close

News WrapGet Handpicked Stories from our editors directly to your mailbox

ತಿರುಪತಿ ಭಕ್ತರೋಬ್ಬರಿಂದ ದೇವಸ್ಥಾನಕ್ಕೆ 2.25 ಕೋಟಿ ಮೌಲ್ಯದ ಆಭರಣ ಅರ್ಪಣೆ

ತಮಿಳುನಾಡಿನ ಭಗವಾನ್ ಬಾಲಾಜಿಯ ಭಕ್ತರೊಬ್ಬರು ಇಲ್ಲಿನ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ 2.25 ಕೋಟಿ ರೂ.ಮೌಲ್ಯದ ಆಭರಣಗಳನ್ನು ಧಾನ ಮಾಡಿದ್ದಾರೆ.

Updated: Jun 15, 2019 , 06:10 PM IST
ತಿರುಪತಿ ಭಕ್ತರೋಬ್ಬರಿಂದ ದೇವಸ್ಥಾನಕ್ಕೆ 2.25 ಕೋಟಿ ಮೌಲ್ಯದ ಆಭರಣ ಅರ್ಪಣೆ
photo: ani

ನವದೆಹಲಿ: ತಮಿಳುನಾಡಿನ ಭಗವಾನ್ ಬಾಲಾಜಿಯ ಭಕ್ತರೊಬ್ಬರು ಇಲ್ಲಿನ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ 2.25 ಕೋಟಿ ರೂ.ಮೌಲ್ಯದ ಆಭರಣಗಳನ್ನು ಧಾನ ಮಾಡಿದ್ದಾರೆ.

ತಮಿಳುನಾಡಿನ ನಿವಾಸಿ ತಂಗಡೋರೈ ಅವರು ಶನಿವಾರ "ಸುಪ್ರಭಾತ  ಸೇವಾ" ಸಂದರ್ಭದಲ್ಲಿ ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ಅಧಿಕಾರಿಗಳಿಗೆ "ಅಭಯ ಹಸ್ತಂ" ಮತ್ತು "ಕಾಟಿ ಹಸ್ತಮ್" ಆಭರಣಗಳನ್ನು ಅರ್ಪಿಸಿದರು. ಎರಡು ಚಿನ್ನದ ಕೈಗಳು ತಲಾ 6 ಕಿ.ಗ್ರಾಂ ತೂಗುತ್ತವೆ.

ಶುಕ್ರವಾರದಂದು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಅರ್ಜುನ್ ರಾಮ್ ಮೇಘವಾಲ್ ಅವರು ಇಲ್ಲಿನ ಭಗವಾನ್ ಬಾಲಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.