ನವ ದೆಹಲಿ : ಆಧಾರ್ ವಿವರಗಳನ್ನು ಬಹಳ ಸುಲಭಾವಾಗಿ ಪಡೆಯಬಹುದು ಎಂಬ ವರದಿಯನ್ನು ಭಾರತ ಸರ್ಕಾರದ ಯುಐಎಡಿಎ ಗುರುವಾರ ಸಾರಾಸಗಟಾಗಿ ತಳ್ಳಿ ಹಾಕಿದ್ದ ಬೆನ್ನಲ್ಲೇ, "ಆಧಾರ್ ಡಾಟಾಬೇಸ್ ಸುರಕ್ಷಿತವಲ್ಲ; ಅದನ್ನು ಹ್ಯಾಕರ್ಗಳು ಸುಲಭವಾಗಿ ಕದಿಯಬಹುದು" ಎಂದು ಅಮೆರಿಕದ ವ್ಹಿಸಲ್ ಬ್ಲೋವರ್ ಎಡ್ವರ್ಡ್ ಸ್ನೋಡೆನ್ ಹೇಳಿದ್ದಾರೆ.
ಸಿಬಿಎಸ್ ಪತ್ರಕರ್ತ ಝಾಕ್ ವಿಟೇಕರ್ ಅವರು ಬಝ್ಫೀಡ್ ವರದಿಗೆ ನೀಡಿರು ಪ್ರತಿಕ್ರಿಯೆಗೆ ರೀ-ಟ್ವೀಟ್ ಮಾಡಿರುವ ಸ್ನೋಡನ್, "ನಾಗರಿಕರ ಖಾಸಗಿ ಮಾಹಿತಿಗಳನ್ನು ಸುರಕ್ಷಿತವಾಗಿ ಕಾಪಾಡಬೇಕು ಎಂಬುದು ಎಲ್ಲಾ ಸರ್ಕಾರಗಳ ಸಹಜ ಪವೃತ್ತಿ ಮತ್ತು ಆಶಯವಾಗಿರುತ್ತದೆ. ಆದರೆ ಮಾಹಿತಿ ದುರ್ಬಳಕೆಗೆ ಯಾವುದೇ ಕಾನೂನು ಒಂದು ಅಡಚಣೆ ಅಲ್ಲ ಎಂಬುದು ಇತಿಹಾಸದಿಂದ ತಿಳಿಯುತ್ತದೆ" ಎಂದು ಅವರು ಹೇಳಿದ್ದಾರೆ.
It is the natural tendency of government to desire perfect records of private lives. History shows that no matter the laws, the result is abuse. https://t.co/7HSQSZ4T3f
— Edward Snowden (@Snowden) January 4, 2018
ವಿಟೇಕರ್ ಅವರು ಈ ಮೊದಲು ಭಾರತವು ತನ್ನ 1.2 ಶತಕೋಟಿ ಜನರ ಖಾಸಗಿ ಮಾಹಿತಿಗಳ ಆಧಾರ್ ಡಾಟಾ ಬೇಸ್ ಹೊಂದಿದ್ದು, ಅದಕ್ಕೆ ಕನ್ನ ಹಾಕಲಾಗಿದೆ ಎಂದು ವರದಿಯಾಗಿದೆ. ಆ್ಯಡ್ಮಿನ್ ಖಾತೆಗಳು ಸುಲಭದಲ್ಲಿ ಕನ್ನ ಹಾಕುವವರ ವಶವಾಗುತ್ತವೆ ಮತ್ತು ಮಾರಲ್ಪಡುತ್ತವೆ" ಎಂದು ಎಚ್ಚರಿಸಿದ್ದರು.
ICYMI. India has a national ID database with the private information of nearly 1.2 billion nationals. It's reportedly been breached. Admin accounts can be made and access can be sold to the database, reports BuzzFeed. https://t.co/DtRIcMQ3O1
— Zack Whittaker (@zackwhittaker) January 4, 2018
ಆಧಾರ್ ಮಾಹಿತಿ ರಕ್ಷಣೆ ಕುರಿತು ಟ್ರಿಬ್ಯೂನ್ ಪತ್ರಿಕೆ ನಡೆಸಿದ ತನಿಖೆಯಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಯಾರು ಬೇಕಾದರೂ ಪ್ರವೇಶಿಸಿ ಮಾಹಿತಿ ಪಡೆಯಬಹುದು ಎಂಬುದು ತಿಳಿದುಬಂದಿದೆ.
