಷ್ಟು ಕಾಲ ಉಳಿಯುತ್ತೇವೆಂದು ನನಗೆ ಗೊತ್ತಿಲ್ಲ" ಎಂದು ಆ ವ್ಯಕ್ತಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. 

ಚಂಡಮಾರುತವು ತನ್ನ ಜೀವನವನ್ನು ಸಂಪೂರ್ಣವಾಗಿ ನಾಶಗೊಳಿಸಿದೆ ಎಂದು ಹೇಳಿರುವ ಅವರು ಮನೆ ಮರುನಿರ್ಮಾಣ ಮಾಡಲು ತಮ್ಮಲ್ಲಿ ಯಾವುದೇ ಸಂಪನ್ಮೂಲಗಳಿಲ್ಲ.ಮನೆಯನ್ನು ಪುನಃ ನಿರ್ಮಿಸಲು ಸೈಕ್ಲೋನ್ ಮರುಸ್ಥಾಪನೆ ಅನುದಾನಕ್ಕಾಗಿ ಕಾಯುವುದೊಂದೆ ದಾರಿ ಎಂದು ಹೇಳಿದ್ದಾರೆ. ಅಧಿಕಾರಿಗಳು ನನಗೆ ಚಂಡಮಾರುತದ ಹಾನಿ ಪರಿಹಾರವನ್ನು ನೀಡುವವರೆಗೂ ಶೌಚಾಲಯವು ತಮ್ಮ ಮನೆಯಾಗಿ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.