ಈ ಕುರಿತು ವರದಿ ಮಾಡಿರುವ `ದ ಟ್ರಿಬ್ಯೂನ್' ಪತ್ರಿಕೆ, ತನ್ನ ವರದಿಗಾರರೊಬ್ಬರು ವಾಟ್ಸಾಪ್ನಲ್ಲಿ ಅನಾಮಿಕ ಮಾರಾಟಗಾರರ ಮೂಲಕ, ಪೇಟಿಎಂ ನಲ್ಲಿ ಏಜಂಟ್ ಒಬ್ಬರಿಗೆ ಕೇವಲ 500 ರೂ. ಪಾವತಿಸಿ ಆಧಾರ್ ಡಾಟಾ ಖರೀದಿಸಿರುವುದಾಗಿ ತಿಳಿಸಿತ್ತು.
ತನ್ನ ವರದಿಗಾರರು ವಾಟ್ಸಾಪ್ನಲ್ಲಿ ಅನಾಮಿಕ ಮಾರಾಟಗಾರರ ಮೂಲಕ, ಪೇಟಿಎಂ ನಲ್ಲಿ ಏಜಂಟ್ ಒಬ್ಬರಿಗೆ ಕೇವಲ 500 ರೂ. ಪಾವತಿಸಿ ಕೇವಲ 10 ನಿಮಿಷಗಳಲ್ಲಿ ಆಧಾರ್ ಡಾಟಾ ಖರೀದಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿತ್ತು.
ನಂತರ ಆ ಏಜಂಟ್ ಪತ್ರಿಕಾ ವರದಿಗಾರನಿಗೆ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಕೊಟ್ಟಿದ್ದಾನೆ. ಇದರ ಮೂಲಕ ನೂರು ಕೋಟಿ ಆಧಾರ್ ನಂಬರ್ಗಳಿಗೆ ಅನಿರ್ಬಂಧಿತ ಸಂಪರ್ಕ ದೊರಕಿ ಅವುಗಳಲ್ಲಿನ ಖಾಸಗಿ ಮಾಹಿತಿಗಳನ್ನು ತನಿಖಾ ವರದಿಗಾರ ಪಡೆದಿರುವುದಾಗಿ "ದ ಟ್ರಿಬ್ಯೂನ್' ವರದಿ ತಿಳಿಸಿತ್ತು.
ಲಾಗ್ ಇನ್ ಗೇಟ್ವೇ ಮೂಲಕ ಯಾರೇ ಆದರೂ ಯಾವುದೇ ನಿರ್ದಿಷ್ಟ ಆಧಾರ್ ನಂಬರ್ ಅನ್ನು ಪೋರ್ಟಲ್ನಲ್ಲಿ ಪಡೆಯಬಹುದಾಗಿದ್ದು, ಆ ನಂಬರ್ನ ವ್ಯಕ್ತಿಯ ಹೆಸರು, ವಿಳಾಸ, ಪೋಸ್ಟಲ್ ಕೋಡ್, ಫೋಟೋ, ಫೋನ್ ನಂಬರ್, ಇ-ಮೇಲ್ ವಿಳಾಸ ಇತ್ಯಾದಿಗಳನ್ನು ಸುಲಭದಲ್ಲಿ ಪಡೆಯಬಹುದಾಗಿದೆ. ಅಲ್ಲದೆ, ಆ ಏಜೆಂಟ್ ಗೆ ಹೆಚ್ಚುವರಿ 300 ರೂ.ಗಳನ್ನು ನೀಡಿದರೆ ಆತ ಆಧಾರ್ ಕಾರ್ಡ್ ಮುದ್ರಿಸುವ ಸಾಫ್ಟ್ ವೇರ್ ಅನ್ನು ಕೂಡ ಆತ ಒದಗಿಸುತ್ತಾನೆ ಎಂದು ಆ ಪತ್ರಿಕೆ ವರದಿ ಮಾಡಿತ್ತು.
ಆದರೆ ಯುಐಎಡಿಎ ಈ ಮಾಧ್ಯಮ ವರದಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದು, ಈ ವರದಿ ಸುಳ್ಳು ಎಂದು ಗುರುವಾರ ಹೇಳಿಕೆ ನೀಡಿತ್ತು.